ಮೊದಲ ಬಾರಿ ಕಿರುತೆರೆ ಲೋಕಕ್ಕೆ ಕಾಲಿಟ್ಟ ಪ್ರಜ್ವಲ್. ಬಾಲ್ಯದಿಂದಲೂ ಡ್ಯಾನ್ಸರ್ ಆಗಿರುವ ಕಾರಣ ತೀರ್ಪುಗಾರರ ಸ್ಥಾನಕ್ಕೆ ನ್ಯಾಯ ಒದಗಿಸಲಿದ್ದಾರೆ, ಎಂಬ ನಂಬಿಕೆ ನೃತ್ಯ ಪ್ರೇಮಿಗಳದ್ದು.
ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ 'ಇನ್‌ಸ್ಪೆಕ್ಟರ್ ವಿಕ್ರಂ' ಬಿಡುಗಡೆ ನಂತರ ಪ್ರಜ್ವಲ್ ಇಮೇಜ್ ಬದಲಾಗಿದೆ. ಈ ನಡುವೆ ಪ್ರಜ್ವಲ್ ಕಿರುತೆರೆ ರಿಯಾಲಿಟಿ ಶೋ ಒಂದಕ್ಕೆ ಸಹಿ ಮಾಡಿದ್ದಾರೆ.
ಹೌದು! ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ಧವಾಗುತ್ತಿರುವ 'ಡ್ಯಾನ್ಸ್ ಡ್ಯಾನ್ಸ್' ಹೆಸರಿನ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಶೋನಲ್ಲಿ ನಿರೂಪಕರಾಗಿ ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಕಿರುತೆರೆಯಲ್ಲಿ ಜಡ್ಜ್ ಆಗಿ ಬರುತ್ತಿರುವುದು ಪ್ರಜ್ವಲ್ ಇದೇ ಮೊದಲ ಬಾರಿ. ಪ್ರಜ್ವಲ್ ತೀರ್ಪುಗಾರರಾಗಿ ನೋಡಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಬಾಲ್ಯದಿಂದಲೂ ಡ್ಯಾನ್ಸರ್ ಆಗಿರುವ ಪ್ರಜ್ವಲ್ ಈ ಸ್ಥಾನಕ್ಕೆ ಎಷ್ಟು ನ್ಯಾಯ ಒದಗಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜ್ವಲ್ ದೇವರಾಜ್ 35ನೇ ಚಿತ್ರ ಮಾಫಿಯಾ!ಡ್ಯಾನ್ಸ್ ಇಷ್ಟ ಪಡುವ ಪ್ರಜ್ವಲ್ ಬಿಡುವಿನ ವೇಳೆಯಲ್ಲಿ ತಮ್ಮ ಪತ್ನಿ ರಾಗಿಣಿ ಚಂದ್ರನ್ ಜತೆ ಡ್ಯಾನ್ಸ್ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತವೆ. ಪತ್ನಿ ರಾಗಿಣಿ ಕೂಡ ಕಥಕ್ ಡ್ಯಾನ್ಸರ್ ಆಗಿದ್ದು, ಇಡೀ ಕುಟುಂಬಕ್ಕೆ ಡ್ಯಾನ್ಸ್ ಮೇಲೆ ಒಲವಿದೆ. ಡ್ಯಾನ್ಸ್ ಆಡಿಷನ್ ಕೂಡ ಮುಕ್ತಾಯವಾಗಿದೆ. ಸದ್ಯದಲ್ಲೇ ಈ ಶೋ ಕಿರುತೆರೆಯಲ್ಲಿ ಮೂಡಿ ಬರಲಿದೆ.