ನಿರ್ದೇಶನ, ನಿರ್ಮಾಣಕ್ಕಿಳಿದ ದುನಿಯಾ ಕಿಶೋರ್; ಸಿನಿಮಾ ಹೆಸರು ಅಹಾನಿ!

By Suvarna NewsFirst Published Jun 10, 2021, 5:18 PM IST
Highlights

ದುನಿಯಾ ಕಿಶೋರ್ ಇದೀಗ ತಮ್ಮದೆ ನಿರ್ಮಾಣ ಸಂಸ್ಥೆ ತೆರೆದಿದ್ದಾರೆ.  ಸ್ವತಃ ಕಿಶೋರ್ ಅವರೇ ನಿರ್ದೇಶನ ಮಾಡುತ್ತಿರುವ ಸಿನಿಮಾ 'ಅಹಾನಿ' ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 
 

ನಟನೆ ಹಾಗೂ ಕೃಷಿಗೆ ಸೀಮಿತವಾಗಿದ್ದ ಕಿಶೋರ್ ವಿಸ್ತಾರ ಹೆಸರಿನಲ್ಲಿ ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದು, ತಮ್ಮ ನಿರ್ದೇಶನದ ಚಿತ್ರದ ಕತೆಯ ಮೊದಲ ಡ್ರಾಫ್ಟ್‌ ಕೂಡ ರೆಡಿ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ‘ಅಹಾನಿ’ ಎನ್ನುವ ಹೆಸರಿಟ್ಟಿದ್ದಾರೆ.

‘ಹೊಸಬರನ್ನೇ ಹಾಕಿಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಕತೆ ತಯಾರಿ ಹಾಗೂ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ ಸಿನಿಮಾ. ಇದು ಚಿತ್ರರಂಗದಲ್ಲಿ ನನ್ನ ಮತ್ತೊಂದು ಹೊಸ ಹೆಜ್ಜೆ ಅಂದುಕೊಳ್ಳಬಹುದು. ಯಾಕೆಂದರೆ ಇಲ್ಲಿವರೆಗೂ ನಟನಾಗಿದ್ದೆ. ಈಗ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಮುಂದಾಗಿರುವೆ’ ಎಂಬುದು ದುನಿಯಾ ಕಿಶೋರ್ ಮಾತುಗಳು.

ದುನಿಯಾ v/s ಸಿಂಹ; ಹೊಸ ಚಿತ್ರಕ್ಕೆ ಜತೆಯಾದ ಇಬ್ಬರು ಖಡಕ್‌ ಕಲಾವಿದರು! 

ಇದೊಂದು ಥ್ರಿಲ್ಲರ್ ಜಾನರ್ ಸಿನಿಮಾ ಆಗಿದ್ದು, ಕನ್ನಡದ ಜತೆಗೆ ತಮಿಳಿನಲ್ಲೂ ಮೂಡಿ ಬರಲಿದೆ. ಚಿತ್ರದಲ್ಲಿ ತಾವು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು, ಮುಂದಿನ ದಿನಗಳಲ್ಲಿ ಆ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರೆ ಕಿಶೋರ್.

click me!