ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಜೊತೆಗೆ ಇರುತ್ತಲೇ ನಟಿ ಪವಿತ್ರಾ ಗೌಡ ಅವರೊಂದಿಗೆ 10 ವರ್ಷಗಳ ಕಾಲ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ದರ್ಶನ್ ತಲೆಯಲ್ಲಿ ಎರಡು ಸುಳಿಗಳಿರುವುದೇ ಇದಕ್ಕೆ ಕಾರಣ ಎಂಬ ವಾದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಂಗಳೂರು (ಸೆ.10): ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿದ್ದ ನಟ ದರ್ಶನ್ ವಿಜಯಲಕ್ಷ್ಮಿ ಅವರನ್ನು ಮದುವೆ ಮಾಡಿಕೊಂಡಿದ್ದರೂ, ಅನೈತಿಕವಾಗಿ ನಟಿ ಪವಿತ್ರಾಗೌಡ ಅವರೊಂದಿಗೆ 10 ವರ್ಷಗಳ ಕಾಲ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಹೇಳಿದ್ದಾರೆ. ಇನ್ನು ಪೊಲೀಸರು ಅರೆಸ್ಟ್ ಮಾಡಿದ್ದ ವೇಳೆ ಪವಿತ್ರಾಗೌಡಳನ್ನು ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದನು. ಇದೆಲ್ಲವೂ ಆತ ಬೇಕಂತಲೇ ಮಾಡಿದ್ದಲ್ಲ, ಆತನ ತಲೆಯಲ್ಲಿ ಜನ್ಮತಃವಾಗಿ ಎರಡು ಸುಳಿ ಇರುವುದೇ ಇದಕ್ಕೆಲ್ಲ ಕಾರಣವೆಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟ ದರ್ಶನ್ ತೂಗುದೀಪ ತನ್ನ ಪ್ರೇಯಸಿ ಪವಿತ್ರಾ ಗೌಡಳಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾನೆಂದು ರೇಣುಕಾಸ್ವಾಮಿಯನ್ನು ಭೀಕರವಾಗಿ ಥಳಿಸಿ ಕೊಲೆ ಮಾಡಿದ ಆರೋಪದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಆದರೆ, ಆತನ ಕುರಿತು ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿಯೂ ಎಲ್ಲರ ಸಮ್ಮುಖದಲ್ಲಿ ವಿಜಯಲಕ್ಷ್ಮಿಯನ್ನು ಮದುವೆ ಮಾಡಿಕೊಂಡು 22 ವರ್ಷಗಳ ಸಂಸಾರ ನಡೆಸಿದ ದರ್ಶನ್‌ಗೆ 16 ವರ್ಷದ ಒಬ್ಬ ಮಗನೂ ಇದ್ದಾನೆ. ಇದೆಲ್ಲದರ ನಡುವೆಯೂ ಆತ, ಎರಡನೇ ಸಂಬಂಧವಾಗಿ ನಟಿ ಪವಿತ್ರಾ ಗೌಡನೊಂದಿಗೆ ಸಂಸಾರ ಮಾಡುತ್ತಿದ್ದನು ಎಂಬುದು ಬಹಿರಂಗವಾಗಿದೆ.
ಇದನ್ನೂ ಓದಿ: ಪವಿತ್ರಾಗೌಡಗಿಂತ 14 ವರ್ಷ ದೊಡ್ಡವನಾದ ದರ್ಶನ್ ಜೊತೆ 10 ವರ್ಷ ಸಂಸಾರ?
ಮನೆಯಲ್ಲಿ ವಿಜಯಲಕ್ಷ್ಮಿ ಇದ್ದರೂ ಕೂಡ ಮನೆಯಿಂದ ಆಚೆಗೆ ಸಿನಿಮಾ ಚಾನ್ಸ್ ಕೇಳಿಕೊಂಡು ಬಂದ ನಟಿ ಪವಿತ್ರಾ ಗೌಡಳೊಂದಿಗೆ ಆಪ್ತ ಸಲುಗೆ ಹೊಂದಿ, ಪ್ರೀತಿ ಮಾಡುತ್ತಾ ಗುಟ್ಟಾಗಿ ಸಂಸಾರವನ್ನೂ ಆರಂಭಿಸಿದ್ದನು. ಇದು ಕೆಲವು ದಿನಗಳ ಹಿಂದಷ್ಟೇ ಬಹಿರಂಗವಾಗಿತ್ತು. ಇದಾದ ನಂತರ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸಿಕ್ಕಿಕೊಂಡ ನಂತರ ಇಬ್ಬರ ಸಂಬಂಧ ಏನೆನ್ನುವುದು ರಿವೀಲ್ ಆಗಿದೆ. ನಟ ದರ್ಶನ್ ತಾನು ಗುಟ್ಟಾಗಿ ಸಂಬಂಧ ಇಟ್ಟುಕೊಂಡಿದ್ದ ನಟಿ ಪವಿತ್ರಾಗೌಡಳನನ್ನು 'ಮುದ್ದು ಹೆಂಡತಿ' ಎಂದು ಕರೆಯುತ್ತಿದ್ದನು. ಮತ್ತೊಂದೆಡೆ ನಟ ದರ್ಶನ್‌ಗೆ ಪವಿತ್ರಾ ಕೂಡ 'ಸುಬ್ಬ' ಎಂದೇ ಪ್ರೀತಿಯಿಂದ ಕರೆಯುತ್ತಿದ್ದಳು.
ದರ್ಶನ್‌ಗೆ ಇಬ್ಬರು ಹೆಣ್ಣಿನ ಸಂಬಂಧ ಏಕೆ ಬಂತು ಗೊತ್ತಾ?
ಇನ್ನು ನಟ ದರ್ಶನ್ ಬೇಕಂತಲೇ ನಟಿ ಪವಿತ್ರಾಗೌಡಳ ಸಂಬಂಧ ಬೆಳೆಸಿಲ್ಲ. ದರ್ಶನ್ ತಲೆಯಲ್ಲಿ 2 ಸುಳಿಗಳಿವೆ. ಆದ್ದರಿಂದ ಆತನಿಗೆ ತಿಳಿಯದೇ ಇಬ್ಬರೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ವಾದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿಯು ಟಾಕ್ ಆ ದಿ ಟೌನ್ ಆಗಿದೆ. ನಟ ದರ್ಶನ್ ಅಯ್ಯ ಸಿನಿಮಾದಲ್ಲಿ ನಟಿಸಿದ ವೇಳೆ ಆತನ ತಲೆಯಲ್ಲಿ ಎರಡು ಸುಳಿಗಳು ಇರುವುದು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಆತನಿಗೆ ಮನೆಯಲ್ಲಿ ಹೆಂಡತಿ ವಿಜಯಲಕ್ಷ್ಮಿ ಹಾಗೂ ಹೊರಗೆ ನಟಿ ಪವಿತ್ರಾ ಗೌಡ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.
ಸ್ನೇಹಿತೆಯ ಬರ್ತಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮೀ ದರ್ಶನ್; ಇಷ್ಟೇ ಕಣ್ರೋ ಜೀವನ ಎಂದ ನೆಟ್ಟಿಗರು!
ಸಾಮಾನ್ಯವಾಗಿ ಗಂಡು ಮಕ್ಕಳಿಗೆ ತಲೆಯಲ್ಲಿ ಎರಡು ಸುಳಿ ಇದ್ದರೆ ಇಬ್ಬರು ಪತ್ನಿಯರು ಅನ್ನೋ ಮಾತಿದೆ. ಸದ್ಯ ದರ್ಶನ್ ವಿಚಾರದಲ್ಲಿ ಇದು ನಿಜ ಅನ್ನೋ ಮಾತು ಟ್ರೆಂಡಿಂಗ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ಗೆ ಎರಡು ಸುಳಿ ಇರೋ ವಿಡಿಯೋ ವೈರಲ್ ಆಗುತ್ತಿದೆ. 'ಅಯ್ಯ' ಸಿನಿಮಾದ ದರ್ಶನ್ ಸೀನ್ ಇದೀಗ ವೈರಲ್ ಆಗುತ್ತಿದೆ. ಹೀಗಾಗಿಯೇ, ಪತ್ನಿ ವಿಜಯಲಕ್ಷ್ಮಿಯೊಂದಿಗೆ ಸಂಸಾರ ಹಾಗೂ ನಟಿ ಪವಿತ್ರಾ ಜೊತೆಗೆ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದನು ಎಂದು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ತಲೆಯಲಿರುವ ಎರಡು ಸುಳಿಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.