
ನಟ ಮತ್ತು ನಿರ್ದೇಶಕ ಅಭಿಷೇಕ್ ಶೆಟ್ಟಿ, ತೆರೆ ಮರೆಯಲ್ಲಿರುವ ಕಲಾವಿದರಿಗೊಂದು ಅವಕಾಶ ನೀಡ್ತಿದ್ದಾರೆ. ಅವರ ಮುಂದಿನ ಚಿತ್ರ ಗಣಿ ಬಿ.ಕಾಂ. ಪಾಸ್ 2 ಚಿತ್ರದಲ್ಲಿ ಪ್ರೋಮೋ ವಿಡಿಯೋದಲ್ಲಿ ಸಾರ್ವಜನಿಕರು ಕಾಣಿಸಿಕೊಳ್ಬಹುದು. ಅಭಿಷೇಕ್ ಶೆಟ್ಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೊಡ್ಡ ಪೋಸ್ಟರ್ ಒಂದನ್ನು ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಭಿಷೇಕ್ ಶೆಟ್ಟಿ, ನಾಳೆಯ ಪರದೆ ನಿಮ್ಮನ್ನು ನಿರೀಕ್ಷಿಸುತ್ತಿದೆ – ಇಂದು ನಿಮ್ಮ ಪ್ರತಿಭೆಯನ್ನು ತೋರಿಸಿ ಎನ್ನುವ ಶೀರ್ಷಿಕೆ ಹಾಕಿದ್ದಾರೆ.
ಯಾರಿಗೆ ಅವಕಾಶ? : ಇಲ್ಲಿ ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ಅನುಭವದ ಅಗತ್ಯವಿಲ್ಲ. ನಟಿಸೋ ಧೈರ್ಯ ನಿಮ್ಮಲ್ಲಿದ್ರೆ ಸಾಕು. ಗಣಿ ಬಿ.ಕಾಂ. ಪಾಸ್ 2 ಸಿನಿಮಾದ ಪ್ರೋಮೋ ವಿಡಿಯೋದಲ್ಲಿ ನೀವು ಕಾಣಿಸ್ಕೊಳ್ಬಹುದು.
ಆಸಕ್ತರು ಏನು ಮಾಡ್ಬೇಕು? : ಸಿನಿಮಾ ಡೈಲಾಗ್ ಗಳನ್ನು ನೀವು ಅಭಿನಯಿಸಿ, ಅದನ್ನು ವಿಡಿಯೋ ಮಾಡಿ, ಅಭಿಷೇಕ್ ನೀಡಿರುವ ಇ ಮೇಲ್ ಅಥವಾ ಫೋನ್ ನಂಬರ್ ಗೆ ವಾಟ್ಸ್ ಅಪ್ ಮಾಡ್ಬೇಕು. ಯಾರು ಅತ್ಯುತ್ತಮರು ಅನ್ನಿಸ್ತಾರೋ ಅವರಿಗೆ ಸಿನಿಮಾ ತಂಡ ಅವಕಾಶ ನೀಡುತ್ತೆ. ಸಿನಿಮಾ ಪ್ರೋಮೋದಲ್ಲಿ ಅಭಿನಯಿಸಲು ನಿಮಗೆ ಅವಕಾಶ ಸಿಗುತ್ತೆ. ಆಗಸ್ಟ್ 25ರವರೆಗೆ ನಿಮಗೆ ಅವಕಾಶ ಇದೆ. ಅಷ್ಟರೊಳಗೆ ನೀವು ಸಿನಿಮಾ ಡೈಲಾಗ್ ಹೇಳಿ ವಿಡಿಯೋ ಮಾಡಿ ಪೋಸ್ಟ್ ಮಾಡಿ. adhvi.creation@gmail.com ಅಥವಾ 918904804777 ಫೋನ್ ನಂಬರ್ ಗೆ ನೀವು ವಿಡಿಯೋ ಕಳುಹಿಸಬಹುದು.
ಗಣಿ ಬಿ.ಕಾಂ. ಪಾಸ್ 2 ಸಿನಿಮಾ, ನಮ್ ಗಣಿ ಬಿ.ಕಾಂ. ಪಾಸ್ ಸಿನಿಮಾ ಸಿಕ್ವೆನ್ಸ್. ಇದನ್ನು ಅಭಿಷೇಕ್ ಅವರೇ ನಿರ್ದೇಶನ ಮಾಡಿ, ನಟಿಸ್ತಿದ್ದಾರೆ. ಹಿಂದಿನ ವರ್ಷ ಅಭಿಷೇಕ್ ಹುಟ್ಟುಹಬ್ಬದ ಟೈಂನಲ್ಲಿ ಸಿನಿಮಾ ಬಗ್ಗೆ ಅಧಿಕೃತ ಘೋಷಣೆಯಾಗಿತ್ತು. ನಂತ್ರ ಚಿತ್ರ ತಂಡ ಸಿನಿಮಾ ಶೂಟಿಂಗ್ ಶುರು ಮಾಡಿತ್ತು. 2025ರ ಫೆಬ್ರವರಿಯಲ್ಲೇ ಸಿನಿಮಾ ಶೂಟಿಂಗ್ ಮುಗಿದಿದೆ. ಸಿನಿಮಾ ಸದ್ಯ ಎಡಿಟಿಂಗ್ ಹಂತದಲ್ಲಿದೆ.
ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವಿದೆ. ಅಭಿಷೇಕ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಹೃತಿಕಾ ಶ್ರೀನಿವಾಸ್, ದಿವ್ಯಾ ಸುರೇಶ್, ಸುಧಾ ಬೆಳವಾಡಿ, ರಾಘು ರಾಮನಕೊಪ್ಪ ಹಾಗೂ ಜಹಂಗೀರ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಚಿತ್ರವನ್ನು ಬಿ.ಎಸ್. ಪ್ರಶಾಂತ್ ಶೆಟ್ಟಿ ಮತ್ತು ಪ್ರಶಾಂತ್ ರೆಡ್ಡಿ ನಿರ್ಮಿಸ್ತಿದ್ದು, ಅದ್ವಿ ಕ್ರಿಯೇಷನ್ಸ್ ಮತ್ತು 786 ಫಿಲಂಸ್ ನಿರ್ಮಾಣದ ಹೊಣೆ ಹೊತ್ತಿದೆ.
ನಮ್ ಗಣಿ ಬಿ.ಕಾಂ. ಪಾಸ್ ಸಿನಿಮಾ 2019 ರಲ್ಲಿ ತೆರೆಗೆ ಬಂದಿತ್ತು. ಕೌಟುಂಬಿ ಚಿತ್ರ ಪ್ರೇಕ್ಷಕರಿಗೆ ಹತ್ತಿರವಾಗಿತ್ತು. ಗಣಿ ಬಿ.ಕಾಂ. ಪಾಸ್ 2 ಕೂಡ ಕೌಟುಂಬಿಕ ಚಿತ್ರವಾಗಿದೆ. ಸಿನಿಮಾಕ್ಕೆ ಸುಮಂತ್ ಆಚಾರ್ ಛಾಯಾಗ್ರಹಣ ಮಾಡಿದ್ರೆ ಆನಂದ್ ರಾಜ್ ವಿಕ್ರಮ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಮ್ ಗಣಿ ಬಿ.ಕಾಂ. ಪಾಸ್ ಸಿನಿಮಾ ನೋಡಿದ ವೀಕ್ಷಕರು ಅದ್ರ ಸೀಕ್ವೆನ್ಸ್ ನೋಡಲು ಕಾತುರರಾಗಿದ್ದಾರೆ. ಸಿನಿಮಾ ಇದೇ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಅಭಿಷೇಕ್ ಶೆಟ್ಟಿ ಪೋಸ್ಟ್ ನೋಡಿದ ಆಸಕ್ತರು, ತಮಗೆ ಅವಕಾಶ ನೀಡುವಂತೆ ಮೆಸ್ಸೇಜ್ ಹಾಕ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.