ಟೀಂ ಇಂಡಿಯಾದಲ್ಲಿ ತುಂಬಿಕೊಂಡಿದೆ ಮೇಲ್ಜಾತಿ, ಬೇಕಿದೆ ಮೀಸಲಾತಿ; ನಟ ಚೇತನ್!

By Suvarna NewsFirst Published Dec 4, 2022, 7:26 PM IST
Highlights

ಟೀಂ ಇಂಡಿಯಾದಲ್ಲಿ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕು. ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿ ಶೇಕಡಾ 70 ರಷ್ಟು ಮೆಲ್ಜಾತಿಯವರೇ ಇದ್ದಾರೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. 

ಚಾಮರಾಜನಗರ(ಡಿ.04):  ಭಾರತೀಯ ಕ್ರಿಕೆಟ್ ತಂಡದಲ್ಲಿ ಶೇಕಡಾ 70 ರಷ್ಟು ಮೇಲ್ಜಾತಿಯವರೇ ತುಂಬಿಕೊಂಡಿದ್ದಾರೆ. ಮೇಲ್ಜಾತಿಯವರಿಗೆ ಅವಕಾಶಗಳು ಸಿಗುತ್ತಿದೆ. ಹೀಗಾಗಿ ಕ್ರಿಕೆಟ್‌ನಲ್ಲಿ ಮೀಸಲಾತಿ ಜಾರಿಯಾಗಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಚಾಮರಾಜನಗರದಲ್ಲಿ ಆಯೋಜಿಸಿದ ಮೀಸಲಾತಿ ಪ್ರಾತಿನಿಧ್ಯವೋ ಆರ್ಥಿಕ ಸಬಲೀಕರಣವೋ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡ ಚೇತನ್ ಕ್ರೀಡೆಯಲ್ಲಿ ಮೀಸಲಾತಿ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ. 

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಕರಿಯರಿಗೆ ಮೀಸಲಾತಿ ನೀಡಲಾಗಿದೆ. 2016ರಿಂದ 6 ಮಂದಿ ಕರಿಯರಿಗೆ ಅವಕಾಶ ನೀಲಾಗುತ್ತದೆ. ಇದೇ ರೀತಿ ಭಾರತದಲ್ಲಿ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ನೀಡಬೇಕು. ಇದರಿಂದ ಮತ್ತಷ್ಟು ಬಲಿಷ್ಠ ತಂಡ ಕಟ್ಟಲು ಸಾಧ್ಯವಿದೆ ಎಂದು ಚೇತನ್ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದೆ. ಮೀಸಲಾತಿಯನ್ನು ಜಾರಿಗೊಳಿಸಿದರೆ ಭಾರತೀಯ ಕ್ರಿಕೆಟ್ ವೈಶಾಲ್ಯತೆ ಶ್ರೀಮಂತವಾಗುತ್ತದೆ ಎಂದು ಚೇತನ್ ಹೇಳಿದ್ದಾರೆ.  

'ಪಾಕ್‌ ಜಿಂದಾಬಾದ್‌' ಪರ ವಿವಾದಾತ್ಮಕ ಪೋಸ್ಟ್‌: ವಿವಾದಕ್ಕೆ ಕಾರಣವಾದ ನಟ ಚೇತನ್‌ ಕುಮಾರ್‌ ಹೇಳಿಕೆ

ಮೀಸಲಾತಿ ಅನ್ನೋದು ಉದ್ಯೋಗ, ಶಿಕ್ಷಣ, ರಾಜಕೀಯಕ್ಕೆ ಸೀಮಿತ ಎಂದುಕೊಂಡಿದ್ದೇವೆ. ಆದರೆ ಸೌತ್ ಆಫ್ರಿಕಾ ತಂಡದಲ್ಲಿ 6 ಮಂದಿಗೆ ಮೀಸಲಾತಿ ನೀಡಲಾಗಿದೆ. ನಮ್ಮ ದೇಶದ ಕ್ರಿಕೆಟ್ ಎಷ್ಟು ದುಡ್ಡು ಪಡೆಯುತ್ತಿದೆ, ಎಷ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ ಅನ್ನೋದು ತಿಳಿದಿದೆ. ಆದರೆ ಟೀಂ ಇಂಡಿಯಾ ಶೇಕಡಾ 70ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಜಾತಿಯವರೇ ತುಂಬಿಕೊಂಡಿದ್ದಾರೆ. ಟೀಂ ಇಂಡಾಯ ಇನ್ನುಷ್ಟು ಉತ್ತವಾಗಬೇಕು ಅಂದರೆ ಅಲ್ಲೂ ಕೂಡ ಮೀಸಲಾಟಿ ನೀಡಬೇಕು. ಎಸ್‌ಸಿ ಎಸ್‌ಟಿ, ಅಲ್ಪಸಂಖ್ಯಾತರಿಗೆ ಟೀಂ ಇಂಡಿಯಾದಲ್ಲಿ ಮೀಸಲಾತಿ ನೀಡಿದರೆ ಇನ್ನು ಉತ್ತಮವಾಗಿ ಪ್ರದರ್ಶನ ನೀಡಲು ಸಾಧ್ಯ ಎಂದು ಚೇತನ್ ಹೇಳಿದ್ದಾರೆ.  

ಇತ್ತೀಚೆಗೆ ಚೇತನ್ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ ಇಡೀ ಚಿತ್ರರಂಗ ಹಾಗೂ ವೀಕ್ಷಕರು ಚೇತನ್ ವಿರುದ್ಧ ಮುಗಿಬಿದ್ದಿದ್ದರು. ಬಳಿಕ ನಾಪತ್ತೆಯಾದ ಚೇತನ್ ಇದೀಗ ಮೀಸಲಾತಿ ದಾಳ ಹಿಡಿದು ಪ್ರತ್ಯಕ್ಷವಾಗಿದ್ದಾರೆ. ಚೇತನ್ ಅಹಿಂಸಾ ಹೇಳಿದ ಕ್ರಿಕೆಟ್‌ನಲ್ಲಿನ ಮೀಸಲಾತಿಗೆ ಪರ ವಿರೋಧಗಳು ಆರಂಭಗೊಂಡಿದೆ. 

Headbush ವಿವಾದ: ಡಾಲಿ ಧನಂಜಯ್‌ ಬೆನ್ನಿಗೆ ನಿಂತ ನಟ ಚೇತನ್

ಭೂತಕೋಲ ಬಗ್ಗೆ ಹೇಳಿಕೆ: ಚೇತನ್‌ ವಿರುದ್ಧದ ಪ್ರಕರಣ ರದ್ದತಿಗೆ ನಕಾರ
ಕನ್ನಡದ ‘ಕಾಂತಾರ’ ಚಲನಚಿತ್ರದಲ್ಲಿ ತೋರಿಸಲಾಗಿರುವ ಭೂತಕೋಲದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪ ಸಂಬಂಧ ನಟ ಚೇತನ್‌ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಚ್‌ ನಿರಾಕರಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ನಟ ಚೇತನ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರ ಪೀಠ, ಪ್ರಕರಣ ತನಿಖಾ ಹಂತದಲ್ಲಿರುವ ಕಾರಣ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ. ಕಾಂತಾರ ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ನಟ ಚೇತನ್‌, ಭೂತಕೋಲವು ಹಿಂದು ಸಂಸ್ಕೃತಿಗೆ ಸೇರುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಆದರೆ, ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದು ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದಿದ್ದರು.

click me!