ಚಿರು ಪುತ್ರನಿಗೆ ಡ್ಯಾನ್ಸ್​ ಹೇಳಿಕೊಟ್ಟ ಧ್ರುವ: ಪುಟಾಣಿ ರಾಯನ್​ ಸ್ಟೆಪ್​ಗೆ ಸೋ ಸ್ವೀಟ್​ ಎಂದ ಫ್ಯಾನ್ಸ್​

By Suvarna News  |  First Published Oct 7, 2023, 6:10 PM IST

ತಾರಾ ಜೋಡಿ ಮೇಘನಾ-ಚಿರು ಪುತ್ರ ರಾಯನ್​ ಚಿಕ್ಕಪ್ಪ ಧ್ರುವ ಹೇಳಿಕೊಟ್ಟಿರೋ ಡ್ಯಾನ್ಸ್​ಗೆ ಕ್ಯೂಟ್​ ಆಗಿ ಸ್ಟೆಪ್​ ಹಾಕಿದ್ದು ಅದೀಗ ವೈರಲ್​ ಆಗಿದೆ. 
 


ಮೇಘನಾ ರಾಜ್​ ಸದ್ಯ ತತ್ಸಮ ತತ್ಭದ ಚಿತ್ರದ ಖುಷಿಯಲ್ಲಿದ್ದಾರೆ. ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಮೇಘನಾ, ಕೆಲ ವರ್ಷಗಳ ಗ್ಯಾಪ್​ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೇ ವೇಳೆ, ಧ್ರುವಾ ಸರ್ಜಾ ಅವರು ಕೆಲ ದಿನಗಳ ಹಿಂದೆ ಎರಡನೆಯ ಮಗುವಿನ ಅಪ್ಪ ಆಗಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಠಮಿಯಂದೇ ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್‌ನಲ್ಲಿ ಪತ್ನಿ ಪ್ರೇರಣಾ ಶಂಕರ್ ಅವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು.  ಪುಟ್ಟ ಕೃಷ್ಣನ ಆಗನದಲ್ಲಿದ್ದ ದಂಪತಿಗೆ ಮುದ್ದು ಕೃಷ್ಣನೇ ಹುಟ್ಟಿದ್ದಾನೆ. ಈ ಕುರಿತು  ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ನೀಡಿದ್ದರು.  "ಮಗು ಜನಿಸಿದೆ. ನಾರ್ಮಲ್ ಡೆಲಿವರಿ' ಎಂದು ಬರೆದುಕೊಂಡಿದ್ದರು. ಅಂದಹಾಗೆ ಧ್ರುವಾ ಅವರಿಗೆ  ಮೊದಲ ಮಗು ಹೆಣ್ಣು. ಕಳೆದ ವರ್ಷದ ಅಕ್ಟೋಬರ್​ 2ರಂದು ಹುಟ್ಟಿರುವ ಪುಟಾಣಿಗೆ ಇಂದು ಒಂದನೇ ಹುಟ್ಟುಹಬ್ಬದ ಸಂಭ್ರಮ. ಈ ಪಾಪುವಿಗೆ ಇನ್ನೂ ನಾಮಕರಣ ಮಾಡಲಿಲ್ಲ. 

ಅದೇ ಇನ್ನೊಂದೆಡೆ ಇನ್ನು ಕೆಲವೇ ದಿನಗಳಲ್ಲಿ ಮೇಘನಾ-ಚಿರು ಅವರ ಪುತ್ರ ರಾಯನ್​ ಸರ್ಜಾನ ಮೂರನೆಯ ಹುಟ್ಟುಹಬ್ಬ ಇನ್ನು ಕೆಲವೇ ದಿನಗಳಲ್ಲಿ ಬರಲಿದೆ. ಅಕ್ಟೋಬರ್​ 22ರ 2020ರಂದು ಹುಟ್ಟಿರುವ ರಾಯನ್​ ಈಗ ಸಕತ್​ ಚೂಟಿಯಾಗಿದ್ದಾನೆ. ಮೊನ್ನೆಯಷ್ಟೇ  ಧ್ರುವ ಅವರ ಮೊದಲ ಮಗುವಿನ ಒಂದನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂದರ್ಭದಲ್ಲಿ  ರಾಯನ್​ ತನ್ನ ತಂಗಿಯ ಜೊತೆ ಮಾತನಾಡುತ್ತಿದ್ದು, ಅದರ ವಿಡಿಯೋ ವೈರಲ್​ ಆಗಿತ್ತು. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದ್ದು, ಸೋ ಕ್ಯೂಟ್​ ಎಂದಿದ್ದರು ಫ್ಯಾನ್ಸ್​​. ಅಣ್ಣನನ್ನು ತದೇಕ ಚಿತ್ತದಿಂದ  ನೋಡುತ್ತಿರುವ ಪುಟಾಣಿ ತನ್ನದೇ ತೊದಲು ಭಾಷೆಯಲ್ಲಿ ಅಣ್ಣನಿಗೆ ಉತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರಾಯನ್​ ಕೂಡ ಅದರ ಜೊತೆ ಮಾತುಕತೆಯಲ್ಲಿ ತೊಡಗಿದ್ದಾನೆ. ಮೇಘನಾ ರಾಜ್​ ಮಗಳನ್ನು ಎತ್ತಿಕೊಂಡಿದ್ದು, ಮಗನಿಗೆ ಏನು ಮಾತನಾಡಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ. ಈ ಕ್ಯೂಟ್​ ವಿಡಿಯೋಗೆ ಫ್ಯಾನ್ಸ್ ಫಿದಾ ಆಗಿದ್ದರು.
ಒಂದೂರಲ್ಲಿ ಒಬ್ಬ ರಾಜ ಇದ್ದ... ಚಿರಂಜೀವಿ ಸರ್ಜಾ ಕೊನೆಯ ಚಿತ್ರ 'ರಾಜಮಾರ್ತಾಂಡ'ದ ಟ್ರೇಲರ್​ ಬಿಡುಗಡೆ

Tap to resize

Latest Videos

ಇದೀಗ ರಾಯನ್ (Rayan) ಚಿಕ್ಕಪ್ಪ ಧ್ರುವ ಸರ್ಜಾ ನಿನ್ನೆ ಅಂದರೆ ಅಕ್ಟೋಬರ್​ 6ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ನಿಮಿತ್ತ  ಮೇಘನಾ ರಾಜ್​ ಕ್ಯೂಟ್​ ವಿಡಿಯೋ ಶೇರ್​ ಮಾಡಿದ್ದಾರೆ. ಅದರಲ್ಲಿ ಧ್ರುವ  ರಾಯನ್​ಗೆ ಡ್ಯಾನ್ಸ್ ಕಲಿಸುವುದನ್ನು ನೋಡಬಹುದು. ಚಿಕ್ಕಪ್ಪ ಹೇಳಿಕೊಟ್ಟಂತೆಯೇ ಡ್ಯಾನ್ಸ್​ ಮಾಡುವ ರಾಯನ್​ ಮುಗ್ಧತೆಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಕೊನೆಯಲ್ಲಿ ಧ್ರುವ ಸರ್ಜಾ ರಾಯನ್​ನನ್ನು  ಎತ್ತಿ  ಮುದ್ದಾಡಿದ್ದಾರೆ.  ತಮ್ಮದೇ ಸಿನಿಮಾದ ಹಾಡಿನ ಹುಕ್ ಸ್ಟೇಪ್ ಅನ್ನು ರಾಯನ್​ಗೆ  ಧ್ರುವ ಹೇಳಿಕೊಟ್ಟಿರುವುದನ್ನು ನೋಡಬಹುದು.  ಈ ವಿಡಿಯೋದಲ್ಲಿ ರಾಯನ್ ತಾತ, ನಟ ಸುಂದರ್ ರಾಜ್ ಕೂಡ ಇದ್ದಾರೆ. ಮೊಮ್ಮಗ ಡಾನ್ಸ್ ಕಂಡು ಅವರೂ ಸಂಭ್ರಮಿಸುವುದನ್ನು ನೋಡಬಹುದು.

 
ಅದೇ ಇನ್ನೊಂದೆಡೆ, ಚಿರಂಜೀವಿ ಅವರ ಕೊನೆಯ  ಚಿತ್ರ ರಾಜಮಾರ್ತಾಂಡ ಬಿಡುಗಡೆಗೆ ಸಜ್ಜಾಗಿದ್ದು, ಅದರ ಟ್ರೇಲರ್​  ಮೊನ್ನೆಯಷ್ಟೇ ರಿಲೀಸ್​ ಆಗಿದೆ. ಟ್ರೇಲರ್​ ನೋಡಿ ಫ್ಯಾನ್ಸ್ ಭಾವುಕರಾಗಿದ್ದು ಕಣ್ಣೀರು ಸುರಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಚಿರು ಇರುವಾಗಲೇ ಮುಗಿದಿತ್ತು. ಆದರೆ ಡಬ್ಬಿಂಗ್ ಮಾತ್ರ ಮುಗಿದಿರಲಿಲ್ಲ. ಆದರೆ ಇದೀಗ ಅದನ್ನು ಚಿರು ಸಹೋದರ, ನಟ ಧ್ರುವ ಸರ್ಜಾ ಅವರು ಕಂಪ್ಲೀಟ್ ಮಾಡಿಕೊಡಲಿದ್ದಾರೆ.  ಚಿತ್ರದಲ್ಲಿ ಅಣ್ಣ ಚಿರಂಜೀವಿ ಸರ್ಜಾ ಅವರಿಗೆ ತಮ್ಮ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಸಾಹಸಮಯ ದೃಶ್ಯಗಳಿರುವ ಟ್ರೈಲರ್‌ ಕುರಿತು ಆನ್‌ಲೈನ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಾರ ರಾಜಮಾರ್ತಾಂಡ ಚಿತ್ರವು ತೆರೆ ಕಾಣಲಿದೆ. ಧ್ರುವ ಸರ್ಜಾರ ಹುಟ್ಟುಹಬ್ಬದಂದೇ ಅಣ್ಣ ಚಿರಂಜೀವಿ ಸರ್ಜಾರ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ. ಇದಕ್ಕೆ ಪೂರ್ವಭಾವಿಯಾಗಿ ಚಿತ್ರತಂಡವು ಟ್ರೈಲರ್‌ ಬಿಡುಗಡೆ ಮಾಡಿದೆ. ರಾಮ್‌ನಾರಾಯಣ್‌ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರ ಧ್ವನಿಯಿದೆ. ಅಣ್ಣ ಅಕಾಲಿಕವಾಗಿ ಮೃತಪಟ್ಟ ಬಳಿಕ ತಮ್ಮ ಧ್ರುವ ಸರ್ಜಾ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು.

ಧ್ರುವ ಸರ್ಜಾ ಮಗಳಿಗೆ ಒಂದು ವರ್ಷ: ತಂಗಿಯ ಜೊತೆ ಚಿರು ಪುತ್ರನ ಕ್ಯೂಟ್​ ಮಾತುಕತೆ ವೈರಲ್

 

click me!