ನಟ ಪ್ರಕಾಶ್ ರಾಜ್ ಅವರು ಯುಟ್ಯೂಬ್ ಒಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ಬದುಕಿನ ಕೆಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಹೇಳಿದ್ದೇನು?
ಇತ್ತೀಚೆಗೆ ಕಾಂಟ್ರವರ್ಸಿ ವಿಷಯಗಳಿಂದಲೇ ಬಹಳ ಚರ್ಚೆಯಲ್ಲಿರುವ ನಟ ಎಂದರೆ ಪ್ರಕಾಶ್ ರಾಜ್. ಇವರು ಏನೇ ಮಾತನಾಡಿದರೂ ಅದು ಸುದ್ದಿಯಾಗುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಯಾರಾದರೂ ಏನೇ ಮಾತನಾಡಲಿ ಅಥವಾ ಪ್ರಧಾನಿಯವರು ಏನಾದರೂ ಹೇಳಿಕೆ ನೀಡಲಿ, ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಲಿ ಅದಕ್ಕೆ ಏಕಾಏಕಿ ಟೀಕೆ ಮಾಡುವುದು ಎಂದರೆ ಪ್ರಕಾಶ್ ರಾಜ್ ಅವರಿಗೆ ಇನ್ನಿಲ್ಲದ ಖುಷಿ. ಅಷ್ಟೇ ಅಲ್ಲದೇ ಬಿಜೆಪಿ ಪರವಾಗಿ ಯಾರಾದರೂ ಏನಾದರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ ಅವರ ಕಾಲೆಳೆಯುವುದು ಮೊದಲು ಇವರೇ. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಪ್ರಧಾನಿ ಬೆಂಬಲಿಗರಿಂದ ಪ್ರಕಾಶ್ ರಾಜ್ ಸಕತ್ ಟ್ರೋಲ್ಗೆ ಒಳಗಾಗುವುದು ನಡೆದೇ ಇದೆ. ಇವರ ಮಾತನ್ನು ಬಹುತೇಕ ಕಾಂಗ್ರೆಸ್ಸಿಗರು ಒಪ್ಪಿ ಅದಕ್ಕೆ ಕಮೆಂಟ್ ಹಾಕಿದರೆ, ಬಿಜೆಪಿ ಬೆಂಬಲಿಗರು ಮಾತ್ರ ಅವರು ಹೇಳಿದ್ದೆಲ್ಲಾ ಸುಳ್ಳು ಎಂದು ಹೇಳುವ ಮೂಲಕ ಪದೇ ಪದೇ ಟಾಂಗ್ ಕೊಡುವುದು ಉಂಟು.
ಇದೀಗ ಪ್ರಕಾಶ್ ರಾಜ್ ಅವರು ತಮ್ಮ ಜೀವನದ ಹಲವು ಘಟನೆಗಳ ಕುರಿತು ಮಾತನಾಡಿದ್ದಾರೆ. ಫಿಲ್ಮ್ ಕಂಪನಿಯನ್ ಸೌತ್ youtube ಚಾನೆಲ್ಗೆ ಸಂದರ್ಶನ ನೀಡಿರುವ ಅವರು ಕೆಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರಲ್ಲಿ ತಾವು ನಟನಾ ಕ್ಷೇತ್ರಕ್ಕೆ ಬಂದ ವಿಷಯ ಹಾಗೂ ಇಂದಿನ ಸಿನಿಮಾ ಕುರಿತು ಮಾತನಾಡುವ ಸಮಯದಲ್ಲಿ ಕೆಲವೊಂದು ತಮ್ಮ ಬದುಕಿನ ಅಂಶಗಳನ್ನು ಪ್ರಕಾಶ್ ಅವರು ತೆರೆದಿಟ್ಟಿದ್ದಾರೆ. ನಟನಾದವನಿಗೆ ಸಿನಿಮಾನೇ ಯಾಕೆ ಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಇದೀಗ ಹಲವು ಕ್ಷೇತ್ರಗಳಿವೆ. ಸಿನಿಮಾ ಒಂದಕ್ಕೇ ಸೀಮಿತವಾಗಿಲ್ಲ ಎಂದು ಹೇಳಿದ್ದಾರೆ. ಹೊಸ ಹೊಸ ನಟರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಏಕೆಂದರೆ ಇದಾಗಲೇ ನುರಿತ ನಟರನ್ನೇ ಹಾಕಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಅವರಿಗೇ ಹೆಚ್ಚಿನ ಸಂಭಾವನೆ ಕೊಡಲಾಗುತ್ತಿದೆ ಎಂದು ಹೇಳಿರುವ ಪ್ರಕಾಶ್ ರಾಜ್ ಅವರು, ನಟನಾಗಿದ್ದರೆ ಸಿನಿಮಾಗಳೇ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
ಮೂರು ಪತ್ನಿಯರ ಮೇಲೆ ಕ್ರೌರ್ಯ ಮೆರೆದಿದ್ದು ತಪ್ಪಲ್ಲ: ಅಬ್ರಾರ್ ಹಖ್ ರೊಮ್ಯಾಂಟಿಕ್ ವ್ಯಕ್ತಿ ಎಂದ ಬಾಬಿ ಡಿಯೋಲ್!
ಇದೇ ವೇಳೆ, ತಮಗೆ ಸದ್ಯದ ಸ್ಥಿತಿಯಲ್ಲಿ ಹಣ ಅಂದ್ರೆ ನನಗೆ ಏನೂ ಅಲ್ಲ ಎಂದಿರುವ ಪ್ರಕಾಶ್ ರಾಜ್, ಹಿಂದೊಮ್ಮೆ ಹಣಕ್ಕಾಗಿ ಕೆಟ್ಟ ಚಿತ್ರಗಳನ್ನೂ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ದುಡ್ಡಿಗಾಗಿ ನಾನು ಕೆಲ ಕೆಟ್ಟ ಸಿನಿಮಾಗಳಲ್ಲಿ ನಟಿಸಿದ್ದೂ ಇದೆ. ಕೆಲವೊಮ್ಮೆ ನನಗೆ ಅವಕಾಶ ಸಿಗದಿರಲು ಇರಲು ರಾಜಕೀಯ ನಡೆದಿತ್ತು. ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಆದರೆ ದುಡ್ಡು ಬೇಕು ಎಂದು ಕೆಟ್ಟ ಪಾತ್ರಗಳನ್ನೂ ಒಪ್ಪಿಕೊಂಡಿದ್ದೆ. ವಿಲನ್ ರೋಲ್ಗಳನ್ನೂ ಮಾಡಿದ್ದೇನೆ. ನಾನು ಎಷ್ಟೋ ಸಿನಿಮಾಗಳಲ್ಲಿ ನಟಿಸಿದ್ದೀನಿ. ಎಷ್ಟೋ ಬಾರಿ ನನ್ನನ್ನು ರಿಜೆಕ್ಟ್ ಮಾಡಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಯೋಚಿಸಲಿಲ್ಲ. ಯಾಕಂದರೆ ನನ್ನನ್ನು ಬೇಡ ಎಂದು ಹೇಳಿದ್ದರ ಹಿಂದೆ ಎಷ್ಟು ರಾಜಕೀಯ ಇರುತ್ತದೆ ಎಂದು ನಾನು ಊಹಿಸಬಲ್ಲೆ. ಅನಿವಾರ್ಯ ಕಾರಣಗಳಿಂದ ಅವರು ನನ್ನನ್ನು ಸಿನಿಮಾದಿಂದ ಕೈಬಿಟ್ಟರು ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದಿದ್ದಾರೆ. ಅದೇ ವೇಳೆ ಈಗ ನನಗೆ ದುಡ್ಡೆಂದರೆ ಏನೂ ಅಲ್ಲ ಎಂದಿದ್ದಾರೆ.
ನನಗೆ ಬಾಲಚಂದ್ರನಂಥ ನಿರ್ದೇಶಕರು ಸಿಕ್ಕಿದ್ದರಿಂದ ಕೋಟಿಗೊಬ್ಬನಂತೆ ಪುಣ್ಯ ಪಡೆದವ ಎಂದು ಪ್ರಕಾಶ್ ಹೇಳಿದ್ದಾರೆ. ಇದೇ ವೇಳೆ ನಾನು ಚಿತ್ರಗಳಲ್ಲಿ, ಓವರ್ಆ್ಯಕ್ಟ್ ಮಾಡುತ್ತೇನೆ ಎಂದು ಹಲವರು ಹೇಳುತ್ತಾರೆ. ಓವರ್‌ಆಕ್ಟಿಂಗ್ ಮಾಡುತ್ತೇನೆ ಎಂದರೆ ನನಗೆ ಆಕ್ಟಿಂಗ್ ಬಂದಂತೆ ತಾನೇ ಎಂದು ಪ್ರಶ್ನಿಸಿರುವ ಪ್ರಕಾಶ್ ಅವರು, ಕಮರ್ಷಿಯಲ್ ಸಿನಿಮಾಗಳ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಅಂತಹ ಸಿನಿಮಾಗಳಿಗೆ ಪ್ರತ್ಯೇಕವಾದ ಅಭಿಮಾನಿಗಳು ಇರುತ್ತಾರೆ. ಅಂತಹ ಸಿನಿಮಾಗಳನ್ನು ನಿರ್ಮಾಪಕರು, ನಿರ್ದೇಶಕರು ಕಷ್ಟಬಿದ್ದು ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಕೆಲವೊಮ್ಮೆ ಕಮರ್ಷಿಯಲ್ ಚಿತ್ರಗಳಲ್ಲಿ ವಿಲನ್ ಆಗುವಂತೆ ಕೇಳುತ್ತಾರೆ. ಕೆಟ್ಟ ಚಿತ್ರ ಮಾಡ್ಬೇಕಾ ಎಂದು ಯೋಚಿಸುತ್ತೇನೆ. ಆದ್ರೆ ಹಿಂದೆ ದುಡ್ಡಿಗಾಗಿ ಅಂಥ ಚಿತ್ರ ಮಾಡಿದ್ದಿದೆ ಎಂದಿದ್ದಾರೆ.
ಕೆಲವು ಚಿತ್ರಗಳಲ್ಲಿ ಮರ ಸುತ್ತುವ ನಾಯಕಿಯರ ಜೊತೆ ಕುಣಿದಿದ್ದು ಇದೆ. ಅದಕ್ಕೆ ಬೇಸರ ಇಲ್ಲ ಎಂದಿರುವ ಪ್ರಕಾಶ್ ಅವರು, ತಮಗೆ ಡ್ಯಾನ್ಸ್ ಮಾಡಲು ಬರುವುದು ಇಲ್ಲ. ಅದು ಅಷ್ಟು ಸುಲಭವಲ್ಲ. ಅದಕ್ಕೆ ಬಹಳ ಶ್ರದ್ಧೆ ಬೇಕು. ಹಾಗಂತ ಅದರ ಬಗ್ಗೆ ತಾತ್ಸಾರವಿಲ್ಲ. ನನಗೆ ಗೌರವವಿದೆ. ಆದರೆ ನಾನು ಆ ರೀತಿ ಕಾಣಿಸಿಕೊಳ್ಳಲಿಲ್ಲ ಎಂದಿದ್ದಾರೆ.
ಕುಡುಕಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದಿದ್ದ ನಟಿ ಶ್ರುತಿ ಹಾಸನ್ ಡ್ರಗ್ಸ್ ಕುರಿತು ಹೇಳಿದ್ದೇನು?
Sharing my journey… In conversation with .. 40 plus minutes.. do watch when free . Have great weekend dears ❤️ .. https://t.co/FikTwWviWx
— Prakash Raj (@prakashraaj)