
ಯಾರನ್ನಾದರೂ ನಿಮ್ಮ ಫೇವರಿಟ್ ನಟಿ ಯಾರು ಎಂದು ಕೇಳಿದರೆ ಮೊದಲು ಹೇಳುವ ಹೆಸರೇ ಕನಸಿನ ರಾಣಿ ಮಾಲಾಶ್ರೀ ಎಂದು. ಒಂದು ಕಾಲದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಚೆಲುವೆ ಮಾಡದೇ ಇರುವ ಪಾತ್ರವಿಲ್ಲ. ಬಬ್ಲಿ ಗರ್ಲ್‌ನಿಂದ ಮಾಸ್ ಕ್ವೀನ್ ಆಗಿ ಗುರುತಿಸಿಕೊಂಡಿದ್ದಾರೆ.
ನಟಿ ಮಾಲಾಶ್ರೀ, ಪತಿ ಕೋಟಿ ಅಗಲಿಕೆ ನೋವಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಆದರೆ ಈ ಬಾರಿ ಮಕ್ಕಳು ತಾಯಿಗೆ ಸದಾ ಜೊತೆಯಾಗಿರುವಂತ ಗಿಫ್ಟ್ ನೀಡಿದ್ದಾರೆ. ಪುತ್ರಿ ಅನನ್ಯಾ ಮತ್ತು ಪುತ್ರ ಆರ್ಯನ್ ಮುದ್ದಾದ ನಾಯಿ ಮರಿಯನ್ನು ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ಮಾಲಾಶ್ರೀಗೆ ಪ್ರೀತಿಯ ಶುಭಾಶಯಗಳು ಹರಿದು ಬರುತ್ತಿದೆ.
'ನನ್ನ ಮಕ್ಕಳು ಇಂದು ನನಗೆ ಒಂದು ಸರ್ಪೈಸ್ ನೀಡಿದ್ದರು. ಪೆಟ್‌ಬುಲ್ ನಾಯಿ ಮರಿಯನ್ನು ನನ್ನ ಹುಟ್ಟುಹಬ್ಬದ ಪ್ರಯುಕ್ತ ನೀಡಿದ್ದರು. ನಿಮಗೆಲ್ಲರಿಗೂ ಭಗೀರನನ್ನು ಪರಿಚಯಿಸಿ ಕೊಡುತ್ತಿರುವೆ. ಭಗೀರ ಅಲಿಯಾಸ್ ಬಗ್ಗಿ. ನಮ್ಮ ಮನೆಗೆ ಸ್ವಾಗತ ಬೇಬಿ' ಎಂದು ಮಾಲಾಶ್ರೀ ಬರೆದುಕೊಂಡಿದ್ದಾರೆ.
47ನೇ ವಸಂತಕ್ಕೆ ಕಾಲಿಟ್ಟ ಕನಸಿನ ರಾಣಿಗೆ ಚಿತ್ರರಂಗ ಗಣ್ಯರು ಹಾಗೂ ಸ್ನೇಹಿತರು ಶುಭಾಶಯ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.