ಕನ್ನಡ ಚಿತ್ರರಂಗಕ್ಕೆ ರಿಷಬ್ ಶೆಟ್ಟಿ ಅದ್ಭುತ ಕೊಡುಗೆ; ವಿದೇಶದಲ್ಲಿ 'ಕಾಂತಾರ' ನೋಡಿ ಹೊಗಳಿದ ಜಗ್ಗೇಶ್

By Shruiti G KrishnaFirst Published Oct 19, 2022, 11:13 AM IST
Highlights

ಸ್ಯಾಂಡಲ್ ವುಡ್ ಹಿರಿಯ ನಟ ಜಗ್ಗೇಶ್ ಕಾಂತಾರ ಸಿನಿಮಾ ನೋಡಿ ಹೊಗಳಿದ್ದಾರೆ. ವಿದೇಶದಲ್ಲಿರುವ ನಟ ಜಗ್ಗೇಶ್ ಸಿನಿಮಾ ನೋಡಿ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಅದ್ಭುತ ಕೊಡುಗೆ ಎಂದಿದ್ದಾರೆ. 

ಎಲ್ಲಿ ನೋಡಿದ್ರೂ ಈಗ ಕಾಂತಾರ ಸಿನಿಮಾದೆ ಸುದ್ದು ಸುದ್ದಿ. ಈಗಾಗಲೇ 100 ಕೋಟಿ ಕ್ಲಬ್ ಸೇರಿ ಮುನ್ನುಗ್ಗುತ್ತಿದೆ ಕಾಂತಾರ. ಎಲ್ಲಾ ಭಾಷೆಗಳಿಂದನೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ರಿಷಬ್ ಶೆಟ್ಟಿ ಕಾಂತಾರಗೆ ಫಿದಾ ಆಗಿದ್ದಾರೆ. ಇದೀಗ ಸ್ಯಾಂಡಲ್ ವುಡ್‌ನ ಹಿರಿಯ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶದಲ್ಲಿರುವ ನಟ ಜಗ್ಗೇಶ್ ಅಲ್ಲೇ ಕಾಂತಾರ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.   

'ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು ಕಾರಣ ನನ್ನ ಬದುಕಿಗೆ ಸಕಲವು ನೀಡಿದ ನನ್ನ ತಾಯಿ ಕನ್ನಡ ಚಿತ್ರರಂಗ. ಬಾಲ್ಯದಿಂದ ಕನ್ನಡ ಹಾಗು ರಾಜಣ್ಣನ ಹುಚ್ಚು ಅಭಿಮಾನಿಯಾದ ನಾನು ಕರುನಾಡ ದಾಟಿ ಹೊರಹೋಗದೆ ಬದುಕಿದವನು. ಸದಾ ನನ್ನ ಕನ್ನಡದ ಕಲಾರಂಗ ಜಗ ಮೆಚ್ಚುವ ರಂಗ ಆಗಬೇಕು ಎಂದು ಹಂಬಲಿಸುವ ಜನ್ಮ ನನ್ನದು. ಇತ್ತೀಚಿನ ಚಿತ್ರ ಕಾಂತಾರ ವಿದೇಶಕ್ಕೆ ಬಂದ ಕಾರಣ ನೋಡಲಾಗಲಿಲ್ಲಾ ಆದರೆ ನನ್ನ ಅಕ್ಕನ ಮಗ ಜೀವನ್ ಹಾಗೂ ನನ್ನ ಅನೇಕ ಚಿತ್ರ ಗುರು ಮೇಲುಕೋಟೆ ಮಂಜ ಚಿತ್ರದಲ್ಲಿ ಕಳನಟನಾಗಿ ಅಭಿನಯಿಸಿದನು ಇಂದು ಅಮೇರಿಕದ ಡೆನ್ವರ್ ನಲ್ಲಿ ಒರ್ಯಾಕಲ್ ಸಂಸ್ಥೆಯಲ್ಲೆ ಶ್ರೇಷ್ಠ ಸ್ಥಾನದಲ್ಲಿರುವ ಅವನ ಮನೆ ಹತ್ತಿರದಲ್ಲೆ ಮಾಲ್ ಇತ್ತು ಅಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು ನೋಡಿ ಬಂದೆ' ಎಂದು ಕಾಂತಾರ ನೋಡಿದ ಅನುಭವ ಹಂಚಿಕೊಂಡಿದ್ದಾರೆ. 

ಕುತೂಹಲ ಹೆಚ್ಚಾಗ್ತಿದೆ, ಕಾಂತಾರ ನೋಡಲು ಕಾಯುತ್ತಿದ್ದೇನೆ; ನಟಿ ಕಂಗನಾ ರಣಾವತ್

'ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲ ಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆಯುವುದು ನನ್ನ 30ವರ್ಷದ ಅಭ್ಯಾಸ. ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಈ ಕ್ಷೇತ್ರದಲ್ಲಿ ಸಂತೃಪ್ತ ಭಾವ ಸಿಗುತ್ತದೆ. ಇಂಥ ನಾಡಿನಿಂದ ಎಂಥ ಅದ್ಭುತ ನಟ, ನಿರ್ದೇಶಕ ರಿಷಭ್ ಶೆಟ್ಟಿ ಹುಟ್ಟಿ ಬಂದ. ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ' ಎಂದು ಹೊಗಳಿದ್ದಾರೆ. 

ಯಾರು ಗೊತ್ತಾಯ್ತಾ? ಇವ್ರೇ ರೀ 'ಕಾಂತಾರ'ದ ಶೀಲಾ; ನಿಜಕ್ಕೂ ಯಾರಿವರು, ಇಲ್ಲಿದೆ ಸಂಪೂರ್ಣ ಮಾಹಿತಿ

'ಕಾಂತಾರ ಕಡೆಯ 25ನಿಮಿಷ ನಾನು ಎಲ್ಲಿರುವೆ ಮರೆತು ಹೋಯಿತು. ಚಿತ್ರ ನೋಡಿದ ಮೇಲೆ ಮೌನವಾಯಿತು ದೇಹ ಮನಸ್ಸು. ಹೊರಬಂದಾಗ ಕಾಕತಾಳಿಯ ಎಂಬಂತೆ ಮಂತ್ರಾಲಯ ನರಸಿಂಹಚಾರ್ ವಾಟ್ಸ್ಯಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು ಮೂಕವಿಸ್ಮಿತನಾದೆ. ನಂತರ ನನಗೆ ಅನಿಸಿದ್ದು ಇದು ರಿಷಭ್ ಮಾಡಿದ ಚಿತ್ರವಲ್ಲಾ ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮ ಮಾಡಿಸಿದ್ದಾರೆ. ದೇವರ ದಯೆಯಿಂದ ರಿಷಭನಿಗೆ ನೂರ್ಕಾಲ ಆಯುಷ್ಯ ಆರೋಗ್ಯ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ. ಕಾಂತಾರ ಸಿನಿಮ ಅಲ್ಲಾ ರೋಮಾಂಚನ ಅನುಭವ. God bless entire team' ಎಂದು ದೀರ್ಘವಾಗಿ ಬರೆದು ಕೊಂಡಿದ್ದಾರೆ.

click me!