ಕಿಚ್ಚ ಸುದೀಪ್ ಕಾಣಿಸಿಕೊಳ್ಳುತ್ತಿರುವ ರಮ್ಮಿ ಜಾಹೀರಾತು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದು ಸಮಾಜದ ಒಳಿತೆಗೆ ಮಾರಕವೆಂದು ಹೇಳುತ್ತಿದೆ ಸರ್ವ ಸಂಘಟನೆಗಳ ಒಕ್ಕೂಟ. ಏನಿದು ಆ್ಯಡ್?
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿರುತೆರೆ, ಸಿನಿಮಾ ಹಾಗೂ ಜಾಹೀರಾತು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕರುನಾಡಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಸಿದ್ಧ ನಟ. ಇವರನ್ನು ಕಣ್ಣು ಮುಚ್ಚಿಕೊಂಡು ಫಾಲೋ ಮಾಡೋ ಮಂದಿ ಹಲವರಿದ್ದಾರೆ. ಇವರು ಇಡುವ ಪ್ರತೀ ಹೆಜ್ಜೆಯೂ ಸುತ್ತಮುತ್ತಲ ಜನರನ್ನು ಮನದಲ್ಲಿಟ್ಟುಕೊಂಡೇ ಇಡಬೇಕು. ಇದೀಗ ರಮ್ಮಿ (ಜೂಜಾಟ) ಜಾಹೀರಾತುವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಯಾಕೋ ಜನರು ಗರಂ ಆಗಿದ್ದಾರೆ. ಜನರನ್ನು ದಾರಿಗೆ ತಪ್ಪಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಜನರನ್ನು ಕೆಟ್ಟ ಚಟಗಳಿಗೆ ದೂಡುವಂಥ ಜಾಹೀರಾತಿನಲ್ಲಿ ಸುದೀಪ್ ಕಾಣಿಸಿಕೊಳ್ಳಬಾರದೆಂಬುವುದು ಎಲ್ಲರ ಆಶಯ. ಅಂತೆಯೇ ಸರ್ವ ಸಂಘಟನೆಗಳ ಒಕ್ಕೂಟ ಈ ಸಂಬಂಧವಾಗಿ ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಿಸಿದ್ದು, ಈ ಜಾಹೀರಾತನ್ನು ನಿಷೇಧಿಸುವಂತೆ ಆಗ್ರಹಿಸಿದೆ.
undefined
ಸುದೀಪ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕಲಾವಿದ. ಅವರು ಇಂತಹ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಜನರು ತಪ್ಪು ಹಾದಿ ಹಿಡಿಯುವಂತೆ ಪ್ರಚೋದಿಸುತ್ತದೆ. ಇದರಿಂದ ಅವರು ಹೊರ ಬರಬೇಕು ಎಂದು ಸಂಘಟನೆಯ ಅಧ್ಯಕ್ಷರು ಆಗ್ರಹಿಸಿದ್ದಾರೆ.
ಇಂತಹ ಜಾಹೀರಾತಿನಿಂದ ಸುದೀಪ್ ಮಾರ್ಚ್ 5ರೊಳಗೆ ಹೊರ ಬರದಿದ್ದರೆ, ಸುದೀಪ್ ನಿವಾಸದ ಬಳಿ ಹೋರಾಡಲು ಮುಂದಾಗುತ್ತೇವೆ, ಎಂದು ಸಂಘಟನೆ ಎಚ್ಚರಿಕೆಯನ್ನೂ ನೀಡಿದೆ.
ಈ ಹಿಂದೆ ಬಾಲಿವುಡ್ ನಟ ಅಜಯ್ ದೇವಗನ್ 'ವಿಮಲ್, ಕಣ ಕಣದಲ್ಲೂ ಕೇಸರಿ' ಎಂಬ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಾಗಲೂ ಈ ರೀತಿಯ ವಿರೋಧ ವ್ಯಕ್ತವಾಗಿತ್ತು. ಆರೋಗ್ಯಕ್ಕೆ ಹಾನಿಕರವಾದ ತಂಬಾಕು ತಿನ್ನಲು ಪ್ರಚೋದಿಸುವ ಜಾಹೀರಾತಿನಲ್ಲಿ ದೇವಗನ್ ಕಾಣಿಸಿಕೊಳ್ಳಬಾರದೆಂದು ಫ್ಯಾನ್ಸ್ ಆಗ್ರಹಿಸಿದ್ದಾರು.