ಅಭಿಮಾನಿಗಳ ಜೊತೆ ದುನಿಯಾ ಬರ್ತಡೇ;'ಸಲಗ' ಚಿತ್ರಕ್ಕೆ ಹುಟ್ಟುಹಬ್ಬ ಅರ್ಪಣೆ!

Suvarna News   | Asianet News
Published : Jan 21, 2020, 10:00 AM IST
ಅಭಿಮಾನಿಗಳ ಜೊತೆ ದುನಿಯಾ ಬರ್ತಡೇ;'ಸಲಗ' ಚಿತ್ರಕ್ಕೆ ಹುಟ್ಟುಹಬ್ಬ ಅರ್ಪಣೆ!

ಸಾರಾಂಶ

‘ಸಲಗ’ ಚಿತ್ರದೊಂದಿಗೆ ಸುದ್ದಿಯಲ್ಲಿರುವ ದುನಿಯಾ ವಿಜಯ್‌ ಅವರಿಗೆ ಜ.20 ಹುಟ್ಟುಹಬ್ಬ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊಸಕೆರಹಳ್ಳಿಯ ತಮ್ಮ ನಿವಾಸದಲ್ಲಿ ಜಮಾಯಿಸಿದ್ದ ಭಾರೀ ಸಂಖ್ಯೆಯ ಅಭಿಮಾನಿಗಳು ಹಾಗೂ ‘ಸಲಗ’ ಚಿತ್ರತಂಡದ ಜತೆಗೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

 ಭಾನುವಾರ ರಾತ್ರಿಯಿಂದಲೇ ಅವರ ಹುಟ್ಟುಹಬ್ಬದ ಆಚರಣೆ ಶುರುವಾಗಿತ್ತು. ಅವರ ಬತ್‌ರ್‍ಡೇ ಗಿಫ್ಟ್‌ ಆಗಿ ‘ಸಲಗ’ ಚಿತ್ರತಂಡ ಟೀಸರ್‌ ಲಾಂಚ್‌ ಮಾಡಿತು.

ಉಪೇಂದ್ರ ಟೀಸರ್‌ ಲಾಂಚ್‌ ಮಾಡಿ, ದುನಿಯಾ ವಿಜಯ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಉಪೇಂದ್ರ ಮೆಚ್ಚುಗೆಗೆ ಭಾವುಕರಾಗಿ ಪ್ರತಿಕ್ರಿಯಿಸಿದ ವಿಜಯ್‌, ‘ಅಂಡರ್‌ವಲ್ಡ್‌ರ್‍’ ಸಿನಿಮಾಗಳಿಗೆ ಉಪೇಂದ್ರ ಗಾಡ್‌ ಫಾದರ್‌ ಇದ್ದಂತೆ. ಅವರಿಂದ ಸಾಕಷ್ಟುಪ್ರೇರಣೆ ಪಡೆದಿದ್ದೇನೆ. ಅವರ ಪ್ರಜಾಕೀಯದ ಆಲೋಚನೆ ತುಂಬಾ ಹಿಡಿಸಿದೆ. ಪ್ರಜಾಕೀಯಕ್ಕೆ ಏನೇ ಸಹಾಯ ಬೇಕಾದರೂ ನಾನು ಮಾಡಲು ಸಿದ್ಧ. ಈ ಮಾತನ್ನು ನಾನು ಅವರಿಗೆ ಹೇಳಿದ್ದೇನೆ’ಎಂದರು.

ತಲ್ವಾರ್‌ನಿಂದ ಕೇಕ್ ಕಟ್; ಕ್ಷಮೆಯಾಚಿಸಿದ ದುನಿಯಾ ವಿಜಿ..!

ಈ ವರ್ಷದ ಹುಟ್ಟುಹಬ್ಬದ ಆಚರಣೆ ‘ಸಲಗ’ ಚಿತ್ರಕ್ಕೆ ಅರ್ಪಣೆ. ಹುಟ್ಟುಹಬ್ಬದ ಆಚರಣೆ ಎನ್ನುವುದಕ್ಕಿಂತ ಇದು ‘ಸಲಗ’ದ ಸಂಭ್ರಮ. ಅದು ನನಗೆ ಮಹತ್ವದ ಚಿತ್ರ. ಅದರ ಮೇಲೆ ನಿರೀಕ್ಷೆ ಇಟ್ಟುಕೊಂಡೆ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಬಂದಿದ್ದಾರೆ. ಅವರ ನಿರೀಕ್ಷೆ ಹುಸಿಯಾಗದು.- ದುನಿಯಾ ವಿಜಯ್‌

ತಲ್ವಾರ್‌ ಬಳಕೆ, ಕ್ಷಮೆ ಕೇಳಿದ ವಿಜಯ್‌

ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಕೇಕ್‌ ಕತ್ತರಿಸಲು ತಲ್ವಾರ್‌ ಬಳಸಿದ್ದಕ್ಕೆ ಬೆಳಗ್ಗೆ ವಿಜಯ್‌ ಸ್ಪಷ್ಟನೆ ನೀಡಿದರು. ‘ಕತ್ತಿಯಲ್ಲಿ ಕೇಕ್‌ ಕತ್ತರಿಸಿದ್ದು ತಪ್ಪು. ಯಾರೋ ಅಭಿಮಾನಿ ಹಿಂದಿನಿಂದ ತಂದುಕೊಟ್ಟ. ಅದು ಕೇಕ್‌ ಕತ್ತರಿಸುವ ಚಾಕು ಎಂದೇ ಭಾವಿಸಿ ನಾನು ಅದನ್ನು ಬಳಸಿದೆ. ಆಮೇಲೆ ಅದು ಕತ್ತಿ ಎನ್ನುವುದು ಗೊತ್ತಾಯಿತು. ಇದು ನಡೆಯಬಾರದೀತ್ತು. ನಡೆದು ಹೋಗಿದೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ’ ಎಂದರು ವಿಜಯ್‌. ಈ ಸಂದರ್ಭದಲ್ಲಿ ವಿಜಯ್‌ ಅವರ ಜತೆಗೆ ಸಲಗ ಚಿತ್ರದ ಸಹಾಯಕ ನಿರ್ದೇಶಕರಾದ ರಘು, ಅಭಿ, ನಿರ್ದೇಶಕರಾದ ವಾಸು, ನೀನಾಸಂ ಮಂಜು ಹಾಜರಿದ್ದರು.

ತಡರಾತ್ರಿ ಬರ್ತಡೇ ಸೆಲಬ್ರೇಶನ್; ದುನಿಯಾ ವಿಜಿ ವಿರುದ್ಧ ಸಾರ್ವಜನಿಕರಿಂದ ದೂರು

ತುಂಬಾ ಕಷ್ಟಪಟ್ಟು ಸ್ಟಾರ್‌ ಆದವರು ವಿಜಯ್‌. ಅವರ ಜರ್ನಿಯೇ ಒಂದು ಸಿನಿಮಾದ ಕತೆಯಂತೆ. ಈಗ ಅವರ ನಿರ್ದೇಶನದ ಸಲಗ ಚಿತ್ರದ ಮೇಲೆ ನನಗೆ ತುಂಬಾ ನಿರೀಕ್ಷೆ ಇದೆ.- ಉಪೇಂದ್ರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವರ್ಷಾಂತ್ಯಕ್ಕೆ ಭರ್ತಿಯಾದ ಚಿತ್ರಮಂದಿರಗಳು: ಸ್ಯಾಂಡಲ್‌ವುಡ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ
ಗರುಡ ಪುರಾಣದ ನೆರಳಲ್ಲಿ ಪಾಪ ಕರ್ಮಗಳ ನಿಟ್ಟುಸಿರು: ಹೇಗಿದೆ ಉಪ್ಪಿ-ಶಿವಣ್ಣನ ‘45’ ಸಿನಿಮಾ?