'ಡೆವಿಲ್ ಈಸ್ ಬ್ಯಾಕ್'; ಭುಜದ ಶಸ್ತ್ರ ಚಿಕಿತ್ಸೆ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್!

Published : Aug 12, 2021, 12:07 PM IST
'ಡೆವಿಲ್ ಈಸ್ ಬ್ಯಾಕ್'; ಭುಜದ ಶಸ್ತ್ರ ಚಿಕಿತ್ಸೆ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್!

ಸಾರಾಂಶ

ಹೈದರಾಬಾದ್‌ನಲ್ಲಿ ಭುಜಕ್ಕೆ ಶಸ್ತ್ರ ಚಿಕಿತ್ಸೆ, ಸೆಲ್ಫಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಟ.   

ಸಿಂಪಲ್ ಹಾಗೂ ಪರ್ಫೆಕ್ಟ್ ಸ್ಟಾರ್ ಧನುಷ್ ಅಭಿನಯದ 'ತಿರುಚಿತ್ರಾಂಬಲಂ' ಸಿನಿಮಾ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದ್ದು, ಈ ವೇಳೆ ನಟ ಪ್ರಕಾಶ್ ರಾಜ್ ಗಾಯಗೊಂಡಿದ್ದರು. ಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣವೇ ಹೈದರಾಬಾದ್‌ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 

'ಶೂಟಿಂಗ್ ವೇಳೆ ಬಿದ್ದ ಪರಿಣಾಮ, ಮೂಳೆ ಮುರಿದಿದೆ. ಶಸ್ತ್ರ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ತೆರಳುತ್ತಿದ್ದೇನೆ' ಎಂದು ಟ್ಟೀಟ್ ಮಾಡಿದ್ದರು.  ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿ, ಪ್ರಕಾಶ್ ಅವರನ್ನು ಒಮ್ಮೆ ನೋಡಬೇಕು ಎಂದು ಕೆಲವು ಅಭಿಮಾನಿಗಳು ಆಸ್ಪತ್ರೆಗೆ ಪ್ರಯಾಣ ಮಾಡಿದ್ದಾರೆ. ಯಾವುದೇ ಆತಂಕಕ್ಕೆ ಮನೆ ಮಾಡಿಕೊಡುವುದು ಬೇಡವೆಂದು ಪ್ರಕಾಶ್ ಸೆಲ್ಫೀ ಹಂಚಿಕೊಂಡಿದ್ದಾರೆ. 

ಶೂಟಿಂಗ್‌ ವೇಳೆ ನಟ ಪ್ರಕಾಶ್ ರಾಜ್‌ಗೆ ಗಾಯ, ಚಿಕಿತ್ಸೆಗಾಗಿ ಹೈದರಾಬಾದ್‌ಗೆ

'ಡೆವಿಲ್ ಈಸ್ ಬ್ಯಾಕ್. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ನನ್ನ ಆತ್ಮೀಯ ಸ್ನೇಹಿತ ಡಾ. ಗುರುವ ರೆಡ್ಡಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗಳಿಗೆ ನನ್ನ ಕಡೆಯಿಂದ ಧನ್ಯವಾದಗಳು. ಶ್ರೀಘ್ರದಲ್ಲೇ ನಾನು ಮರಳುತ್ತೇನೆ' ಎಂದು ಟ್ಟೀಟ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬರ್ತ್‌ಡೇ ಸ್ಪೆಷಲ್' ಅಂತ ಅಣ್ಣಾವ್ರು ಏನ್ ತಿಂತಾ ಇದ್ರು..? ಪಾರ್ವತಮ್ಮ ಹೇಳಿದ್ದ ಸೀಕ್ರೆಟ್ ಮತ್ತೀಗ ವೈರಲ್!
'ದಾದಾ ಸಾಹೇಬ್ ಫಾಲ್ಕೆ' ಗೌರವಾನ್ವಿತ ಅನಂತ್‌ ನಾಗ್‌ಗೆ ಬಾಲ್ಯದ ನೆನಪು ಜೋಡಿಸಿ ರಿಷಬ್ ಶೆಟ್ಟಿ ಹೇಳಿದ್ದೇನು?