ಚಿತ್ರದುರ್ಗ ಕೋಟೆಯ ಮಾರ್ಗದರ್ಶಕರಿಗೆ ನೆರವಾದ ಕಿಚ್ಚ

By Suvarna NewsFirst Published May 29, 2021, 10:45 PM IST
Highlights

* ಚಿತ್ರದುರ್ಗ ಕೋಟೆಯ ಮಾರ್ಗದರ್ಶಕರಿಗೆ ಕಿಚ್ಚನ ಸಹಾಯ..!
* ಕೋಟೆಯ ಮಾರ್ಗದರ್ಶಕರಿಗೆ ಆಹಾರದ ಕಿಟ್ ವಿತರಣೆ..
* ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸದಸ್ಯರು ಚಿತ್ರದುರ್ಗ ಕ್ಕೆ ಹೋಗಿ ಕಿಟ್ ವಿತರಣೆ..

ಚಿತ್ರದುರ್ಗ, (ಮೇ.29): ಕೋಟೆನಾಡು ಎಂದರೆ ನೆನಪಾಗುವುದೇ ಇಲ್ಲಿನ ಪಾಳೇಗಾರ ಮದಕರಿ ನಾಯಕ, ವೀರವನಿತೆ ಒನಕೆ ಓಬವ್ವ ಮತ್ತು ಇಲ್ಲಿನ ಒಂದಷ್ಟು ಐತಿಹಾಸಿಕ ಸ್ಥಳಗಳು. 

ಆದ್ರೆ, ಇದೀಗ ಸರ್ಕಾರ ಲಾಕ್​ಡೌನ್ ಜಾರಿಗೊಳಿಸಿದ ಪರಿಣಾಮ ಇಲ್ಲಿನ ಮಾರ್ಗದರ್ಶಿ​ಗಳು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯ ತಿಳಿದ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸದಸ್ಯರು ಚಿತ್ರದುರ್ಗಕ್ಕೆ ಹೋಗಿ ಗೈಡ್ಸ್‌ಗಳಿಗೆ ಆಗಾರದ ಕಿಟ್ ವಿತರಣೆ ಮಾಡಿದರು. 

ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ನಿಂತ ಕಿಚ್ಚ ಸುದೀಪ್

ಆಕ್ಸಿಜನ್ ಸಿಲಿಂಡರ್ ಪೂರೈಕೆ, ದಿನಸಿ ಸಾಮಾನುಗಳ ಪೂರೈಕೆ, ಆರ್ಥಿಕವಾಗಿ ಕೂಡ ಸಹಾಯ ಮಾಡುತ್ತಿದ್ದಾರೆ. ಇದೀಗ ಚಿತ್ರದುರ್ಗ ಕೋಟೆಯ ವಿಶೇಷತೆಗಳನ್ನು ಪ್ರವಾಸಿಗರಿಗೆ ಸಾರುವ ಮಾರ್ಗದರ್ಶಿಗಳ ನೆರವಿಗೆ ಧಾವಿಸಿದ್ದಾರೆ.

ಕೊರೋನಾ ಎರಡನೇ ಅಲೆ ತೀವ್ರವಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಲಾಕ್​ಡೌನ್ ಜಾರಿಗೊಳಿಸಿದೆ. ಆದರೆ ಇದರಿಂದಾಗಿ ದಿನಗೂಲಿಗಾರರು, ವ್ಯಾಪಾರಿಗಳು ಮತ್ತು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲೂ ಕೂಡ ಆತಂಕ ಶುರುವಾಗಿದ್ದು, ಮುಖ್ಯವಾಗಿ ಇಲ್ಲಿನ ಮಾರ್ಗದರ್ಶಿ​ಗಳು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರವಾಸಿಗರು ನೀಡುವ ಹಣದಿಂದಲೇ ಇಲ್ಲಿನ ಗೈಡ್ಸ್‌ ಸುಮಾರು ವರ್ಷಗಳಿಂದ ಬದುಕು ಸಾಗಿಸುತ್ತಿದ್ದಾರೆ. ಇದೀಗೆ ಎಲ್ಲವೂ ಬಂದ್ ಆಗಿದ್ದರಿಂದ ಜೀವನಕ್ಕೆ ಹೊಡೆತಬಿದ್ದಿದೆ.

click me!