ಲಹರಿ ಸಂಸ್ಥೆಗೆ 'ಆರ್‌ಆರ್‌ಆರ್‌' ಚಿತ್ರದ ಆಡಿಯೋ ಹಕ್ಕು!

By Suvarna NewsFirst Published Jul 29, 2021, 11:14 AM IST
Highlights

'ಆರ್‌ಆರ್‌ಆರ್‌' ಚಿತ್ರದ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಆಡಿಯೋ ಹಕ್ಕು ಪಡೆದು ಕೊಂಡ ಲಹರಿ ಸಂಸ್ಥೆ.

ರಾಜಮೌಳಿ ನಿರ್ದೇಶನದ, ಬಹು ಕೋಟಿ ವೆಚ್ಚದ, ಬಹುಭಾಷೆಯ ಪ್ಯಾನ್‌ ಇಂಡಿಯಾ ಚಿತ್ರವಾಗಿ ಮೂಡಿ ಬರುತ್ತಿರುವ ‘ಆರ್‌ಆರ್‌ಆರ್‌’ ಸಿನಿಮಾದ ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ತನ್ನದಾಗಿಸಿಕೊಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಆಡಿಯೋ ಹಕ್ಕುಗಳೂ ಲಹರಿ ಪಾಲಾಗಿದೆ.

‘ಆರ್‌ಆರ್‌ಆರ್‌ ಚಿತ್ರದ ಆಡಿಯೋ ಹಕ್ಕುಗಳನ್ನು ಪದುಕೊಂಡಿರುವುದು ಖುಷಿ ಇದೆ. ಒಂದು ದೊಡ್ಡ ಚಿತ್ರದ ಭಾಗವಾಗುತ್ತಿದ್ದೇವೆಂಬ ಹೆಮ್ಮೆ ಕೂಡ ಇದೆ,’ ಎನ್ನುತ್ತಾರೆ ಲಹರಿ ವೇಲು. ರಾಮ್‌ಚರಣ್‌ ತೇಜ ಹಾಗೂ ಜ್ಯೂ.ಎನ್‌ಟಿಆರ್‌ ಕಾಂಬಿನೇಶನ್‌ನ ಈ ಚಿತ್ರದ ಮೊದಲ ಹಾಡು ಆಗಸ್ಟ್‌ 13ಕ್ಕೆ ಬಿಡುಗಡೆಯಾಗಲಿದೆ.

ಅದ್ಧೂರಿ ಹಾಗೂ ಅಮೋಘವಾಗಿದೆ 'RRR' ಮೇಕಿಂಗ್ ವಿಡಿಯೋ!

ಕೆಲವು ದಿನಗಳ ಹಿಂದೆ ಚಿತ್ರ ತಂಡ ಅದ್ಧೂರಿ ಹಾಗೂ ಅಮೋಘವಾಗಿದ್ದ ಸೆಟ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದರು. ಅಲ್ಲದೇ ಈ ಚಿತ್ರದ ಡಿಜಿಟಲ್ ಮತ್ತು ಸೆಟಲೈಟ್‌ ಹಕ್ಕು ಜೀ ತಂಡ 300 ಕೋಟಿ ರೂ.ಗೆ ಪಡೆದು ಕೊಂಡಿದೆ.  ಆಲಿಯಾ ಭಟ್ ಮೊದಲ ಬಾರಿ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರದ ಬಗ್ಗೆ ಎಲ್ಲಿಯೂ ರಿವೀಲ್ ಮಾಡಿಲ್ಲ.

 

Glad to acquire the music rights of India’s Biggest Action Drama, ’s 🤩🔥🌊

An Musical

🎶 on & pic.twitter.com/6ZFlL613fa

— Lahari Music (@LahariMusic)
click me!