Bond Ravi ಡಿ. 9 ರಿಲೀಸ್; ಮಾಸ್‌ ಲುಕ್ ಹೊತ್ತು ಬರ್ತಿದ್ದಾನೆ ಪ್ರೀಮಿಯರ್ ಹೀರೋ

Published : Dec 05, 2022, 08:48 AM IST
Bond Ravi ಡಿ. 9 ರಿಲೀಸ್; ಮಾಸ್‌ ಲುಕ್ ಹೊತ್ತು ಬರ್ತಿದ್ದಾನೆ ಪ್ರೀಮಿಯರ್ ಹೀರೋ

ಸಾರಾಂಶ

ನಟ ಪ್ರಮೋದ್‌ ಕನ್ನಡದ ರವಿತೇಜ ಎಂದ ಮಾಸ್ತಿ. ಅದ್ಧೂರಿಯಾಗಿ ಬಿಡುಗಡೆಯಾಗಿತ್ತು ಬಾಂಡ್‌ರವಿ ಟ್ರೇಲರ್‌ ಬಿಡುಗಡೆ. 

ಮಾಸ್‌, ಕ್ಲಾಸ್‌ ಹಾಗೂ ಆ್ಯಕ್ಷನ್‌ ನೆರಳಿನಲ್ಲಿ ಮೂಡಿ ಬಂದಿರುವ ‘ಬಾಂಡ್‌ರವಿ’ ಚಿತ್ರದ ಟ್ರೇಲರ್‌ ಈಗಷ್ಟೆಬಿಡುಗಡೆ ಆಗಿದೆ. ಹೊಸ ನಿರ್ದೇಶಕರು, ನಟರು ಆಗಮಿಸಿ ಪ್ರಮೋದ್‌ ನಟನೆಯ ‘ಬಾಂಡ್‌ರವಿ’ ಚಿತ್ರಕ್ಕೆ ಶುಭ ಕೋರುವ ಮೂಲಕ ಟ್ರೇಲರ್‌ ಅನಾವರಣ ಮಾಡಿದರು. ಪ್ರಜ್ವಲ್‌ ನಿರ್ದೇಶನ, ನರಸಿಂಹಮೂರ್ತಿ ನಿರ್ಮಾಣದ ಈ ಚಿತ್ರವಿದು. ಇಲ್ಲಿ ಪ್ರಮೋದ್‌ ಅವರಿಗೆ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದಾರೆ. ಡಿ.9ಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ಚಿತ್ರದ ನಾಯಕ ಪ್ರಮೋದ್‌ ಮಾತನಾಡಿ, ‘ನಾನು ಇಲ್ಲಿ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಯಾಗಿ ನಟಿಸಿದ್ದೇನೆ. ಪವರ್‌ ಸ್ಟಾರ್‌ ಅಭಿಮಾನಿ ಕತೆ ಎಂದ ಮೇಲೆ ಪಕ್ಕಾ ಮಾಸ್‌- ಆ್ಯಕ್ಷನ್‌ ಇದ್ದೇ ಇರುತ್ತದೆ. ತುಂಬಾ ನಿರೀಕ್ಷೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ನಮ್ಮ ಬಾಂಡ್‌ ರವಿ ದೊಡ್ಡ ಬ್ರ್ಯಾಂಡ್‌ ಆಗುತ್ತದೆ. ಚಿತ್ರದಲ್ಲಿ ಹೊಸ ವಿಷಯ ಹೇಳಿದ್ದೇವೆ. ನನಗೆ ಕೊನೆಯ ತನಕ ನೆನಪಿನಲ್ಲಿ ಉಳಿಯುವ ಸಿನಿಮಾ ಇದಾಗಲಿದೆ. ಕತೆ ಕೇಳಿದಾಗಿಂದ ಬಾಂಡ್‌ ರವಿ ಪಾತ್ರ ನನ್ನನ್ನು ಕಾಡಿತ್ತು. ಅಷ್ಟುಇಷ್ಟವಾಗಿತ್ತು ಕತೆ. ಒಳ್ಳೆ ಕಂಟೆಂಟ್‌, ಒಳ್ಳೆ ಪಾತ್ರ ಎರಡೂ ನನಗೆ ಈ ಸಿನಿಮಾ ಮೂಲಕ ಸಿಕ್ಕಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ’ ಎಂದರು.

ಚಿತ್ರದ ನಾಯಕಿ ಕಾಜಲ್‌ ಕುಂದರ್‌ ಅವರಿಗೆ ಕತೆ ಕೇಳಿದಾಗ ಎಷ್ಟುಥ್ರಿಲ್ಲಾಗಿತ್ತೋ ಟ್ರೇಲರ್‌ ನೋಡಿದಾಗಲೂ ಅಷ್ಟೇ ಖುಷಿ ಮತ್ತು ಎಕ್ಸೈಟ್‌ ಆಗಿದೆಯಂತೆ. ಸಂಭಾಷಣೆಕಾರ ಮಾಸ್ತಿ ಮಾತನಾಡಿ, ‘ತೆರೆ ಮೇಲೆ ಪ್ರಮೋದ್‌ ಅವರನ್ನು ನೋಡಿದರೆ ನನಗೆ ತೆಲುಗಿನ ರವಿತೇಜ ನೆನಪಾಗುತ್ತಾರೆ. ತೆಲುಗಿನಲ್ಲಿ ಮಾಸ್‌ ಮಹಾರಾಜ ಎನಿಸಿಕೊಂಡವರು ನಟ ರವಿತೇಜ. ತುಂಬಾ ಅದ್ಭುತ ಕಲಾವಿದ. ನನ್ನ ಪ್ರಕಾರ ಪ್ರಮೋದ್‌ ನಮ್ಮ ಕನ್ನಡದ ರವಿತೇಜ ಇದ್ದಂತೆ. ಅದಕ್ಕೆ ಸಾಕ್ಷಿ ಈ ಬಾಂಡ್‌ ರವಿ ಚಿತ್ರದ ಟ್ರೇಲರ್‌. ತುಂಬಾ ಪೋರ್ಸ್‌ ಇರುವ ಕತೆ ಎಂಬುದು ಟ್ರೇಲರ್‌ ಹೇಳುತ್ತಿದೆ. ಪ್ರಮೋದ್‌ ರೀತಿಯ ನಟರು ಬೆಳೆದರು ನಿರ್ದೇಶಕರಿಗೆ ಕೆಲಸ ಸಿಗುತ್ತದೆ’ ಎಂದರು. ‘ನನಗೆ ನಿರ್ದೇಶಕನ ಸ್ಥಾನ ಕೊಟ್ಟಸಿನಿಮಾ ಬಾಂಡ್‌ ರವಿ. ನನಗಿಂತ ನನ್ನ ಕತೆ ಮೇಲೆ ನಂಬಿಕೆ ಇಟ್ಟು ತುಂಬಾ ಜನ ಇಲ್ಲಿಗೆ ಬಂದು ಹಾರೈಸಿದ್ದಾರೆ. ಸಿನಿಮಾ ನೋಡಿದ ಮೇಲೆ ಅವರ ಹಾರೈಕೆ ಮತ್ತು ನಿರೀಕ್ಷೆಗಳು ಸುಳ್ಳಾಗಲ್ಲ. ಇಂಥ ಕತೆ ಹಾಗೂ ನಿರೂಪಣೆ ಇರುವ ಚಿತ್ರವನ್ನು ನೀವು ನೋಡಿರಲು ಸಾಧ್ಯವಿಲ್ಲ. ಖಂಡಿತ, ಕನ್ನಡಕ್ಕೆ ಇದೊಂದು ಹೊಸ ಪ್ರಯತ್ನ. ನನ್ನ ಮೊದಲ ಕನಸಿಗೆ ಇಡೀ ಚಿತ್ರತಂಡಕ್ಕೆ ಜತೆಯಾಗಿ ನಿಂತು ಸಪೋರ್ಚ್‌ ಮಾಡಿತು. ಹೀಗಾಗಿ ಸಿನಿಮಾ ಚೆನ್ನಾಗಿ ಬಂದಿದೆ’ ಎಂದರು ನಿರ್ದೇಶಕ ಪ್ರಜ್ವಲ್‌ ಎಸ್‌ ಪಿ.

Salaar ಕೆಲಸ ಸರಿಯಾಗಿ ಮಾಡಿದರೆ ಪ್ರಕೃತಿ ಕೈ ಹಿಡಿಯುತ್ತದೆ: ಪ್ರಮೋದ್‌

ಮಲ್ಲಿಕಾರ್ಜುನ್‌ ಕಾಶಿ ಹಾಗೂ ಝೇವಿಯರ್‌ ಫರ್ನಾಂಡಿಸ್‌ ಚಿತ್ರದ ಸಹ ನಿರ್ಮಾಪಕರು. ರವಿಕಾಳೆ, ಧರ್ಮ, ವಿಜಯ… ಚೆಂಡೂರ್‌, ಶೋಭರಾಜ್‌ ಚಿತ್ರದಲ್ಲಿ ನಟಿಸಿದ್ದಾರೆ. ಕೆ ಎಸ್‌ ಚಂದ್ರಶೇಖರ್‌ ಕ್ಯಾಮೆರಾ, ಸುನೀಲ್‌, ದೇವ್‌ ಎನ್‌, ರಾಜ್‌ ಅವರ ಸಂಭಾಷಣೆ ಇದೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಪ್ರಮುಖ ಕಲಾವಿದರು ಚಿತ್ರದ ಕುರಿತು ಹೇಳಿಕೊಂಡರು. ಇನ್ನೂ ಟ್ರೇಲರ್‌ ನೋಡಿ ನಟರಾದ ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಅವರು ಪ್ರಮೋದ್‌ಗೆ ಶುಭ ಹಾರೈಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?