ಕೇರಳದಲ್ಲಿ ಅರಣ್ಯ ಸೆಟ್‌; ಶುರುವಾಯ್ತು 'ಮದಕರಿ ನಾಯಕ' ಶೂಟಿಂಗ್!

Suvarna News   | Asianet News
Published : Feb 11, 2020, 08:26 AM ISTUpdated : Feb 17, 2020, 05:09 PM IST
ಕೇರಳದಲ್ಲಿ ಅರಣ್ಯ ಸೆಟ್‌; ಶುರುವಾಯ್ತು 'ಮದಕರಿ ನಾಯಕ' ಶೂಟಿಂಗ್!

ಸಾರಾಂಶ

ದರ್ಶನ್‌ ಐತಿ​ಹಾ​ಸಿಕ ಸಿನಿಮಾ ಪರ್ವ ಶುರು​ವಾ​ಗಿದೆ. ಬಹು ನಿರೀ​ಕ್ಷೆಯ ‘ರಾಜ​ವೀರ ಮದ​ಕರಿ ನಾಯ​ಕ’ ಚಿತ್ರಕ್ಕೆ ದೂರದ ಕೇರ​ಳದ ಅರಣ್ಯ ಪ್ರದೇ​ಶ​ದಲ್ಲಿ ಬೃಹತ್‌ ಸೆಟ್‌​ಗ​ಳನ್ನು ಹಾಕಿ ಚಿತ್ರೀ​ಕ​ರಣ ಮಾಡಲು ಸಜ್ಜಾ​ಗಿದ್ದು, ಈಗಾ​ಗಲೇ ಚಿತ್ರ​ತಂಡ ಕೇರಳಾಗೆ ತರ​ಳಿದೆ. 

ರಾಜೇಂದ್ರ ಸಿಂಗ್‌ ಬಾಬು ನಿರ್ದೇ​ಶಿಸಿ, ರಾಕ್‌​ಲೈನ್‌ ವೆಂಕ​ಟೇಶ್‌ ನಿರ್ಮಾ​ಣದ ಈ ಚಿತ್ರದ ಮೂಲಕ ಚಿತ್ರವಿದು. ​ದು​ರ್ಗದ ಕೋಟೆ ನಾಡಿನ ದೊರೆ ಮದ​ಕರಿ ನಾಯ​ಕನ ಜೀವನ ಪುಟ​ಗ​ಳನ್ನು ಆಧ​ರಿ​ಸಿದ ಸಿನಿಮಾ. ಕತೆ​ಗಾರ ಬಿ ಎಲ್‌ ವೇಣು ಅವರೇ ಕತೆ, ಚಿತ್ರ​ಕತೆ ಹಾಗೂ ಸಂಭಾ​ಷಣೆ ಬರೆ​ದಿ​ದ್ದಾರೆ.

ಒಂದು ವಾರ ಚಿತ್ರೀ​ಕ​ರ​ಣ: ಚಿತ್ರ​ತಂಡ ಪ್ಲಾನ್‌ ಮಾಡಿ​ಕೊಂಡಿ​ರು​ವಂತೆ ಒಂದು ವಾರ ಕೇರ​ಳ​ದಲ್ಲಿ ಚಿತ್ರೀ​ಕ​ರಣ ನಡೆ​ಯ​ಲಿದೆ. ಫೆ.16ರ ಮಧ್ಯ​ರಾ​ತ್ರಿ​ಯಿಂದ ದರ್ಶನ್‌ ಅವರ ಹುಟ್ಟುಹಬ್ಬ ಸಂಭ್ರಮ ಶುರು​ವಾ​ಗ​ಲಿದ್ದು, ಹುಟ್ಟುಹಬ್ಬಕ್ಕೆ ಬೆಂಗ​ಳೂ​ರಿಗೆ ವಾಪಸ್ಸು ಬರ​ಲಿ​ದ್ದಾರೆ.

ದರ್ಶನ್ ಲೈಫಲ್ಲಿ ಎಂದೂ ಮರೆಯದ ದಿನವಿದು!

ಗುರು​ಕು​ಲದ ಸೆಟ್‌: ಮೊದಲ ಹಂತದ ಚಿತ್ರೀ​ಕ​ರ​ಣ​ಕ್ಕಾಗಿ ಕೇರ​ಳ​ದಲ್ಲಿ ಗುರು​ಕು​ಲದ ಸೆಟ್‌ ಹಾಕ​ಲಾ​ಗಿದ್ದು, ಈ ಸೆಟ್‌​ನಲ್ಲೇ ಚಿತ್ರೀ​ಕ​ರಣ ನಡೆ​ಯ​ಲಿದೆ. ಗುರು​ಕುಲ, ಅದಕ್ಕೆ ತಕ್ಕಂತೆ ಗಿರಿ​ಜನರ ಕಾಲೋನಿ, ನೂರಾರು ಕುಟುಂಬ​ಗಳು ವಾಸಿ​ಸುವ ತಾಂಡ, ಅಲ್ಲಿ​ರುವ ಒಂದು ಸಮು​ದಾಯ ಹೀಗೆ ಹಲವು ಅಂಶ​ಗ​ಳನ್ನು ಕ್ರಿಯೇಟ್‌ ಮಾಡಿ​ರುವ ಸೆಟ್‌ ಇದಾ​ಗಿದ್ದು, ಮೊದಲ ಹಂತ​ವಾಗಿ ಐದು ದಿನ​ಗ​ಳ ಚಿತ್ರೀ​ಕ​ರಣ ಪ್ಲಾನ್‌ ಮಾಡಿ​ಕೊಂಡಿ​ದ್ದಾರೆ.

ಗೂಗಲ್‌ನಲ್ಲೂ ದರ್ಶನ್ ಮುಂದು; ಅಭಿಮಾನಿಗಳು ಏನೆಲ್ಲಾ ಸರ್ಚ್‌ ಮಾಡ್ತಾರೆ ನೋಡಿ!

ಸಮರ ಕಲಿ​ಯುವ ತಾಣ: ಮದ​ಕರಿ ನಾಯಕ ಸಿಂಹಾ​ಸನ ಏರುವ ಮುನ್ನ ರಾಜ​ನಾ​ಗಲು ಬೇಕಾ​ಗುವ ತಯಾರಿ ಮಾಡಿ​ಕೊ​ಳ್ಳು​ತ್ತಾನೆ. 12 ವರ್ಷಕ್ಕೆ ಮದ​ಕ​ರಿ​ನಾ​ಯಕ ಸಿಂಹಾ​ಸನ ಏರು​ತ್ತಾನೆಂಬುದು ಇತಿ​ಹಾ​ಸದ ಪುಟ​ಗ​ಳು ಹೇಳು​ತ್ತವೆ. ಹಾಗೆ ತೀರಾ ಚಿಕ್ಕ ವಯ​ಸ್ಸಿಗೆ ರಾಜ​ನಾಗಿ, ತನ್ನನ್ನು ತಾನು ರಕ್ಷಿ​ಸಿ​ಕೊ​ಳ್ಳು​ವು​ದಕ್ಕೆ ಮದ​ಕರಿ ನಾಯ​ಕ​ನಿಗೆ ಸಕಲ ವಿದ್ಯೆ​ಗ​ಳನ್ನೂ ಕೇರ​ಳ​ದಲ್ಲಿ ಕಲಿ​ಸಿ​ಕೊ​ಡ​ಲಾ​ಗು​ತ್ತದೆ. ಇದೇ ಭಾಗದ ಚಿತ್ರೀ​ಕ​ರಣ ಕೇರ​ಳದ ಗುರು​ಕುಲ ಸೆಟ್‌​ನಲ್ಲಿ ನಡೆ​ಯು​ತ್ತಿದೆ. ಬಾಲ್ಯ ಮತ್ತು ಯೌವ್ವ​ನದ ದಿನ​ಗಳ ದೃಶ್ಯ​ಗ​ಳನ್ನು ಚಿತ್ರೀ​ಕ​ರಣ ಮಾಡುವ ಯೋಜನೆ ನಿರ್ದೇ​ಶ​ಕ​ರದ್ದು. ‘ಮದ​ಕರಿ ನಾಯಕ ನಾಯ​ಕರ ರಾಜ ಅಲ್ಲ, ಚಿತ್ರ​ದು​ರ್ಗದ ದೊರೆ, ಆಗಿನ ಸಾಮ್ರಾ​ಜ್ಯದ ರಾಜ’ ಎಂದು ಹೇಳುವ ಈ ಚಿತ್ರ​ದಲ್ಲಿ ದರ್ಶನ್‌ ರಾಜ​ವೀರ ಮದ​ಕರಿ ನಾಯ​ಕ​ನಾಗಿ ಹೇಗೆ ಮಿಂಚ​ಲಿ​ದ್ದಾ​ರೆಂಬ ಕುತೂ​ಹಲ ಎಲ್ಲ​ರಿಗೂ ಶುರು​ವಾ​ಗಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mruthyudevathe Movie Review: ಒಂದು ರಾತ್ರಿ, ನಾಲ್ಕು ಜನ, ಭಯಾನಕ ಸತ್ಯ, ಒಂದು ರಹಸ್ಯ!
Darshan-Pavithra Gowda: ದರ್ಶನ್ ಕೈಯಲ್ಲಿ ಪುಸ್ತಕ, ಪವಿತ್ರಾ ಕೈಯಲ್ಲಿ ಪೆನ್ನು; ಜೈಲಿನಲ್ಲೇ ಶುರುವಾಯ್ತು ಹೊಸ ಕಥೆ 'ಪವಿತ್ರ ದರ್ಶನ'..!