
'ಗಣಿಧಣಿ' ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ನಟನೆಯ 'ಜ್ಯೂನಿಯರ್' ಸಿನಿಮಾ ಇಂದು ( ಜುಲೈ 18 ) ರಿಲೀಸ್ ಆಗಿದೆ. ಈ ಸಿನಿಮಾ ನೋಡಿದ ವೀಕ್ಷಕರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವೀಕ್ಷಕರು ಹೇಳಿದ್ದೇನು?
ಮೊದಲ ಸಿನಿಮಾವಾದರೂ ಕೂಡ ಶೋಸ್‌ಟಾಪರ್ ಆದ ಕಿರೀಟಿ. ಸೂಪರ್ ಡ್ಯಾನ್ಸ್ ಸ್ಟೆಪ್‌ಗಳು, ಎನರ್ಜಿ ಇಡೀ ಸಿನಿಮಾವನ್ನು ಎತ್ತುವುದು. ಫೈಟ್ ದೃಶ್ಯಗಳು ಸಖತ್ ಆಗಿವೆ. ನಿಜಕ್ಕೂ ನಟನೆ ಸಖತ್ ಆಗಿದೆ. ಇವರಿಗೆ ಒಳ್ಳೆಯ ಭವಿಷ್ಯವಿದೆ.
ಜ್ಯೂನಿಯರ್ ಸಿನಿಮಾ ಎವರೇಜ್ ಆಗಿದೆ. ಫಸ್ಟ್ ಹಾಫ್ ಓಕೆ, ಸೆಕೆಂಡ್ ಹಾಫ್ ಎಮೋಶನಲ್ ಆಗಿದೆ, ಸೆಕೆಂಡ್ ಹಾಫ್ ಸಂಗೀತ ಚೆನ್ನಾಗಿದೆ. ಕಿರೀಟಿ ನಟನೆ ಚೆನ್ನಾಗಿದೆ. ಜೆನಿಲಿಯಾ ಅವರನ್ನು ನೋಡುವುದು ಖುಷಿ ಕೊಟ್ಟಿದೆ.
ಕಾಮಿಡಿ, ಆಕ್ಷನ್, ಎಮೋಶನ್ ಎಲ್ಲವೂ ಇರುವ ಭರ್ಜರಿ ಸಿನಿಮಾವಿದು. ಪಕ್ಕಾ ಎಂಟರ್‌ಟೇನರ್ ಸಿನಿಮಾ. ಕಿರೀಟಿ ಔಟ್‌ಸ್ಟ್ಯಾಂಡಿಂಗ್, ಜೆನಿಲಿಯಾ ಸೊಲಿಡ್, ಶ್ರೀಲೀಲಾ ಡಿಸೆಂಟ್.
ಕಾನ್ಫಿಡೆಂಟ್ ಆಗಿ, ಉತ್ತಮ ಚಿತ್ರಕಥೆ ಜೊತೆಗೆ ಸೊಲಿಡ್ ಡ್ಯಾನ್ಸ್ ಮಾಡಿ, ಅಷ್ಟೇ ಅಲ್ಲದೆ ಸರ್ಪ್ರೈಸ್ ಎನಿಸುವಂತೆ ಎಮೋಶನಲ್ ಆಗಿದ್ದಾರೆ. ನಿಮ್ಮನ್ನು ಸಿನಿಮಾ ನೋಡುವಂತೆ ಮಾಡುವ ಡಿಸೆಂಟ್ ಸಿನಿಮಾವಿದು.
ಕೊರತೆ ಆಗಿದ್ದು ಎಲ್ಲಿ?
ಕಿರೀಟಿ ಡ್ಯಾನ್ಸ್, ನಟನೆ, ಫೈಟ್ ಚೆನ್ನಾಗಿದ್ರೂ ಕೂಡ ಕಥೆಯಲ್ಲಿ ಇನ್ನಷ್ಟು ಗಟ್ಟುತನ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ಲಸ್ ಪಾಯಿಂಟ್ ಏನು?
ಶ್ರೀಲೀಲಾ ಕೂಡ ತನ್ನ ಎನರ್ಜಿ ಮೂಲಕ ಸಿನಿಮಾಕ್ಕೆ ಗ್ಲಾಮರ್ ನೀಡಿದ್ದಾರೆ. ಇನ್ನು ಜೆನಿಲಿಯಾ ಕೂಡ ಮೆರುಗು ನೀಡಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನ, ದೇವಿಶ್ರೀ ಪ್ರಸಾದ್ ಸಂಗೀತ ಈ ಸಿನಿಮಾಕ್ಕಿದೆ. ವಿ ರವಿಚಂದ್ರನ್, ರಾವ್ ರಮೇಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಅದ್ದೂರಿಯಾಗಿ ನಡೆದಿದ್ದ ಪ್ರಿ ರಿಲೀಸ್ ಇವೆಂಟ್
ಈ ಸಿನಿಮಾದ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿರುವ ಶಿವರಾಜ್‌ಕುಮಾರ್, ನಾನು ಮಾಧುರಿ ದೀಕ್ಷಿತ್ ಅವ್ರ ಅಭಿಮಾನಿ. ಈಗ ಶ್ರೀಲೀಲಾ ಅಭಿಮಾನಿ ಆಗಿದ್ದೀನಿ. ‘ಕಿರೀಟಿಯ ಡ್ಯಾನ್ಸ್ ನೋಡಿದರೆ ಅಪ್ಪು ಡ್ಯಾನ್ಸ್ ನೋಡಿದಂತೆ ಅನಿಸುತ್ತದೆ. ಅವರಿಗೆ ಒಳ್ಳೆಯದಾಗಲಿ. ಇವರಿಬ್ಬರು ಜೂನಿಯರ್ ಅಲ್ಲ..ಸೂಪರ್ ಸೀನಿಯರ್. ನಟ ರವಿಚಂದ್ರನ್ ಹಾಗೂ ನಾನು ಎರಡು ದೇಹ ಒಂದೇ ಆತ್ಮ” ಎಂದು ಹೇಳಿದ್ದರು.
ರವಿಚಂದ್ರನ್ ಮಾತನಾಡಿ, “ ಈ ಸಿನಿಮಾದಲ್ಲಿ ಕಿರೀಟಿ ನೂರಕ್ಕೆ ನೂರಷ್ಟು ಪ್ರಯತ್ನ ಹಾಕಿದ್ದಾನೆ. ಎಂದಿಗೂ ಅವನು ಜನಾರ್ಧನ ರೆಡ್ಡಿ ಮಗನ ಥರ ವರ್ತಿಸಿಲ್ಲ. ಅವನು ತನ್ನ ಪಾತ್ರದಲ್ಲಿ ಜೀವಿಸಿದ್ದಾನೆ” ಎಂದು ಹೇಳಿದ್ದರು.
ಕಿರೀಟಿ ಮಾತನಾಡಿ, ‘ಜೋಗಿ’ ಸಿನಿಮಾದ ಹೊಡಿ ಮಗ ಸಾಂಗ್ ನೋಡಿಯೇ ನಾನು ಮೊದಲು ಡಾನ್ಸ್ ಮಾಡಿದ್ದು. ಪುನೀತ್ ರಾಜ್‌ಕುಮಾರ್ ಅವರ ‘ಜಾಕಿ’ ಸಿನಿಮಾ ನೋಡಿ ನಟ ಆಗಬೇಕು ಎಂದುಕೊಂಡೆ. ನನ್ನ ತಂದೆ ನನಗೋಸ್ಕರ ತುಂಬ ತ್ಯಾಗ ಮಾಡಿದ್ದಾರೆ. ನನಲ್ಲಿ ಛಲ ತುಂಬಿದ್ದೆ ನನ್ನ ತಂದೆ, ಅದ್ಭುತವಾದ ತಂದೆಗೆ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ” ಎಂದು ಹೇಳಿದರು.
ನಾಯಕಿ ಶ್ರೀಲೀಲಾ ಮಾತನಾಡಿ, ‘ನಾನು ಮೊದಲ ವರ್ಷ ಎಂಬಿಬಿಎಸ್ ವಿದ್ಯಾರ್ಥಿ ಆಗಿದ್ದಾಗ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಯ್ತು, ಈಗ ನಾನು ಡಾಕ್ಟರ್ ಆಗಿದ್ದೇನೆ, ಈಗ ಸಿನಿಮಾ ರಿಲೀಸ್ ಆಗ್ತಿದೆ. ಸಿನಿಮಾದ ನಿರ್ದೇಶಕರು ನಿಧಾನವಾದರೂ ಕೂಡ, ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಾನು ಆ ಕಾಲದಲ್ಲಿ ಹುಟ್ಟಿದ್ರೆ ರವಿಚಂದ್ರನ್ ಸರ್‌ಗೆ ನಾಯಕಿ ಆಗುತ್ತಿದ್ದೆ. ಶಿವರಾಜ್ ಕುಮಾರ್ ಸರ್ ಸಿನಿಮಾದಲ್ಲಿ ನಟಿಸ್ತೀನಿ” ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.