
ನಟ ದರ್ಶನ್ ಮೃಗಾಲಯದಲ್ಲಿನ ಪ್ರಾಣಿಗಳನ್ನು ದತ್ತು ಪಡೆಯಲು ಕರೆ ಕೊಟ್ಟಿರುವುದಕ್ಕೆ ನಿರ್ಮಾಪಕಿ ಶ್ರುತಿ ನಾಯ್ಡು ಸ್ಪಂದಿಸಿದ್ದಾರೆ. ಹಿರಿಯ ನಟ ಸುಂದರ ಕೃಷ್ಣ ಅರಸ್ ಅವರ ಮೊಮ್ಮಗ ಧೀರ ರಾಜೇಂದ್ರ ಅರಸ್ ಹೆಸರಿನಲ್ಲಿ ಮೈಸೂರು ಮೃಗಾಲಯದಿಂದ ಜೀಬ್ರಾವೊಂದನ್ನು ದತ್ತು ಪಡೆದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್‌ಟ್ ಹಾಕಿರುವ ಶ್ರುತಿ ಅವರು, ‘ನೆಕ್ಸಟ್ ಜನರೇಶನ್‌ನ ಮಕ್ಕಳಿಗೆ ಪ್ರಾಣಿಗಳ ಬಗ್ಗೆ ಪ್ರೀತಿ, ನಿಸರ್ಗದ ಬಗೆಗೆ ಗೌರವ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ಚಿಕ್ಕ ಹುಡುಗ ಧೀರ ರಾಜೇಂದ್ರ ಅರಸ್ ಹೆಸರಿನಲ್ಲಿ ಜೀಬ್ರಾ ದತ್ತು ಪಡೆದಿದ್ದೇನೆ’ ಎಂದಿದ್ದಾರೆ.
ದರ್ಶನ್ ಸಮ್ಮುಖದಲ್ಲಿಯೇ ಪ್ರಾಣಿ ದತ್ತು ಪಡೆದ ಇಂಡುವಾಳು ಸಚ್ಚಿದಾನಂದ
ಕನ್ನಡಪ್ರಭ ಹಾಗೂ ಏಶ್ಯಾನೆಟ್ ಸುವರ್ಣ ನ್ಯೂಸ್‌ನ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲೂ ಶ್ರುತಿ ನಾಯ್ಡು ಅವರು ಭಾಗವಹಿಸಿದ್ದಾರೆ. ಪ್ರಕೃತಿ ಬಗೆಗಿನ ಅವರ ಪ್ರೀತಿಗೆ ಈ ಜೀಬ್ರಾ ದತ್ತು ಸ್ವೀಕಾರ ಮತ್ತೊಂದು ನಿದರ್ಶನವಾಗಿದೆ.
ನಟ ಪ್ರಮೋದ್ ಮೈಸೂರು ಮೃಗಾಲಯದಲ್ಲಿ ಬಿಳಿ ನವಿಲನ್ನು ದತ್ತು ಪಡೆದಿದ್ದಾರೆ. ನಟ ದರ್ಶನ್ ಅಭಿಮಾನಿಗಳು, ಸೆಲೆಬ್ರಿಟಿಗಳು, ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿ ಇರುವವರು ಹೀಗೆ ರಾಜ್ಯಾದ್ಯಾಂತ ನೂರಾರೂ ಮಂದಿ ಮೃಗಾಲಯಗಳಲ್ಲಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸಿದ್ದು, ಪ್ರಮೋದ್ ಕೂಡ ಜತೆಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.