ಮಗನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ರೆ ತಾಯಿ ದೇವರ ದರ್ಶನ್ ಮಾಡುವುದಲ್ಲಿ ಬ್ಯುಸಿಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜಾಮೀನು ಪಡೆದು ಹೊರ ಬಂದಿರುವ ದರ್ಶನ್ ಕೆಲ ಸಮಯಗಳ ಕಾಲ ಬೆನ್ನು ನೋವು ಎಂದು ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾಗುತ್ತಿದ್ದಂತೆ ಅರ್ಧಕ್ಕೆ ನಿಂತಿದ್ದ ಸಿನಿಮಾ ಕೆಲಸಗಳನ್ನು ಶುರು ಮಾಡಿಕೊಂಡರು. ಬಹು ನಿರೀಕ್ಷಿತ ಡೆವಿಲ್ ಸಿನಿಮಾ ಚಿತ್ರೀಕರಣವನ್ನು ಮೊದಲು ಆರಂಭಿಸಿದ್ದಾರೆ. ಮೈಸೂರಿನ ಕೆಲ ಭಾಗಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿ ಇದೀಗ ರಾಜಸ್ಥಾನದ ಕಡೆ ಮುಖ ಮಾಡಿದ್ದಾರೆ. ಈ ಸಮಯದಲ್ಲಿ ತಾಯಿ ಮೀನಾ ತೂಗುದೀಪ ದೇವರ ದರ್ಶನ್ ಪಡೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.
ನಂಜನಗೂಡಿನ ನಂಜುಂಡೇಶ್ವರಿಗೆ ಮೀನಾ ತೂಗುದೀಪ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಮುಗಿದ ನಂತರ 'ನಂಜುಂಡೇಶ್ವರನ ದರ್ಶನ ಪಡೆದೆ. ವಿಶೇಷ ಏನಿಲ್ಲ ಸರ್ವೇಜನ ಸುಖಿನೋ ಭವಂತು. ಎಲ್ಲರನ್ನು ಭಗವಂತ ಚೆನ್ನಾಗಿಟ್ಟಿರಲಿ'ಎಂದು ಮೀನಾರವರು ಮಾತನಾಡಿದ್ದಾರೆ. ಮಗ ಹೇಗಿದ್ದಾನೆ ಸಿನಿಮಾ ಕೆಲಸಗಳು ಹೇಗೆ ನಡೆಯುತ್ತಿದೆ ಎಂದು ಪ್ರಶ್ನೆ ಮಾಡಿದಾಗ 'ಚೆನ್ನಾಗಿದ್ದಾನೆ, ರಾಜಸ್ಥಾನದಲ್ಲಿ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮಗನ ಮೇಲರಲಿ' ಎಂದು ಹೇಳಿದ್ದಾರೆ.
ಕೊನೆಗೂ ಗುಡ್ ನ್ಯೂಸ್ ಕೊಟ್ಟ ಬಿಗ್ ಬಾಸ್ ಧರ್ಮ ಕೀರ್ತಿರಾಜ್; ಪಕ್ಕದಲ್ಲಿರುವ ಹುಡುಗಿ ಮೇಲೆ ನೆಟ್ಟಿಗರ ಕಣ್ಣು!
ಏಪ್ರಿಲ್ 2ರಂದು ನಟ ದರ್ಶನ ಜಾಮನು ರದ್ದು ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ. ಈ ವೇಳ ಕೋರ್ಟ್‌ನಿಂದ ವಕೀಲರಿಗೆ ಮಹತ್ವದ ಸೂಚನೆ ನೀಡಿ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದರೆ ದರ್ಶನ್ ಮತ್ತೆ ಅರೆಸ್ಟ್ ಆಗುತ್ತಾರೆ. ಸದ್ಯದ ಮಟ್ಟಕ್ಕೆ 20 ದಿನಗಳ ಕಾಲ ಬಿಗ್ ರಿಲೀಸ್ ಸಿಕ್ಕಿದೆ. ಮಗನಿಗೆ ಒಳ್ಳೆಯದಾಗಲಿ ಎಂದು ಮೀನಾ ತೂಗುದೀಪ ದೇವರ ಮೊರೆ ಹೋಗಿದ್ದಾರ. ಈ ಹಿಂದೆ ಕೂಡ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ತಾಯಿ ಮಾತ್ರವಲ್ಲ ಪತ್ನಿ ವಿಜಯಲಕ್ಷ್ಮಿ ಕೂಡ ಸಾಕಷ್ಟು ದೇವರ ಮೊರೆ ಹೋಗಿದ್ದಾರೆ. ಕಂಡ ಕಂಡ ದೇವರಿಗೆ ಪ್ರಾರ್ಥನೆ ಮಾಡಿ ಬೇಡಿಕೆ ಇಟ್ಟಿದ್ದರು, ದರ್ಶನ್ ಹೊರ ಬರುತ್ತಿದ್ದಂತೆ ಸಮಯ ತೆಗೆದುಕೊಂಡು ಹರಕೆಯನ್ನು ತೀರಿಸುತ್ತಿದ್ದಾರೆ.
ಚಿಕ್ಕಣ್ಣನ ಜೊತೆ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಮೊದಲ ದಿನವೇ ಕಣ್ಣೀರಿಟ್ಟ 'ಹಿಟ್ಲರ್ ಕಲ್ಯಾಣ' ನಟಿ