ವೈರಲ್ ವಿಡಿಯೋದಲ್ಲಿ ಪುನೀತ್ ಬಗ್ಗೆ ರವಿಚಂದ್ರನ್ & ಸುದೀಪ್ ಮಾತುಗಳು ಏನಿವೆ ನೋಡಿ!

By Shriram Bhat  |  First Published Sep 5, 2024, 10:18 PM IST

ಬಹುಶಃ ಅದು ನಮ್ಮ ಜೀವನದಲ್ಲಿ ದೊಡ್ಡ ರೀತಿ ಪರಿಣಾಮ ಬೀರಿರಬಹುದು. ಇನ್ನೊಬ್ರನ್ನ ಮರ್ಯಾದೆ ಕೊಟ್ಟು ಮಾತಾಡಿಸ್ಬೇಕು, ಒಬ್ಬರನ್ನ ನೋಡಿದ್ರೇನೇ ಮತ್ತೊಂದ್ಸಲ ನೋಡಿದಾಗ ಅವ್ರು ನಮ್ಮನ್ನ ಇಷ್ಟಪಟ್ಟು ಮಾತಾಡಿಸ್ಬೇಕು.. ಹಾಗಂತ..


ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ (Viral Video) ಆಗ್ತಿದೆ. ಅದನ್ನು ನಟ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಮಾತನಾಡಿದ್ದು ಅನ್ಬೇಕೋ, ಕಿಚ್ಚ ಸುದೀಪ್ (Kichcha Sudeep) ಮಾತನಾಡಿದ್ದು ಅನ್ಬೇಕೋ ಅಥವಾ ಅಪ್ಪು ಮಾತಾಡಿದ್ದೋ ಅನ್ಬೇಕೋ ಗೊತ್ತಾಗ್ತಿಲ್ಲ. ಯಾಕಂದ್ರೆ ಆ ವಿಡಿಯೋ ಕ್ಲಿಪ್ಪಿಂಗ್‌ನಲ್ಲಿ ಈ ಮೂರೂ ನಟರು ಮಾತನಾಡಿದ್ದೂ ಇದೆ. ಅವರನ್ನು ಮಾತನಾಡಿಸಿದ್ದು ನಿರೂಪಕರೊಬ್ಬರು ಎಂಬುದು ಕೂಡ ಅರ್ಥವಾಗುತ್ತಿದೆ. ಆದರೆ, ಒಬ್ಬರೇ ಆಂಕರ್ ಅಲ್ಲ!

ಆದರೆ, ಆ ಮೂವರೂ ಮಾತನಾಡಿದ್ದು ಒಬ್ಬರ ಬಗ್ಗೆಯೇ ಎಂಬುವುದು ವಿಶೇಷ. ನಟ ರವಿಚಂದ್ರನ್ ಹಾಗು ಸುದೀಪ್ ಮಾತನಾಡಿದ್ದು ನಟ ಪುನೀತ್ ರಾಜ್‌ಕುಮಾರ್ ಬಗ್ಗೆ. ಅದೇ ರೀತಿ ನಟ ಪುನೀತ್ ಮಾತನಾಡಿದ್ದು ಕೂಡ ಅವರ ಬಗ್ಗೆಯೇ. ಅವರ ಬಗ್ಗೆ ಎನ್ನುವುದಕ್ಕಿಂತ ತಾನು ಹೇಗಿದ್ದೇನೆ, ಹೇಗೆ ಇರಲು ಇಷ್ಟಪಡುತ್ತೇನೆ ಎಂಬ ಬಗ್ಗೆ ಪುನೀತ್ ಮಾತನಾಡಿದ್ದಾರೆ. ಅದು ಕಟ್ ಅಂಡ್ ಪೇಸ್ಟ್ ಮಾಡಿರುವ ವಿಡಿಯೋ, ಅಂದರೆ ಎಡಿಟೆಡ್ ವಿಡಿಯೋ ಎಂಬುದು ಅರ್ಥವಾಗುತ್ತದೆ. 

Tap to resize

Latest Videos

undefined

ಮೊದಲ ಬಾರಿಗೆ ನಟ ದರ್ಶನ್ ಕೇಸ್ ಬಗ್ಗೆ ಬಾಯ್ಬಿಟ್ಟ ರಾಧಿಕಾ ಕುಮಾರಸ್ವಾಮಿ, ಏನ್ ಹೇಳಿದ್ರು ನೋಡಿ!

ಹಾಗಿದ್ದರೆ ಅಲ್ಲಿ ಎಲ್ಲರೂ ಅದೇನು ಮಾತನಾಡಿದ್ದಾರೆ ಗೊತ್ತೇ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.. ನಟ ರವಿಚಂದ್ರನ್ ಅವರು ಅಪ್ಪು ಬಗ್ಗೆ ಮಾತಾಡ್ತಾ 'ಅವ್ನು ಯಾರ ಬಗ್ಗೆನೂ ಮಾತಾಡ್ತಾ ಇರ್ಲಿಲ್ಲ. ನಾವೇನಾದ್ರೂ ಪಕ್ಕದಲ್ಲಿರೋ ಯಾರಾದ್ರೂ ಬಗ್ಗೆ ಮಾತಾಡ್ತಾ ಇದ್ರೆ, ಮೆತ್ತಗೆ ಸೈಲೆಂಟ್‌ ಆಗಿ ಜರುಗಿಕೊಂಡು ಹೋಗ್ಬಿಡೋರು. ನಮಗೆ ಬೇಡ ಆ ವಿಷ್ಯ ಅನ್ನೋ ತರ.. ಅದು ಅವ್ರ ಗುಣ' ಅಂದಿದ್ದಾರೆ.

ಕಿಚ್ಚ ಸುದೀಪ್ 'ಬಹುಶಃ ನನಗೆ ಗೊತ್ತಿರೋ ಹಾಗೆ, ಯಾವ ವಿಷಯದಲ್ಲೂ ಎಲ್ಲೂ ಕೆಟ್ಟವರು ಆಗದೇ, ಯಾವುದೇ ಸ್ಕ್ಯಾಂಡಲ್ಸ್‌ನಲ್ಲೂ ಸಿಕ್ಕಾಕ್ಕೊಳ್ಳದೇ ಇರುವಂತ ಏಕೈಕ ವ್ಯಕ್ತಿ ಅನ್ಸುತ್ತೆ.. ಇಲ್ಲಿ ನಮ್ಗೆಲ್ಲ ಸ್ವಲ್ಪ ಉರಿಯುತ್ತೆ.. ನಮ್ ಹೆಸರು ಎಲ್ಲಾ ಕಡೆ ಬರುತ್ತೆ, ನಿನ್ ಹೆಸರು ಯಾಕೆ ಬರ್ತಾ ಇಲ್ಲ ಅಂತ! ನೀವೂ ಸ್ವಲ್ಪ ಸೇರ್ಪಡೆಯಾದ್ರೆ ಅಟ್‌ಲೀಸ್ಟ್ ಸ್ವಲ್ಪ ಬ್ಯಾಲೆನ್ಸ್ ಆಗುತ್ತೆ ಲೈಫು ಅಂತ.. ಜೆನ್ಯೂನ್ಲೀ ಹೀ ಈಸ್ ವೆರಿ ಸ್ವೀಟ್ ಅಂತ.. ಅವ್ನು ಯಾವುದ್ರಲ್ಲೂ ಇನ್ವಾಲ್ಸ್ ಆಗ್ತಾನೇ ಇರ್ಲಿಲ್ಲ.. 

ಈ ಮಹಾ ಸೀಕ್ರೆಟ್ ನಿಮಗೇನಾದ್ರೂ ಗೊತ್ತಿದ್ಯಾ? ರೇಖಾ ಜೋಡಿಯಾಗಿ ನಟಿಸಿದ್ದರು ಶಂಕರ್‌ ನಾಗ್!

ಬಹುಶಃ ಅದು ನಮ್ಮ ಜೀವನದಲ್ಲಿ ದೊಡ್ಡ ರೀತಿ ಪರಿಣಾಮ ಬೀರಿರಬಹುದು. ಇನ್ನೊಬ್ರನ್ನ ಮರ್ಯಾದೆ ಕೊಟ್ಟು ಮಾತಾಡಿಸ್ಬೇಕು, ಒಬ್ಬರನ್ನ ನೋಡಿದ್ರೇನೇ ಮತ್ತೊಂದ್ಸಲ ನೋಡಿದಾಗ ಅವ್ರು ನಮ್ಮನ್ನ ಇಷ್ಟಪಟ್ಟು ಮಾತಾಡಿಸ್ಬೇಕು.. ಹಾಗಂತ ಇಲ್ಲಿ ಆಕ್ಟ್ ಮಾಡೋದು ಬೇಕಾಗಿಲ್ಲ, ಒಳ್ಳೆಯವರಾಗಿರ್ಬೇಕು ಅಷ್ಟೇ..!' ಎಂದಿದ್ದಾರೆ ಅಪ್ಪು ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್. 

click me!