ನಿರ್ದೇಶಕ ಗುರುಪ್ರಸಾದ್ ಬಗ್ಗೆ ಎಲ್ಲೂ ಕೇಳದ ಕರಾಳ ಸತ್ಯ ಬಿಚ್ಚಿಟ್ಟ ನವರಸನಾಯಕ ಜಗ್ಗೇಶ್!

By Sathish Kumar KH  |  First Published Nov 3, 2024, 4:56 PM IST

ನಟ ಜಗ್ಗೇಶ್ ಅವರು ನಿರ್ದೇಶಕ  ಗುರುಪ್ರಸಾದ್ ಅವರ ವೈಯಕ್ತಿಕ ಜೀವನ, ಚಿತ್ರರಂಗದ ಅನುಭವಗಳು, ಮತ್ತು ಸಾವಿಗೆ ಕಾರಣವಾದ ಸಾಲದ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.


ಬೆಂಗಳೂರು (ನ.03): ನಿರ್ದೇಶಕ ಗುರುಪ್ರಸಾದ್ ನಾನೇ ಎಲ್ಲ ಅನ್ಕೊಂಡಿರೋ ಮನುಷ್ಯ. ನನ್ನ ರಾಜಕೀಯ ಜೀವನ ಹಾಳು ಮಾಡಬೇಕು ಅಂತ ಆಲೋಚನೆ ಮಾಡಿದ್ದನು. ಅವನು ನನ್ನ ಇಟ್ಟುಕೊಂಡು ಪಕ್ಷದ ಬಗ್ಗೆ ಮಾತನಾಡುತ್ತಿದ್ದನು. ಆಗ ಅವನಿಗೆ ನಾನು ಎಚ್ಚರಿಕೆಯನ್ನೂ ನೀಡಿದ್ದೆ. ಇದಾದ ನಂತರ 'ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ಮಾತನಾಡೋಕೆ ಬರಲ್ಲ' ಅಂತ ಹೇಳಿದ್ದ. ಆತನಿಗೆ ಕನ್ನಡ ಕಲಿಸಿದ್ದೆ ನಾನು ಅಂತ ಹೇಳಿಕೊಂಡು ಸುತ್ತಾಡುತ್ತಿದ್ದನು. ಶೂಟಿಂಗ್‌ಗೆ ಬರುತ್ತಿದ್ದ ನಟಿಯೊಂದಿಗೆ ಲಿವಿಂಗ್ ಟುಗೆದರ್ ಇದ್ದನು ಎಂದು ನಿರ್ದೇಶಕ ಗುರುಪ್ರಸಾದ್‌ನ ಇನ್ನೊಂದು ಮುಖವನ್ನು ನಟ ಜಗ್ಗೇಶ್ ತೆರೆದಿಟ್ಟಿದ್ದಾರೆ.

ಭಾನುವಾರ ಗುರುಪ್ರಸಾದ್ ಸಾವಿನ ಬೆನ್ನಲ್ಲಿಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವನ ಆತ್ಮಕ್ಕೆ ಶಾಂತಿ ಸಿಗಲಿ.. ಒಳ್ಳೆ ಪ್ರತಿಭಾವಂತ. ನನ್ನ ಜೀವನದಾದಲ್ಲಿ ಆತ 2 ಚಿತ್ರ ಕೊಟ್ಟಿದ್ದಾನೆ. ಅವಾಗ ಅವನು ತುಂಬಾ ಚಿಕ್ಕವನು. ಚುನಾವಣೆ ಸಂರ್ಭದಲ್ಲಿ ಶೂಟ್ ಇತ್ತು, ನಾನು ಚುನಾವಣೆಯಲ್ಲಿ ಸೋತೆ. ಆಗ ಮಲೆನಾಡು ಪ್ರದೇಶದಲ್ಲಿ ಶೂಟಿಂಗ್ ಇತ್ತು. ಅವಾಗ ಅವನ ಉತ್ಸಾಹ, ಬರವಣಿಗೆ, ಅವನ ಶೈಲಿ ತುಂಬಾ ಚನ್ನಾಗಿತ್ತು. ಆತ 3ನೇ ಕಥೆ ಹೇಳಿದಾಗ ನಿರ್ಮಾಪಕರು ಸೆಟ್ ಆಗದ ಕಾರಣ ಸಿನಿಮಾ ಮಾಡಲಿಲ್ಲ. ಆತನ ಇಂವೊಲ್ವಮೆಂಟ್ ತುಂಬಾ ಚೆನ್ನಾಗಿತ್ತು. ಹೀಗಾಗಿ, ಜಯಣ್ಣನ ಆಫೀಸಿನಲ್ಲಿ ಅದನ್ನ ಬಿಡುಗಡೆ ಮಾಡಿಸಿದೆ. ಆದರೆ, ನಾನು ಆತನ ರಿಲೀಸ್ ಮಾಡಿಸಿಕೊಟ್ಟೆ ಅಂತ ಕೋಪ ಬಂತು. ಅವನ ಮಾತು ತುಂಬಾ ಕೆಳ ಮಟ್ಟಕ್ಕೆ ಹೋದಾಗ ನಾನು ಮಾತು ಬಿಟ್ಟೆ ಎಂದರು.

Tap to resize

Latest Videos

undefined

ಕನ್ನಡ ಸಿನಿಮಾ ರಂಗದ ಬಹುತೇಕರು ನೀವಿಬ್ಬರೂ ಮಾತನಾಡಿ ಎಂದು ಕೇಳಿಕೊಂಡರು. ಅವನು ಸ್ಕ್ರಿಪ್ಟ್ ಇಲ್ಲದಂತೆ ಒಂದ್ಸಲ ಬಂದಿದ್ದ. ಆವಾಗ ನಂಗೆ ಬೇಜಾರಾಯ್ತು. ಅವಾಗ ನಾನೇ 25 ಸೀನ್ ಬರ್ದು ಕೊಟ್ಟಿದ್ದೆ. ಅದಾದ ಬಳಿಕ ಡಬ್ಬಿಂಗ್ ಅಲ್ಲಿ ಸಿಕ್ಕಿದ್ದ. ಅಲ್ಲೂ ಬರೀ ನನ್ನ ಕ್ಯಾರೆಕ್ಟರ್ ಅಷ್ಟೇ ಇತ್ತು. ಅಲ್ಲಿ ನಿರ್ಮಾಪಕರ ಜೊತೆ ಜಗಳ ಬಂತು. ಅದಕ್ಕಿಂತ ಮುಂಚೆ ಒಂದು ಪ್ರೆಸ್ ಮೀಟ್ ಇತ್ತು. ಅಲ್ಲಿ ಸಮಾಧಾನಕರ ಮಾತುಗಳು ಇರಲಿಲ್ಲ. ಆದ್ದರಿಂದ ಇಲ್ಲಿ ಏನೋ ಆಗುತ್ತೆ ಅಂತ ನನಗೆ ಅನಿಸಿದ್ದರಿಂದ ನಾನು ಮೊದ್ಲೇ ಹೊರಟು ಹೋದೆ. ಅವನಿಂದ ನನಗೆ ಕೆಟ್ಟ ಪದಗಳ ಬಳಕೆ ಆಯ್ತು ಎಂದು ತಿಳಿಸಿದರು. 

ಇದನ್ನೂ ಓದಿ: ಗುರುಪ್ರಸಾದ್ ಹೆಣ್ಣು ಮಗುವಿನ ಭವಿಷ್ಯಕ್ಕೆ ನಾನು ಸಹಾಯ ಮಾಡ್ತೀನಿ; ನಟ ಜಗ್ಗೇಶ್

ಅವನಿಗೆ ಸುಸೈಡ್ ಮಾಡ್ಕೋಬೇಕು ಅಂತ ಮೊದಲಿನಿಂದಲೂ ತಲೆಯಲ್ಲಿ ಬರುತ್ತಿತ್ತು. ಬರೀ ಸಾಯುವುದನ್ನೇ ಮಾತನಾಡುತ್ತಿದ್ದನು. ಆಗ ನಾನು ಹಲವರ ಸಾವಿನ ಉದಾಹರಣೆ ಕೊಟ್ಟು ಬಿದ್ಧಿವಾದ ಹೇಳಿದ್ದೆ. ನಾನು ನೋಡಿದ ಗುರು ಪ್ರಸಾದ್ ಒಳ್ಳೆ ಕಾದಂಬರಿಕಾರ, ಯಾವಾಗಲೂ ಪುಸ್ತಕ ಇಟ್ಟಿಕೊಳ್ಳುತ್ತಿದ್ದನು. ಜೊತೆಗೆ, ಅವನು ಎಲ್ಲೇ ಹೋದರೂ ಕುಡಿಯಲು 6 ಬಾಟಲ್ ತುಗೊಂಡು ಹೋಗುತ್ತಿದ್ದನು. ಕೆಲವೊಮ್ಮೆ ನನಗೂ ಮದ್ಯ ಕೊಡಿಸು ಅಂತ ಪೀಡಿಸುತ್ತಿದ್ದನು. ಆತನಿಗೆ ದೊಡ್ಡ ಮಟ್ಟದಲ್ಲಿ ಮದ್ಯ ಸೇವನೆ ಮಾಡಬೇಕೆಂದ ಎಂಬುದು ಕಾಯಿಲೆಯಾಗಿ ಅಂಟಿಕೊಂಡಿತು ಎಂಬ ವಿಷಯ ಬಿಚ್ಚಿಟ್ಟರು. 

ಕನ್ನಡ ಚಿತ್ರರಂಗಕ್ಕೆ ಒಬ್ಬ ಒಳ್ಳೆಯ ನಿರ್ದೇಶಕ ಆಗಿದ್ದ ಗುರುಪ್ರಸಾದ್ ಅವನಿಗೆ ಏನು ಅನಿಸುತ್ತದೆಯೋ ಅದೇ ಕರೆಕ್ಟ್ ಅಂತಿದ್ದ. ಪ್ರತಿ ಬಾರಿ ಜಗಳ ಆದಾಗ ಮೀಡಿಯಾ ಮುಂದೆ ಹೋಗುತ್ತದೆ, ಸುಮ್ನಿರು ಅಂತ ಸಮಾಧಾನ ಮಾಡುತ್ತಿದ್ದೆ. ಇನ್ನು ಜೀ ಕನ್ನಡ ಚಾನೆಲ್‌ನವರಿಗೆ ರಂಗನಾಯಕಿ ಸಿನಿಮಾವನ್ನು 5 ಕೋಟಿ ರುಪಾಯಿಗೆ ಸೇಲ್ ಮಾಡಿಸಿದ್ದೆ. ಇತ್ತೀಚೆಗೆ ಡೈರೆಕ್ಟರ್‌ಗಳಿಗೆ ಹೀರೋ, ಹೀರೋಯಿನ್‌ಗಳಿಗೆ ಪೊಲೀ ಮಾತು ಆಡೋ ಕ್ಯಾರೆಕ್ಟರ್ ಮಾಡಬೇಕು ಅಂತ ಆಸೆ ಇಟ್ಟುಕೊಂಡಿದ್ದನು. ಇನ್ನು ನಮ್ಮಿಬ್ಬರ ಕಡೆ ಪಿಕ್ಚರ್ ರಂಗನಾಯಕ ಸಿನಿಮಾದಿಂದ ಅವನು ಹಾಳಾದ, ನನ್ನನ್ನೂ ಹಾಳ್ ಮಾಡ್ದ. ನಾವೆಲ್ಲ ದೇವರು, ದಿಂಡ್ರು ಅಂತ ಬದುಕುತ್ತಿರುವವರು. ಕೆಲವೊಂದು ದೃಶ್ಯಗಳು, ಟೂ ಮಚ್ ಆಫ್ ಕಂಟ್ರೋವರ್ಸಿ ಬೇಡಾ ಅಂತ ಹೇಳಿದ್ದೆ. ನಾನೇ ಪ್ರೊಡ್ಯೂಸರ್‌ಗೆ ರೀ ಎಡಿಟ್ ಮಾಡಿ ಒಂದು ಒಳ್ಳೆ ಸಿನಿಮಾ ಮಾಡಿದ್ದೇನೆ. ಈಗ ಆ ಸಿನಿಮಾ ನೋಡಿದರೆ ಎಲ್ಲರೂ ಶಾಕ್ ಆಗ್ತಾರೆ. ಅಷ್ಟು ಚೆನ್ನಾಗಿ ಮಾಡಿದೀವಿ ಎಂದು ಹೇಳಿದರು.
 

ರಂಗನಾಯಕ ಪ್ರೆಸ್ ಮೀಟ್ ಅಲ್ಲಿ ನನಗೂ ಬೇಜಾರಾಯಿತು. ಅಲ್ಲಿ ಅವತ್ತು ನನ್ನ ಮೇಲೆ ಟಾರ್ಗೆಟ್ ಆಯ್ತು. ಅಲ್ಲೇ ಅವನನ್ನ ಲಾಸ್ಟ ನೋಡಿದ್ದು. ಅವನಂತ ಕೋಪವನ್ನು ನಾನು ನನ್ನ ಜೀವನದಲ್ಲೇ ಯಾರಲ್ಲಿಯೂ ನೋಡಿಲ್ಲ. ನಾನೇ ಎಲ್ಲ ಅನ್ಕೊಂಡಿರೋ ಮನುಷ್ಯ ಆತ. ನನ್ನ ಪೊಲಿಟಿಕಲ್ ಜೀವನ ಹಾಳು ಮಾಡಬೇಕು ಅಂತ ಆಲೋಚನೆ ಮಾಡಿದ್ದನು. ಅವನು ನನ್ನ ಇಟ್ಕೊಂಡು ಪಕ್ಷದ ಬಗ್ಗೆ ಮಾತಾಡ್ತಿದ್ದನು. ಆದ್ದರಿಂದ ನಾನು ಅವನಿಗೆ ವಾರ್ನಿಂಗ್ ಕೂಡ ಮಾಡಿದ್ದೆ. ಜೊತೆಗೆ, ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ಮಾತನಾಡೋಕೆ ಬರಲ್ಲ ಅಂತ ಹೇಳಿದ್ದ. ಪುನೀತ್‌ಗೆ ಕನ್ನಡ ಕಲಿಸಿದ್ದೆ ನಾನು ಅಂತ ಹೇಳ್ಕೊಂಡು ಸುತ್ತಾಡುತ್ತಿದ್ದನು. ಅವನ ಸ್ವಭಾವ ವಿಚಿತ್ರವಾಗಿತ್ತು ಎಂದರು.

ಇದನ್ನೂ ಓದಿ: ಗುರುಪ್ರಸಾದ್ 2ನೇ ಹೆಂಡತಿ ಸುಮಿತ್ರಾ ಗರ್ಭಿಣಿ; ಮಗುವಿನ ಭವಿಷ್ಯವೇನು?

ಅವನ ಮಗು ನೋಡಿದರೆ ನನಗೆ ಕರುಳು ಚುರ್ ಅನ್ನುತ್ತೆ. ಸಿನಿಮಾದಲ್ಲಿ ಪಾತ್ರ ಮಾಡೋಕೆ ಬಂದಿದ್ದ ನಟಿಯನ್ನೇ ಪರಿಚಯ ಮಾಡ್ಕೊಂಡು ಮದ್ವೆ ಆಗಿದ್ದ. ಲೈಫ್ ತುಂಬಾ ಸಿಂಪಲ್ ಎನ್ನುವ ಗಾದೆ, ವೇದಗಳೆಲ್ಲವೂ ಸುಳ್ಳು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಇವತ್ತಿನ ಚಿತ್ರಗಳನ್ನು ನೋಡಿದರೆ ನನಗೆ ಸಿನಿಮಾ ಮಾಡೋಕೆ ಇಷ್ಟ ಇಲ್ಲ. ಇವತ್ತು ಥೀಯೇಟರ್ ಅಲ್ಲಿ ಸಿನಿಮಾ ಚೆನ್ನಾಗಿಲ್ಲ ಅಂತ ಎನ್ನಿಸಿದರೆ ಆ ಚಿತ್ರದ ಕಥೆ ಮುಗ್ದೆ ಹೋಯ್ತು. ನನಗೆ ನಿರ್ಮಾಣಕಾರರ ಬಾಯಿಂದ ಗೊತ್ತಾಗಿದೆ. ಗುರುಪ್ರಸಾದ್ ಆನ್‌ಲೈನ್‌ ಗೇಮ್ ಅಲ್ಲಿ ಸಾಲ ಮಾಡಿಕೊಂಡಿದ್ದನಂತೆ. ಸಾಲ ತೀರಿಸೋಕೆ ಆಗಲ್ಲ ಅಂತ ಅನ್ಕೊಂಡು ಈ ತೀರ್ಮಾನಕ್ಕೆ ಹೋಗಿದ್ದಾನಂತೆ. ನಿರ್ಮಾಪಕರ ಹತ್ರ ಮಾತನಾಡಿ ಒಂದೇ ಬಿಲ್ಡಿಂಗ್ ಅಲ್ಲಿ 2 ಮನೆ ಕೊಡಿಸಿದ್ದೆ. ಅದನ್ನು ಕಳ್ಕೊಂಡಿದ್ದಾನೆ ಎಂದು ನಟ ಜಗ್ಗೇಶ್ ಮಾಹಿತಿ ಬಿಚ್ಚಿಟ್ಟರು.

click me!