
ಸೌತ್ ನಟಿ ರಶ್ಮಿಕಾ ಮಂದಣ್ಣ ಪೊಗರು ತಂಡದೊಂದಿಗೆ ಮಜಾ ಟಾಕೀಸ್‌ಗೆ ಬಂದಿದ್ದರು. ಈ ಸಂದರ್ಭ ತಮ್ಮ ಲೈಫ್ ಬಗ್ಗೆ ಕುತೂಹಲಕಾರಿ ವಿಚಾರವನ್ನು ತಿಳಿಸಿದ್ದಾರೆ.
ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಿರಿಕ್ ಚೆಲುವೆ ತಾವೇ ಸ್ವತಃ ನಿದ್ದೆ ಇಲ್ಲದೆ ಒದ್ದಾಡಿದ ರಾತ್ರಿ ಇದೆ ಅಂದ್ರೆ ನಂಬ್ತೀರಾ..? ಆದ್ರೆ ಇದು ಹೌದು. ನಟಿ ನಿದ್ದೆ ಇಲ್ಲದೆ ಒದ್ದಾಡಿದ್ದಾರೆ.
ಹಾಯ್ ಸರ್ ಕಮ್ ನೋ; ರಶ್ಮಿಕಾ ಡೈಲಾಗ್‌ನ ಧ್ರುವ ಬಾಯಲ್ಲಿ ಕೇಳಿ!
ಯಾರಪ್ಪಾ ಈ ನಟಿಯ ನಿದ್ದೆ ಕೆಡಿಸಿದ್ದು ಅಂತೀರಾ..? ಅದು ಜಿರಳೆ. ಹೌದು. ಜಿರಳೆ ಅಂದ್ರೇನೇ ಸಿಕ್ಕಾಪಟ್ಟೆ ಭಯವಂತೆ ರಶ್ಮಿಕಾಗೆ. ಸ್ವಲ್ಪ ಅಲ್ಲ, ಜಿರಳೆ ಕಂಡ್ರೇನೇ ಒಂಥರಾ ಫೀಲಿಂಗ್ ಅಂತಾರೆ ನಟಿ.
ಪುಷ್ಪ ಸಿನಿಮಾ ಶೂಟಿಂಗ್ ಸಂದರ್ಭ 2 ಗಂಟೆಗೂ ಹೆಚ್ಚು ಪ್ರಯಾಣಿಸಿ ಬಂದು ರಾತ್ರಿ 12ಕ್ಕೆ ಮಲಗಿದ್ರೆ ಏನೋ ಬೆಡ್ ಶೀಟ್ ಮೇಲೆ ಬಿದ್ದ ಹಾಗಾಗಿತ್ತು.
ಕನ್ನಡತಿಯೇ ನಾಯಕಿಯಾಗಿ ಬೇಕೆಂದು ಡಿಮ್ಯಾಂಡ್ ಮಾಡಿದ ರಾಮ್ ಚರಣ್!
ನೋಡಿದರೆ ಜಿರಳೆಯೊಂದು ರಶ್ಮಿಕಾ ಅವರನೇ ಗುರಾಯಿಸುತ್ತಿತ್ತಂತೆ. ಅದನ್ನು ಹೊರ ಹಾಕೋಕೆ ಎರಡೂವರೆ ಗಂಟೆ ಪ್ರಯತ್ನಿಸಿ ನಿದ್ದೆಗೆಟ್ಟೆ ಎಂದಿದ್ದಾರೆ ರಶ್ಮಿಕಾ.
ಅಂತೂ ಹೆಣ್ಮಕ್ಕಳಿಗೆ ಜಿರಳೆ ಅಂದ್ರೆ ಆಗಲ್ಲ ಅನ್ನೋದು ರಶ್ಮಿಕಾ ಪಾಲಿಗೂ ಸುಳ್ಳಾಗಲಿಲ್ಲ. ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ನಟಿ ರಶ್ಮಿಕಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.