ಎರಡನೇ ಪುತ್ರಿಯ ಡೆಬ್ಯೂ ಚಿತ್ರದ ಟೈಟಲ್ ಲಾಂಚ್ ಮಾಡಿದ ದುನಿಯಾ ವಿಜಯ್. ಸಿಟಿ ಲೈಟ್ಸ್ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ......
ಸ್ಯಾಂಡಲ್‌ವುಡ್ ಒಂಟಿ ಸಲಗ ದುನಿಯಾ ವಿಜಯ್ ತಮ್ಮ ಇಬ್ಬರು ಪುತ್ರಿಯರನ್ನು ಬಣ್ಣದ ಪ್ರಪಂಚಕ್ಕೆ ಲಾಂಚ್ ಮಾಡುತ್ತಿದ್ದಾರೆ. ಕಾಗೆ ಬಂಗಾರ ಮತ್ತು ಟೈಟಲ್ ರಿವೀಲ್ ಮಾಡದ ಸಿನಿಮಾದಲ್ಲಿ ರಿತನ್ಯಾ ವಿಜಯ್ ನಟಿಸುತ್ತಿದ್ದಾರೆ. ಕಳೆದ ತಿಂಗಳು ವಿದೇಶದಿಂದ ಆಗಮಿಸಿದ ಎರಡನೇ ಪುತ್ರಿ ಮೋನಿಷಾ ಈಗ ತಮ್ಮ ಚೊಚ್ಚಲ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿವೀಲ್ ಮಾಡಿದ್ದಾರೆ. ಅದುವೇ ಸಿಟಿ ಲೈಟ್ಸ್ ಎಂದು.
'ನನ್ನ ಮೊದಲ ಚಿತ್ರಕ್ಕೆ ತಂದೆ ನಿರ್ದೇಶನ ಮಾಡುತ್ತಿರುವುದಕ್ಕೆ ನಾನು ಲಕ್ಕಿ. ನನ್ನ ಕನಸಿಗೆ ಅವರೇ ಸಾರಥಿಯಾಗಿದ್ದಾರೆ. ಸಿಟಿ ಲೈಟ್ಸ್ ಟೈಟಲ್ ಕೇಳಿದಾಗ ವಾವ್ ಅನಿಸಿತ್ತು. ನಾನು ಹುಟ್ಟಿದ್ದು ಬೆಳೆದಿದ್ದು ಬೆಂಗಳೂರು ಸಿಟಿಯಲ್ಲಿ, ನಟನೆ ಕಲಿತಿದ್ದು ನ್ಯೂಯಾರ್ಕ್ ಸಿಟಿಯಲ್ಲಿ ಹೀಗಾಗಿ ಸಿಟಿಗೂ ನನಗೂ ತುಂಬಾ ಕನೆಕ್ಟ್ ಆಗುತ್ತೆ. ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬರುವವರ ಸುತ್ತ ಮಾಡಿರುವ ಅಪರೂಪದ ಕಥೆ ಇದು. ಇಲ್ಲಿ ನನ್ನ ಪಾತ್ರಕ್ಕೆ ತುಂಬಾ ಸ್ಕೋಪ್ ಇದೆ ಅಲ್ಲದೆ ಸವಾಲಿನ ಪಾತ್ರ ಆಗಿರುವ ಕಾರಣ ಅಪ್ಪ ತುಂಬಾ ಧೈರ್ಯ ಹೇಳಿದ್ದಾರೆ ಅದಕ್ಕೆ ತಕ್ಕಂತೆ ತಯಾರಿ ಮಾಡಿದ್ದಾರೆ' ಎಂದು ಖಾಸಗಿ ಸಂದರ್ಶನದಲ್ಲಿ ಮೋನಿಷಾ ಮಾತನಾಡಿದ್ದಾರೆ.
ಬೆಂಗಳೂರಿಗೆ ಮರಳಿದ ದುನಿಯಾ ವಿಜಯ್ ಕಿರಿಯ ಪುತ್ರಿ; ಕಲರ್ ಕಮ್ಮಿ ಆದ್ರೂ ನಮ್ಗೆ ಓಕೆ ಎಂದ ನೆಟ್ಟಿಗರು!
'ಚಿಕ್ಕ ವಯಸ್ಸಿನಿಂದ ನಾನು ಸಿನಿಮಾ ನಟಿಯಾಗಬೇಕು ಎಂದು ತಂದೆಗೆ ಪೀಡಿಸುತ್ತಿದ್ದೆ. ನೀನು ಮೊದಲು ಆಮೇಲೆ ಸಿನಿಮಾ ಅಂತಲೇ ಹೇಳುತ್ತಿದ್ದರು ಕೊನೆಯಲ್ಲಿ ನಾನೇ ಅಪ್ಪನನ್ನು ಕನ್ವಿನ್ಸ್ ಮಾಡಿ ಚಿತ್ರರಂಗಕ್ಕೆ ಬಂದಿರುವುದು. ಬೆಂಗಳೂರಿನಲ್ಲಿ ಥಿಯೇಟರ್ ಸ್ಟಡಿ ಮುಗಿಸಿದ ಮೇಲೆ ಬ್ಯಾಚುಲರ್ ಆಫ್ ಥಿಯೇಟರ್ ಕೋರ್ಸ್ ಮುಗಿಸಿಕೊಂಡೆ. ಥಿಯೇಟರ್‌ನಿಂದ ನಾನು ನಟಿಯಾಗಬಹುದು ಅನ್ನೋ ವಿಶ್ವಾಸ ಬಂತು' ಎಂದು ಮೋನಿಷಾ ಹೇಳಿದ್ದಾರೆ.
ಅಟೆನ್ಶನ್ ಸಿಗೋದು ಫಸ್ಟ್ ಸಿನಿಮಾವರ್ಗೂ ಅಷ್ಟೇ; ನೆಪೋಟಿಸಂ ಬಗ್ಗೆ ದುನಿಯಾ ವಿಜಯ್ ಪುತ್ರಿ ಹೇಳಿಕೆ
'ನ್ಯೂ ಯಾರ್ಕ್‌ನಲ್ಲಿ ಒಂದು ವರ್ಷ ಕೋರ್ಸ್ ಮಾಡಿರುವೆ. ಪ್ರತಿ ದಿನ ಕ್ಯಾಮೆರಾ ಮುಂದೆ ಕ್ಲಾಸ್ ನಡೆಯುತ್ತಿತ್ತು ಇದರಲ್ಲಿ ಮೆಥೆಡ್ ಆಕ್ಟಿಂಗ್, 13 ರೀತಿತ ವಾಯ್ಸ್ ಕ್ಲಾಸ್, ಸ್ಟಂಟ್ ಕ್ಲಾಸ್, ಕ್ಯಾಮೆರಾ ಹಿಂದಿನ ಕೆಲಸಗಳು ಹೇಳಿಕೊಡುತ್ತಾರೆ. ಬೇರೆ ಬೇರೆ ಹೇಳಿಕೊಡುತ್ತಾರೆ ಇದು ಎರಡು ಸೆಮಿಸ್ಟರ್‌ಗಳಲ್ಲಿ ನಡೆಯುತ್ತದೆ. ನಾನು ಮತ್ತು ಅಕ್ಕ ರಿತನ್ಯಾ ಫ್ರೆಂಡ್ಸ್ ರೀತಿ ಇದ್ದೀವಿ ಹೀಗಾಗಿ ನಮ್ಮಿಬ್ಬರ ನಡುವೆ ಯಾವುದೇ ಕಾಂಪಿಟೇಷನ್‌ಗೆ ಅವಕಾಶವಿಲ್ಲ' ಎಂದಿದ್ದಾರೆ ಮೋನಿಷಾ.