ಜಾಕ್ವೆಲಿನ್ ಪಾತ್ರ ರಿವೀಲ್; 'ವಿಕ್ರಾಂತ್ ರೋಣ'ನ ಗಡಂಗ್ ರಕ್ಕಮ್ಮ ಹೇಗಿದ್ದಾಳೆ ನೋಡಿ!

By Suvarna News  |  First Published Aug 12, 2021, 10:46 AM IST

ಜಾಕ್ವೆಲಿನ್‌ ಫೆರ್ನಾಂಡಿಸ್‌ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ ಸುದೀಪ್‌. ಗಡಂಗ್ ರಕ್ಕಮ್ಮ ಲುಕ್ ಹೇಗಿದೆ ನೋಡಿ.
 


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಬಿಗ್ ಬಜೆಟ್  ಚಿತ್ರದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅಭಿನಯಿಸಿದ್ದಾರೆ. ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಹುಟ್ಟುಹಬ್ಬದ ಪ್ರಯುಕ್ತ ‘ವಿಕ್ರಾಂತ್‌ ರೋಣ’ ಸಿನಿಮಾದ ಹೊಸ ಪೋಸ್ಟರ್‌ ರಿಲೀಸ್‌ ಆಗಿದೆ. 

ಕಿಚ್ಚ ಸುದೀಪ್‌ ಅಭಿನಯದ ಈ ಸಿನಿಮಾದಲ್ಲಿ ಗಡಂಗ್‌ ರಕ್ಕಮ್ಮ ಎಂಬ ಪಾತ್ರದಲ್ಲಿ ಜಾಕ್ವೆಲಿನ್‌ ನಟಿಸುತ್ತಿದ್ದಾರೆ. ಆ ಪಾತ್ರದ ಪೋಸ್ಟರ್‌ ಸುದೀಪ್‌ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಬಾಲಿವುಡ್‌ ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ವಿಕ್ರಾಂತ್‌ ರೋಣ ಚಿತ್ರದ ಹೊಸ ಪೋಸ್ಟರ್‌ ಜತೆಗೆ ಜಾಕ್ವೆಲಿನ್‌ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರೆ, ಇತ್ತ ಕಿಚ್ಚನ ಅಭಿಮಾನಿಗಳು ವಿಶೇಷವಾಗಿ ಮೂಡಿ ಬಂದಿರುವ ಚಿತ್ರದ ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ.

5 ಕೋಟಿ ರೂ. ವೆಚ್ಚದ ಸೆಟ್‌ನಲ್ಲಿ ಸುದೀಪ್, ಜಾಕ್ವೆಲಿನ್ ಡಾನ್ಸ್!

Tap to resize

Latest Videos

undefined

ಕಳೆದ ತಿಂಗಳು ಜಾಕ್ವೆಲಿನ್ ಬೆಂಗಳೂರಿಗೆ ಆಗಮಿಸಿ 5 ಕೋಟಿ ವೆಚ್ಚದ ಸೆಟ್‌ನಲ್ಲಿ ಸ್ಪೆಷಲ್ ಹಾಡಿನ ಚಿತ್ರೀಕರಣ ಮಾಡಿದ್ದರು.  ಇದಾದ ನಂತರ ಮುಂಬೈನಲ್ಲಿ ತಮ್ಮ ಫಸ್ಟ್ ಲುಕ್ ಹಾಗೂ ಪಾತ್ರದ ಹೆಸರನ್ನು ಅನೌನ್ಸ್ ಮಾಡಿದ್ದರು. ಇದೀಗ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ವಿಕ್ರಾಂತ್ ತಂಡ ಸ್ಪೆಷಲ್ ಗಿಫ್ಟ್ ನೀಡಿದೆ. ಚಿತ್ರದ ಮೇಕಿಂಗ್ ಹಾಗೂ ಟ್ರೈಲರ್ ನೋಡಿ ಜಾಕ್ವೆಲಿನ್ ಮೆಚ್ಚಿಕೊಂಡಿದ್ದಾರೆ. 

ತೆರೆ ಮೇಲೆ ಕಿಚ್ಚ ಸುದೀಪ್- ಜಾಕ್ವೆಲಿನ್ ಹಾಡು ನೋಡಲು ಸಿನಿ ರಸಿಕರು ಕಾಯುತ್ತಿದ್ದಾರೆ.

 

Celebrating our 's bday. pic.twitter.com/NdrCP6i2A7

— Kichcha Sudeepa (@KicchaSudeep)
click me!