
ಥಿಯೇಟರ್‌ಗಳಲ್ಲಿ ಶೇ.50 ಪ್ರದರ್ಶನಕ್ಕೆ ಅವಕಾಶವಿದ್ದರೂ ಸಿನಿಮಾ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಆದರೆ ಲಂಕೆ ಚಿತ್ರ ಬಿಡುಗಡೆಯಾಗುವ ದಿನವೇ, ದುನಿಯಾ ವಿಜಿ ಅವರ ‘ಸಲಗ’ ಸಿನಿಮಾವೂ ಬಿಡುಗಡೆಯಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯೋಗೀಶ್, ‘ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ ಸಿಕ್ಕ ಬಳಿಕವಷ್ಟೇ ಸಲಗ ಬಿಡುಗಡೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಆ.20ರ ವೇಳೆಗೆ ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ ಸಿಕ್ಕರೆ ನಮ್ಮ ಸಿನಿಮಾ ಬಿಡುಗಡೆ ದಿನಾಂಕ ಕೊಂಚ ಬದಲಾವಣೆಯಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು. ಈ ಸಂದರ್ಭ ಲಂಕೆ ಚಿತ್ರದಲ್ಲಿ ನಟಿಸಿರುವ ದಿ. ಸಂಚಾರಿ ವಿಜಯ್ ಅವರನ್ನು ನೆನಪಿಸಿಕೊಂಡರು.
ನಿರ್ದೇಶಕ ರಾಮಪ್ರಸಾದ್ ಎಂ ಡಿ ಮಾತನಾಡಿ, ‘ಈಗ ಬಿಡುಗಡೆಯಾಗಿರುವ ಹಾಡು ಖುಷಿಯ ಜೊತೆಗೆ ನೋವನ್ನೂ ಧ್ವನಿಸುತ್ತದೆ. ಸೂಫಿ ಹಾಗೂ ಕಥಕ್ ಶೈಲಿಯಲ್ಲಿ ಮೂಡಿಬಂದಿದ್ದು, ಹಿಂದೂ ಮುಸ್ಲಿಂ ಸೌಹಾರ್ದತೆಯ ಹಾಡಾಗಿಯೂ ಹೊರಹೊಮ್ಮಿದೆ’ ಎಂದರು. ನಾಯಕಿ ಕೃಷಿ ತಪಂಡ, ‘ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವ ಫೀಲ್ ನನ್ನದು. ಹಾಡುಗಳ ಜೊತೆಗೆ ಸಿನಿಮಾವನ್ನೂ ಗೆಲ್ಲಿಸಿ’ ಎಂದರು.
ಗೀತ ರಚನಕಾರ ಗೌಸ್ ಪೀರ್, ಸಂಗೀತ ನಿರ್ದೇಶಕ ಕಾರ್ತಿಕ್, ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಉಪಸ್ಥಿತರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.