ನೋವು ಏನೆಂದು ನನಗೂ ಗೊತ್ತಿದೆ, ನನ್ನ ಅಪ್ಪ ನಿಧನಹೊಂದಿದ್ದು ಅಪಘಾತದಲ್ಲಿ: ನಟ ನಾಗಭೂಷಣ್

Published : Oct 09, 2023, 06:00 PM ISTUpdated : Oct 10, 2023, 10:28 AM IST
ನೋವು ಏನೆಂದು ನನಗೂ ಗೊತ್ತಿದೆ, ನನ್ನ ಅಪ್ಪ ನಿಧನಹೊಂದಿದ್ದು ಅಪಘಾತದಲ್ಲಿ: ನಟ ನಾಗಭೂಷಣ್

ಸಾರಾಂಶ

ಕೋಣನಕುಂಟೆ  ಕ್ರಾಸ್ ಬಳಿ ಘಟನೆ ನಡೆದಿದ್ದು, ಅವರು ನನ್ನ ಕಾರಿಗೆ ದಿಢೀರ್ ಅಂತ ಅಡ್ಡ ಬಂದರು. ಹೀಗಾಗಿ ಅಪಘಾತವಾಯಿತು. ಬಳಿಕ ನಾನೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದೆ. ಆಸ್ಪತ್ರೆಗೆ ಹೋಗುವಾಗ ಪೋಲಿಸರಿಗೆ ನಾನೇ ಫೋನ್ ಮಾಡಿ ಘಟನೆ ಬಗ್ಗೆ ವಿವರಿಸಿದೆ

ಕಾರು ಅಪಘಾತದ ಬಳಿಕ ನಟ ನಾಗಭೂಷಣ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಈ ವಿಚಾರವಾಗಿ ಸುದ್ಧಿಗೋಷ್ಠಿ ಆಯೋಜಿಸಿದ್ದು, ಘಟನೆ ಬಗ್ಗೆ ವಿವರಿಸಿದರು. ನಾಗಭೂಷಣ್ ಜೊತೆ ಅವರ ಪರ ವಕೀಲರಾದ ದಿಲೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು. ನಾಗಭೂಷಣ್  ಮಾತನಾಡಿ, "ದಯವಿಟ್ಟು ಹಿಟ್ ಅಂಡ್ ರನ್ ಅಂತ ಹೇಳಬೇಡಿ, ಅಪಘಾತ ಬಳಿಕ ನಾನೆ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು" ಎಂದು ಭಾವುಕರಾದರು. "ಘಟನೆ ನಡೆದು ಅನೇಕ ದಿನಗಳ ಬಳಿಕ ನಿಮ್ಮ ಮುಂದೆ ಬಂದಿದ್ದೀನಿ, ನನಗೆ ಆ ಘಟನೆ ಅರಗಿಸಿಕೊಳ್ಳಲು ಇನ್ನೂ ಸಮಯ ಬೇಕು. ಹಾಗಾಗಿ ನಾನು ತಡವಾಗಿ ಮಾತನಾಡುತ್ತಿದ್ದೀನಿ" ಎಂದು ಹೇಳಿದರು.

  

"ಕೋಣನಕುಂಟೆ  ಕ್ರಾಸ್ ಬಳಿ ಘಟನೆ ನಡೆದಿದ್ದು, ಅವರು ನನ್ನ ಕಾರಿಗೆ ದಿಢೀರ್ ಅಂತ ಅಡ್ಡ ಬಂದರು. ಹೀಗಾಗಿ ಅಪಘಾತವಾಯಿತು. ಬಳಿಕ ನಾನೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದೆ. ಆಸ್ಪತ್ರೆಗೆ ಹೋಗುವಾಗ ಪೋಲಿಸರಿಗೆ ನಾನೇ ಫೋನ್ ಮಾಡಿ ಘಟನೆ ಬಗ್ಗೆ ವಿವರಿಸಿದೆ" ಎಂದು ಹೇಳಿದರು. ಪೊಲೀಸರು ಗಾಯಾಳುಗಳ ಸಂಬಂಧಿಗಳ ಮುಂದೆಯೇ ಆಲ್ಕೋಹಾಲ್ ಪರೀಕ್ಷೆ ಹಾಗೂ ರಕ್ತ ಪರೀಕ್ಷೆ ಮಾಡಿಸಿದರು. ಬಳಿಕ ನಾನು ಆಸ್ಪತ್ರೆಯಿಂದ ಪೊಲೀಸ್ ಸ್ಟೇಷನ್‌ಗೆ ಹೋದೆ, ಬೆಳಗ್ಗೆ ಸ್ಟೇಷನ್ ಬೇಲ್ ಮೂಲಕ ಹೊರಬಂದೆ" ಎಂದು ಘಟನೆ ವಿವರಿಸಿದರು.

ನಮ್ಮಪ್ಪ ನಿಧನ ಹೊಂದಿದ್ದು 'ಹಿಟ್ ಅಂಡ್ ರನ್' ಕೇಸ್‌ನಲ್ಲಿ: ನೋವು ಏನೆಂದು ನನಗೂ ಗೊತ್ತಿದೆ

ದುರಂತ ಎಂದರೆ ನಾಗಭೂಷಣ್ ತಂದೆ ಕೂಡ ಹಿಟ್ ಅಂಡ್ ರನ್ ಪ್ರಕರಣದಲ್ಲಿಯೇ ನಿಧನಹೊಂದಿದ್ದು. ತಂದೆಯ ಸಾವನ್ನು ನೆನಪಿಸಿಕೊಂಡ ನಾಗಭೂಷಣ್ 'ಕಳೆದುಕೊಂಡ ನೋವು ಏನು ಅಂತ ನನಗೆ ಗೊತ್ತಿದೆ. ನನ್ನ ತಂದೆ ಕೂಡ ಅಪಘಾತದಲ್ಲಿಯೇ ನಿಧನರಾಗಿದ್ದು. ಅವರನ್ನು ಸಾಯಿಸಿದ್ದು ಯಾರು ಅಂತ ಇವತ್ತಿಗೂ ನಮಗೆ ಗೊತ್ತಿಲ್ಲ. ಆದರೀಗ ನಾನು ಅವರ ನೋವಿನಲ್ಲಿ ಭಾಗಿಯಾಗಿದ್ದೀನಿ' ಎಂದು ಬಾವುಕರಾದರು. 

ಹೆಂಗಸರನ್ನು ನೋಡಿದ್ರೆ ನನ್ನ ಗಂಡನಿಗೆ ತುಂಬಾ ಸಂಕೋಚ: ಗೌರೀಶ್ ಅಕ್ಕಿ ಪತ್ನಿ ಮಾಲತಿ

ಮುಂದುವರಿದ ನಾಗಭೂಷಣ್ "ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದೇವೆ. ನನ್ನ ಕೈಯಲ್ಲಿ ಏನು ಸಹಾಯ ಮಾಡಲು ಸಾಧ್ಯವಾಗುತ್ತೊ ನಾನು ಖಂಡಿತ  ಮಾಡುತ್ತೇನೆ. ಈ ಸಮಯದಲ್ಲಿ ನಾನು ಇನ್ನೇನು ಮಾಡಲು ಸಾಧ್ಯ" ಎಂದು ನಾಗಭೂಷಣ್ ಭಾವುಕರಾದರು.  ಇದೇ ಸಮಯದಲ್ಲಿ 'ಅಪಘಾತ ಮಾಡಿದರೆ ದಯವಿಟ್ಟು ಯಾರು ಓಡಿ ಹೋಗಬೇಡಿ' ಎಂದು ಮನವಿಮಾಡಿದರು. "ಇದರಿಂದ ಹೊರಬರಲು ನನಗೆ ಸಮಯ ಬೇಕು,  ನಂತರ ಮತ್ತೆ ನಿಮಗೆ ಸಿಗುತ್ತೇನೆ" ಎಂದು ಹೇಳಿ ಎಲ್ಲರನ್ನೂ ಬೀಳ್ಕೊಟ್ಟರು. 

ಬಿಗ್‌ಬಾಸ್‌ ಮನೆಗೆ ಹೋದ ಪ್ರದೀಪ್‌ ಈಶ್ವರ್‌ಗೆ ಎದುರಾಯ್ತು ಸಂಕಷ್ಟ: ಶಾಸಕ ಸ್ಥಾನ ಅಮಾನತ್ತಿಗೆ ಆಗ್ರಹ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?