ತುಳು ಧ್ವಜ ಹೋಲುವಂತ ಚಪ್ಪಲಿ ವಿನ್ಯಾಸ ನೋಡಿ ನಟಿ ಅದ್ವಿತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
'ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಇದೀಗ ತಮ್ಮ ನಾಡಿನ ತುಳು ಧ್ವಜಕ್ಕೆ ಅಪಮಾನ ಮಾಡಿರುವ ವ್ಯಕ್ತಿ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶುಗರ್ ಫ್ಯಾಕ್ಟ್ರಿ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ, ಪಾತ್ರವೇನು..?
ಹೌದು! ಕೆಲವು ದಿನಗಳಿಂದೆ ಸಾಮಾಜಿಕ ಜಾಲತಾಣದಲ್ಲಿ ತುಳು ಧ್ವಜ ಹೋಲುವ ಚಪ್ಪಲಿ ವೈರಲ್ ಆಗುತ್ತಿದೆ. 'ಇವತ್ತು ತುಳುನಾಡ್ ಚಪ್ಪಲ್ ಬಂದಿದೆ. ನಾಳೆ ಬಿಕಿನಿಯೂ ಬರಬಹುದು ಹಾಕಿಕೊಂಡು ಮಜಾ ಮಾಡಿ,' ಎಂದು ಕಾಮೆಂಟ್‌ನಲ್ಲಿ ಚಪ್ಪಲಿ ಫೋಟೋ ಹಾಕಿದ ವ್ಯಕ್ತಿ ಬಗ್ಗೆ ಅದ್ವಿತಿ ಮಾಹಿತಿ ಕಲೆ ಹಾಕಿದ್ದಾರೆ. ಇದರ screenshot ತೆಗೆದುಕೊಂಡು ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಹಂಚಿಕೊಂಡಿದ್ದಾರೆ.
'ಇದನ್ನು ನಾನು ಒಪ್ಪಿಕೊಳ್ಳವುದಿಲ್ಲ. ತುಳು ನನ್ನ ಮಾತೃ ಭಾಷೆ. ನಾನು ಹೆಮ್ಮೆಯಿಂದ ಹೇಳಿಕೊಳ್ಳುವೆ, ನಾನು ತುಳುವ ಎಂದು. ಆದರೆ ಇದನ್ನು ನೋಡಲು ಬೇಸರವಾಗುತ್ತದೆ. ಈ ರೀತಿಯೂ ಮಾಡುತ್ತಾರೆ ಎಂದು ಇವತ್ತು ನನಗೆ ತಿಳಿದು ಬಂದಿದೆ. ಯಾರೂ ಯಾರ ಭಾಷೆ ಬಗ್ಗೆಯೂ ಕೆಟ್ಟದಾಗಿ ಮಾತನಾಡ ಬಾರದು. ನಮ್ಮ ಸುತ್ತು ತುಂಬಾ ವಿಚಾರಗಳು ನಡೆಯುತ್ತಿವೆ. ಅದರ ಬಗ್ಗೆ ಮಾತನಾಡಿ, ಅಲ್ಲಿ ಆಗುತ್ತಿರುವ ತಪ್ಪುಗಳನ್ನು ದೂರಿ. ಆದರೆ ಯಾಕೆ ಒಂದು ಭಾಷೆ ಬಗ್ಗೆ ಈ ರೀತಿ ದ್ವೇಷ ಹುಟ್ಟಿಸಿಕೊಳ್ಳುತ್ತೀರಾ? ನನಗೆ ಕನ್ನಡ ಎಷ್ಟು ಇಷ್ಟವೋ, ನನ್ನ ತುಳು ಅಂದ್ರೆ ಅಷ್ಟೇ ಇಷ್ಟ. ನಾನು ಹೆಮ್ಮೆಯ ಬಂಟ್. ಹೀಗೆ ಮಾಡಿರುವ ವ್ಯಕ್ತಿಗೆ ಆದಷ್ಟು ಬೇಗ ಶಿಕ್ಷೆ ಆಗಬೇಕು,' ಎಂದು ಅದ್ವಿತಿ ಆಗ್ರಹಿಸಿದ್ದಾರೆ.