
ಸುಮಾರು 6 ದಿನಗಳ ಕಾಲ ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಿರುವ ಕಿರುಚಿತ್ರ 'ಕನಸಿನ ಮಳೆಯಾದಳು' ಸೋಷಿಯಲ್ ಮೀಡಿಯಾದಲ್ಲಿ ದೂಳ್ ಎಬ್ಬಿಸುತ್ತಿದೆ. ರಾಮಚಂದ್ರ ಸಾಗರ್ ಚಿತ್ರಕಥೆಗೆ ಸುಕೇಶ್ ಮಿಜರ್ ನಿರ್ದೇಶನ ಜೀವ ತುಂಬಿದೆ. ಹಾಡುಗಳು ಅದ್ಭುತವಾಗಿ ಮೂಡಿ ಬರಲು ಆಕಾಶ್ ಪರ್ವಾ, ವಿನಾಯಕ ಅರಳಸುರಳಿ ಹಾಗೂ ವಿಕಾಸ್ ವಸಿಷ್ಠ ಕಾರಣ.
A2 ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ 'ಕನಸಿನ ಮಳೆಯಾದಳು' ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಯುಟ್ಯೂಬ್ ಟ್ರೆಂಡಿಂಗ್ ಲಿಸ್ಟ್ ಮುಟ್ಟಿದೆ. ಚಿತ್ರದ ನಾಯಕ ವಿಕಾಶ್ ಉತ್ತಯ್ಯ ವೃತ್ತಿಯಲ್ಲಿ ವಕೀಲರು. ಸಿನಿಮಾ ಲೋಕದ ಬಗ್ಗೆ ಪ್ಯಾಷನ್ ಹೊಂದಿದ್ದು, ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ 'ಶಾತಂ ಪಾಪಂ' ಸೀರಿಸ್ ಮೂಲಕ ಖ್ಯಾತಿ ಪಡೆದಿದ್ದಾರೆ. ನಾಯಕಿ ಮಧುರಾ ಆರ್.ಜೆ. ರಂಗಭೂಮಿ ಕಲಾವಿದೆ. ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಸಿನಿಮಾ ಮೂಲಕ ಜನಪ್ರಿಯತೆ ಪಡೆದಿರುವ ಪ್ರಕಾಶ್ ತುಮಿನಾಡ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಂದನ್ ಶೆಟ್ಟಿ ಹೊಸ ಮ್ಯೂಸಿಕ್ ವೀಡಿಯೋ ಸಲಿಗೆ ರಿಲೀಸ್!
ಸುಕೇಶ್ ಮಿಜರ್ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ ಇದಾದರೂ, ಈ ಹಿಂದೆ DOP ಆಗಿ ಕಿರುಚಿತ್ರ ಹಾಗೂ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಕೊರೋನಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೇ ಜೂನ್ 5ರಂದು V4Stream ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನವೇ ಸಿನಿಮಾ ವೀಕ್ಷಿಸಬೇಕೆಂದರೆ +91-9535864672 ಅಥವಾ +91-9741570162 ಸಂಪರ್ಕಿಸಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.