ಮದ್ವೆಗೂ ಮೊದ್ಲು ಬ್ಯಾಂಕಾಕ್‌ಗೆ ಹೋಗೋದು ತಪ್ಪು ಎಂದಿದ್ದ ಪೃಥ್ವಿ ಅಂಬಾರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

By Shriram Bhat  |  First Published Mar 10, 2024, 5:41 PM IST

ನಟ ಪೃಥ್ವಿ ಅಂಬಾರ್ ಕೈಯಲ್ಲಿ ಬಹಳಷ್ಟು ಸಿನಿಮಾಗಳಿವೆ. ಹೊಸ ಹೊಸ ನಿರ್ದೇಶಕರ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟ ಪೃಥ್ವಿ ನಟಿಸುತ್ತಿದ್ದಾರೆ. ದಿಯಾ ಸಿನಿಮಾ ಥಿಯೇಟರ್‌ನಲ್ಲಿ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಆದರೆ, ಒಟಿಟಿ ಪ್ಲಾಟ್‌ಫಾರಂನಲ್ಲಿ ಸಿನಿಮಾ ಕ್ಲಿಕ್ ಆಗಿತ್ತು.


ನಟ ಪೃಥ್ವಿ ಅಂಬಾರ್ ತಮ್ಮ ಮದುವೆ ಟೈಮಲ್ಲಿ ನಡೆದ ಘಟನೆಯೊಂದನ್ನು ನಿರೂಪಕಿ ಅನುಶ್ರೀ ಜತೆ ಹಂಚಿಕೊಂಡಿದ್ದಾರೆ. ಪೃಥ್ವಿ ಅಂಬಾರ್ 'ನನ್ ಮದ್ವೆ ಟೈಮಲ್ಲಿ ನಡೆದ ಪ್ರಸಂಗ. ನನ್ ಇನ್‌ಸ್ಟಾಗ್ರಾಂ ಪಾಸ್‌ವರ್ಡ್‌ ನನ್ ವೈಫ್ ಹತ್ರ ಇತ್ತು. ನನ್ನ ಕ್ಲೋಸ್ ಫ್ರಂಡ್‌ ಒಬ್ಬ ನಂಗೆ ಮೆಸೇಜ್ ಮಾಡಿದ್ದ. 'ಮಗಾ, ಮದ್ವೆ ಮೊದ್ಲು ಬ್ಯಾಂಕಾಕ್ ಹೋಗೋಣ' ಅಂತ. ನಂಗೆ ಗೊತ್ತಿತ್ತು ಅವ್ಳ ಹತ್ರ ಪಾಸ್‌ ವರ್ಡ್ ಇದೆ ಅಂತ. ಅದಕ್ಕೇ ನಾನು 'ಇಲ್ಲ ಮಗಾ, ಅದೆಲ್ಲ ತಪ್ಪು' ಅಂತ ಮೆಸೇಜ್ ಮಾಡಿದೆ. 

ನಂಗೆ ಗೊತ್ತಿತ್ತಲ್ಲಾ, ಅದಕ್ಕೆ ನಾನು ನನ್ನ ಫ್ರಂಡ್‌ಗೆ ಕಾಲ್ ಮಾಡಿ ;ಹೀಗೆ, ಹೀಗೆ.. ನನ್ ಪಾಸ್‌ವರ್ಡ್‌ ನನ್ನ ಹೆಂಡ್ತಿ ಹತ್ರ ಇದೆ' ಅಂತ ಹೇಳಿದೆ. ನೆಕ್ಸ್ಟ್‌ ಅವ್ನು ಆ ಮೆಸೇಜನ್ನ ಡಿಲೀಟ್ ಮಾಡಿ 'ಅದೆಲ್ಲ ತಪ್ಪು' ಅಂತ ರೀ-ಮೆಸೇಜ್ ಮಾಡಿದ. 'ತಕ್ಷಣ ಅವ್ಳು ಕಾಲ್ ಮಾಡಿ ನಿನ್ ಮೆಸೇಜ್ ನಾನು ನೋಡಿ ಆಗಿದೆ' ಅಂತ ಹೇಳಿದ್ಳು..' ಎಂದು ನಟ ಪೃಥ್ವಿ ಅಂಬಾರ್ ಹೇಳಿದರು. ಅದನ್ನು ಕೇಳಿ ಪಕ್ಕದಲ್ಲಿದ್ದ ಅನುಶ್ರೀ ಬಿದ್ದು ಬಿದ್ದು ನಗುತ್ತಿದ್ದರು. 

Tap to resize

Latest Videos

undefined

ಕನ್ನಡ ಭಾಷೆ ಬಗ್ಗೆ ಗುರುಪ್ರಸಾದ್ ಹೇಳಿದ್ದೇನು; ಅಪಭ್ರಂಶವಿಲ್ಲದೇ ಮಾತನಾಡುವ ಬಗ್ಗೆ ಏನಂದ್ರು?

ಅಂದಹಾಗೆ, ನಟ ಪೃಥ್ವಿ ಅಂಬಾರ್ 'ದಿಯಾ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಟರಾಗಿ ಮಿಂಚುತ್ತಿದ್ದಾರೆ. ಶುಗರ್‌ಲೆಸ್‌, ದೂರದರ್ಶನ, ಪೆಂಟಗಾನ್, ಡಿಕೆ ಬೋಸ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪೃಥ್ವಿ ಅಂಬಾರ್, ಸದ್ಯ ಜೂನಿ, ಫಾರ್ ರಿಜಿಸ್ಟ್ರೇಷನ್ ಮುಂತಾದ ಸಿನಿಮಾಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ದಿಯಾ ಸಿನಿಮಾ ಬಳಿಕ ನಟ ಪೃಥ್ವಿ ಅಂಬಾರ್ ಅವರಿಗೆ ಯಾವುದೇ ಸಿನಿಮಾ ಹೇಳಿಕೊಳ್ಳುವಂಥ ಯಶಸ್ಸು ತಂದುಕೊಟ್ಟಿಲ್ಲ. 

ಮಹೇಶ್ ಬಾಬು ಜತೆ ಕಿಸ್ ಮಾಡಿದ್ದೀರಾ ಎಂದ ಫ್ಯಾನ್ಸ್‌ಗೆ ರಶ್ಮಿಕಾ ಮಂದಣ್ಣ ಏನಂದ್ರು ನೋಡಿ!

ಆದರೂ ನಟ ಪೃಥ್ವಿ ಅಂಬಾರ್ ಕೈಯಲ್ಲಿ ಬಹಳಷ್ಟು ಸಿನಿಮಾಗಳಿವೆ. ಹೊಸ ಹೊಸ ನಿರ್ದೇಶಕರ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟ ಪೃಥ್ವಿ ನಟಿಸುತ್ತಿದ್ದಾರೆ. ದಿಯಾ ಸಿನಿಮಾ ಥಿಯೇಟರ್‌ನಲ್ಲಿ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಆದರೆ, ಒಟಿಟಿ ಪ್ಲಾಟ್‌ಫಾರಂನಲ್ಲಿ ಸಿನಿಮಾ ಕ್ಲಿಕ್ ಆಗಿತ್ತು. ಕೊರೋನಾ ಟೈಮ್‌ನಲ್ಲಿ ಬಿಡುಗಡೆಯಾಗಿದ್ದ ದಿಯಾ ಸಿನಿಮಾವನ್ನು ಸಿನಿಪ್ರೇಕ್ಷಕರು ಮನೆಯಲ್ಲಿ ಕುಳಿತು ಒಟಿಟಿ ಮೂಲಕ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ ಹೇಳಬೇಕು ಎಂದರೆ, ನಟ ಪೃಥ್ವಿ ಅಂಬಾರ್ ಕನ್ನಡದಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟ ಎನ್ನಬಹುದು. 

ಕುಬೇರನಾದ್ರೂ ಚೆನ್ನೈನಲ್ಲಿ ಭಿಕ್ಷೆ ಬೇಡುತ್ತಿರುವ ಧನುಷ್; ಪಕ್ಕದಲ್ಲಿ ರಶ್ಮಿಕಾ ಮಂದಣ್ಣ ಯಾಕೆ ಗುರೂ?

click me!