ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎನ್ನುವ ಪ್ರೇಕ್ಷಕರ ಕೊರಗು ದೂರವಾಗುವ ಕಾಲ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಒಳ್ಳೆಯಚಿತ್ರಗಳು ಕನ್ನಡದಲ್ಲೂ ಬರುವ ಸೂಚನೆ ವರ್ಷದ ಆರಂಭದಲ್ಲೇ ಸಿಕ್ಕಿದೆ. ಕಳೆದ ವಾರ ತೆರೆ ಕಂಡ 11 ಚಿತ್ರಗಳ ಪೈಕಿ ‘ಜಂಟಲ್‌ಮನ್’, ‘ದಿಯಾ’,‘ಮಾಲ್ಗುಡಿ ಡೇಸ್’ ಹಾಗೂ ‘ಮತ್ತೆ ಉದ್ಭವ’ ಚಿತ್ರಗಳಿಗೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.
ಅದರಲ್ಲೂ ಹೊಸಬರ ‘ದಿಯಾ’ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಯಶ್ ಹಾಗೂ ಪುನೀತ್ ಈ ಸಿನಿಮಾ ಬಗ್ಗೆ ಒಳ್ಳೆಯ ಮಾತು ಹೇಳಿದ್ದಾರೆ. ಸಿನಿಮಾ ನೋಡಿ, ಹೊಸಬರನ್ನು ಪ್ರೋತ್ಸಾಹಿಸಿ ಅಂತ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಈ ನಡುವೆ ರಕ್ಷಿತ್ ಶೆಟ್ಟಿಭಾನುವಾರ ಸಿನಿಮಾ ನೋಡಿ ಥ್ರಿಲ್ ಆಗಿದ್ದಾರೆ. ‘ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರೋದಿಲ್ಲ ಅಂತ ಕೆಲವ್ರು ಆಗಾಗ ಹೇಳ್ತಾ ಇರ್ತಾರೆ. ಆದರೆ ಒಳ್ಳೆಯ ಸಿನಿಮಾ ಬಂದಾಗ ನೋಡಿ ಗೆಲ್ಲಿಸಿ’ ಅಂತ ನಟ ರಕ್ಷಿತ್ ಶೆಟ್ಟಿ‘ದಿಯಾ ’ಸಿನಿಮಾ ಕುರಿತು ಅನಿಸಿಕೆ ಹಂಚಿಕೊಂಡಿದ್ದಾರೆ.
ಮರಳಿ ಬಂದರು 6-2=5 ಖ್ಯಾತಿಯ ಅಶೋಕ್!
ವಾಪಸ್ ಹಣ ನಾನ್ ಕೋಡ್ತೀನಿ
‘ಇದೊಂದು ಒಳ್ಳೆಯ ಲವ್ ಸ್ಟೋರಿ. ಅದನ್ನು ತಕ್ಷಣಕ್ಕೆ ವರ್ಣಿಸಲು ನನ್ನಿಂದಾಗದು. ಅಷ್ಟುಚೆನ್ನಾಗಿದೆ. ಚಿತ್ರತಂಡ ಸಾಕಷ್ಟುಶ್ರಮ ಹಾಕಿ ಇಂತಹ ಸಿನಿಮಾ ಮಾಡಿದೆ. ಇಂತಹ ಸಿನಿಮಾಗಳು ಗೆಲ್ಲಬೇಕಿದೆ. ಒಳ್ಳೆಯ ಸಿನಿಮಾಗಳು ಗೆದ್ದಾಗ ಚಿತ್ರೋದ್ಯಮಕ್ಕೂ ಒಳ್ಳೆಯದಾಗುತ್ತೆ. ಒಳ್ಳೆಯ ಸಿನಿಮಾ ಮಾಡುವ ಪ್ರಯತ್ನಗಳು ಹೆಚ್ಚಾಗುತ್ತವೆ. ಎಲ್ಲಾ ಸಿನಿಮಾ ಆಸಕ್ತರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಬೇಕಿದೆ. ಸಿನಿಮಾ ಚೆನ್ನಾಗಿಲ್ಲ ಅಂತಂದ್ರೆ ವಾಪಸ್ ಹಣ ಕೊಡುವುದಕ್ಕೆ ನಾನು ರೆಡಿಯಿದ್ದೇನೆ’ಅಂತ ರಕ್ಷಿತ್ ಶೆಟ್ಟಿಹೇಳಿದ್ದಾರೆ.
ಸಮ್ಮರ್‌ನಲ್ಲಿ ದೊಡ್ಡ ಚಿತ್ರಗಳ ಸಮರ; ಸ್ಟಾರ್‌ಗಳಿಲ್ಲದ ಮೊದಲ ಮೂರು ತಿಂಗಳು!
ಒಳ್ಳೆಯ ಸಿನಿಮಾಕ್ಕೆ ಬೆಂಬಲ ನೀಡಿ...
ಮಾಲ್ಗುಡಿ ಡೇಸ್ ಹಾಗೂ ದಿಯಾ ಚಿತ್ರಕ್ಕೆ ಪುನೀತ್ ರಾಜ್‌ಕುಮಾರ್ ಸಾಥ್ ನೀಡಿದ್ದಾರೆ. ಸೋಷಲ್ ಮೀಡಿಯಾದಲ್ಲಿ ಈ ಚಿತ್ರಗಳ ಪೋಸ್ಟರ್ ಪೋಸ್ಟ್ ಮಾಡುವ ಮೂಲಕ ಒಳ್ಳೆಯ ಸಿನಿಮಾ ಬಂದಾಗ ಪ್ರೇಕ್ಷಕರು ನೋಡಿ ಹರಸಬೇಕಿದೆ ಎಂದು ವಿನಂತಿಸಿಕೊಂಡಿದ್ದಾರೆ.