ನಟ ದರ್ಶನ್ ಅವರಿಗೆ ಜೈಲು ಸುರಕ್ಷಿತ ಸ್ಥಳ, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವಾಗ ಹೊರಗಡೆ ಬಂದರೆ ಒಳ್ಳೆಯದಾಗುತ್ತೋ ಆವಾಗ ಬರುತ್ತಾರೆ ಅವರು. ಏಕೆಂದರೆ, ನಟ ದರ್ಶನ್‌ಗೆ ಇರುವ ಅಪಾಯ, ಜೀವಕ್ಕೇ ಗಂಡಾಂತರ ಅಥವಾ ಜೀವನಕ್ಕೆ ಸಮಸ್ಯೆ..
'ನಟ ದರ್ಶನ್ ಅವರು ಸದ್ಯ ಜೈಲಿನೊಳಕ್ಕೆ ಇರುವುದೇ ಒಳ್ಳೆಯದು. ಹೊರಗಡೆ ಇದ್ದರೆ ಅವರ ಜೀವಕ್ಕೇ ಅಪಾಯವಿದೆ. ಸುಮಾರು ಮೂರು ತಿಂಗಳ ಹಿಂದೆಯೇ ನನಗೆ ಈ ಬಗ್ಗೆ ನನ್ನ ತಾಯಿ (ದೇವಿ) ತಿಳಿಸಿದ್ದಾಳೆ. ನಟ ದರ್ಶನ್ ಅವರಿಗೆ ಪ್ರಾಣಾಪಾಯ ಇದೆ. ಅದನ್ನು ತಪ್ಪಿಸಲು ನಾನು ನನ್ನಿಂದಾಗುವ ಎಲ್ಲಾ ಪ್ರಯತ್ನ ಮಾಡುತ್ತೇನೆ. ಆದರೆ, ಅವರಿಗೆ ಸಮಸ್ಯೆ ಆಗಿರುವುದು ಒಂದು ಹೆಣ್ಣು ಅತೃಪ್ತ ದೇವರಿಂದಲೇ. ಆದ್ದರಿಂದಲೇ ನಟ ದರ್ಶನ್ ಅವರು ಮಹಿಳೆಯರಿಂದಲೇ ಶೋಷಣೆಗೆ ಒಳಗಾಗಿದ್ದಾರೆ, ಜೊತೆಗೆ, ಅವರಿಗೆ ಮಹಿಳೆಯರೇ ರಕ್ಷಣೆ ಕೂಡ ನೀಡುತ್ತಿದ್ದಾರೆ. ಈ ಘಟನೆಯಲ್ಲೂ ಎಲ್ಲವೂ ಮಹಿಳೆಯರ ಹೆಸರಿಗೇ ಸಂಬಂಧಿಸಿವೆ.
ನಟ ದರ್ಶನ್ ಅವರ ಸುತ್ತಮುತ್ತ ನಡೆದ ಘಟನೆಯನ್ನೇ ನೋಡಿ. ಪವಿತ್ರಾ ಗೌಡ ಅವರು ನಟ ದರ್ಶನ್ ಅವರ ಬಾಳಲ್ಲಿ ಬಂದು ಬಿರುಗಾಳಿ ಎದ್ದಿತು. ನಟ ದರ್ಶನ್ ಮನೆ ಇರುವುದು ರಾಜರಾಜೇಶ್ವರಿ ದೇವಾಲಯ ಇರುವ ರಾಜರಾಜೇಶ್ವರಿ ನಗರದಲ್ಲಿ. ಜೊತೆಗೆ, ರೇಣುಕಾಸ್ವಾಮಿ ಹೆಸರಿನಲ್ಲೂ ರೇಣುಕಾ ಇದ್ದಾಳೆ. ಕೊಲೆ ನಡೆದ ಸ್ಥಳ ಕೂಡ ಕಾಮಾಕ್ಷಿ ಪಾಳ್ಯ. ಅಲ್ಲೂ ಕೂಡ ಕಾಮಾಕ್ಷಿ ದೇವಿ ನೆಲೆಸಿದ್ದಾಳೆ. ಇನ್ನು ನಟ ದರ್ಶನ್ ಅವರಿಗೆ ಜೈಲು ವಾಸ ಆಗಿದ್ದು ಅನ್ನಪೂರ್ಣೇಶ್ವರಿ ನಗರದಲ್ಲಿ. ಇನ್ನು ಈಗಿರುವ ಪರಪ್ನ ಅಗ್ರಹಾರದ ಸಮೀಪ ಕೂಡ ಯಾವುದಾದರೂ ದೇವತೆಯ ಗುಡಿಯೋ, ದೇವಸ್ಥಾನವೋ ಖಂಡಿತವಾಗಿ ಇರಲೇಬೇಕು' ಎಂದಿದ್ದಾರೆ ದೇವಿ ಭಕ್ತೆ ಮಹಿಳೆ.
ದೇವಿ ಭಕ್ತೆಯೊಬ್ಬರ ಮೂಲಕ ಭವಿಷ್ಯ ನುಡಿಸಿದ್ದರೂ, ಗೊತ್ತಿದ್ದೂ ನಟ ದರ್ಶನ್ ಕೇರ್‌ಲೆಸ್ ಮಾಡಿದ್ದೇಕೆ..?
ಈ ಎಲ್ಲಾ ಕಾರಣಗಳಿಂದ ನಟ ದರ್ಶನ್ ಅವರಿಗೆ ಜೈಲು ಸುರಕ್ಷಿತ ಸ್ಥಳ, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವಾಗ ಹೊರಗಡೆ ಬಂದರೆ ಒಳ್ಳೆಯದಾಗುತ್ತೋ ಆವಾಗ ಬರುತ್ತಾರೆ ಅವರು. ಏಕೆಂದರೆ, ನಟ ದರ್ಶನ್‌ಗೆ ಇರುವ ಅಪಾಯ, ಜೀವಕ್ಕೇ ಗಂಡಾಂತರ ಅಥವಾ ಜೀವನಕ್ಕೆ ಸಮಸ್ಯೆ ಇವೆಲ್ಲವುಗಳನ್ನೂ ಮೊದಲೇ ತಿಳಿಸಿರುವ ದೇವಿ, ಅವರಿಗೆ ಬರಬಹುದಾದ ಸಮಸ್ಯೆಯ ಬಹುಭಾಗವನ್ನು ತಪ್ಪಿಸಿ ಅವರು ಜೀವಂತವಾಗಿ ಇರುವಂತೆ ನೋಡಿಕೊಂಡಿದ್ದಾಳೆ ಎಂದು ಆ ಮಹಿಳೆ ಹೇಳಿದ್ದಾರೆ. ಹೀಗಾಗಿ, ನಟ ದರ್ಶನ್ ಪ್ರಾಣ ಕಾಪಾಡುವ ನಿಟ್ಟಿನಲ್ಲಿಯೇ ಅವರು ಇಂಥ ಘೋರ ಆರೋಪದಲ್ಲಿ ಸಿಲುಕಿದ್ದಾರೆ, ಈ ಮೂಲಕ ಅವರಿಗೆ ಬರಬಹುದಾದ ಗಂಡಾಂತರ ಸ್ವಲ್ಪ ಮಟ್ಟಿಗೆ ಶಮನವಾಗಿದೆ' ಎಂದಿದ್ದಾರೆ ಆ ದೇವಿ ಭಕ್ತೆ.
ಈ ಸಂಗತಿಯನ್ನು ಆಕೆಯ ಗುರುಗಳಾಗಿರುವ ಒಬ್ಬರು ಸ್ವಾಮೀಜಿ ತಮ್ಮ ಆಪ್ತರ ಬಳಿಗೆ ಹೇಳಿಕೊಂಡಿದ್ದಾರೆ. ಅದೀಗ ಅವರಿಂದ ಇವರಿಗೆ, ಇವರಿಂದ ಮತ್ತೊಬ್ಬರಿಗೆ, ಮಗದೊಬ್ಬರಿಗೆ ಸುದ್ದಿಯಾಗುತ್ತ ಸಾಗುತ್ತಿದೆ. 'ನನಗೆ ಯಾವುದೇ ಪ್ರಚಾರ ಬೇಡ, ಈ ಸಂಗತಿ ನಟ ದರ್ಶನ್ ಅವರಿಗೆ ಗೊತ್ತು. ಸಮಯ ಬಂದಾಗ ಅವರೇ ಹೇಳಬಹುದು. ಅಥವಾಮ ಹೇಳದಿದ್ರೂ ತೊಂದರೆಯೇನೂ ಇಲ್ಲ' ಎಂದಿದ್ದಾರೆ. ಹಾಗಿದ್ದರೆ, ನಟ ದರ್ಶನ್ ಈ ಕೇಸಿನಲ್ಲಿ ಸಿಕ್ಕಿಹಾಕಿಕೊಳ್ಳದಿದ್ದರೆ ಪ್ರಾಣ ಕಳೆದುಕೊಳ್ಳುತ್ತಿದ್ದರೇ? ಅದು ಅವರವರ ಯೋಚನೆ, ನಿರ್ಧಾರಕ್ಕೆ ಬಿಟ್ಟಿದ್ದು ಎನ್ನಬಹುದು.
ಅಪಾಯದ ಸೆನ್ಸ್ ಮೊದ್ಲೇ ಆಗಿದೆ, ಆದ್ರೂ ಬೆಂಗಳೂರು ಬಿಟ್ಟು ಹೋಗದೇ ಜೈಲು ಸೇರ್ಕೊಂಡ್ರು ದರ್ಶನ್!
ಅಚ್ಚರಿ ಎಂದರೆ, ಆ ಮಹಿಳೆ ಸ್ವಾಮೀಜಿಗೆ ಹೇಳಿದಂತೆ, ಈ ಘಟನೆ ನಡೆಯುವ ಸ್ವಲ್ಪ ದಿನಕ್ಕೆ ಮೊದಲು ನಟ ದರ್ಶನ್ ಅವರ ಎಡಗೈಗೆ ಏಟ್ ಆಗಿದ್ದು ಹೌದು ಎನ್ನಲಾಗಿದೆ. ಹೇಳಿದಂತೆ, ಎಡಗೈಗೆ ಏಟಾದ ಬಳಿಕ, ಈ ಘಟನೆ ನಡೆದಿದೆ. ಇಷ್ಟು ತಿಳಿದ ಮೇಲೆ ಸುಮ್ಮನಿರಬಾರದು ಎಂದು ಸ್ವತಃ ಆ ಸ್ವಾಮೀಜಿಗಳೇ ನಟ ದರ್ಶನ್ ಅವರನ್ನು ಸಂಪರ್ಕಿಸಿ ಈ ಸಂಗತಿ ತಿಳಿಸಿದ್ದರಂತೆ. ಜತೆಗೆ, ಸ್ವಾಮೀಜಿಗಳು ಈಗ ಫ್ರಾಕ್ಚರ್ ಆಗಿರುವುದು ನಿಮ್ಮ ಬಲಗೈ, ಮುಂದೆ ಆಗಲಿರುವುದು ಎಡಗೈ ಎಂದಿದ್ದರಂತೆ. 'ಅದನ್ನು ಕೇಳಿ ನಟ ದರ್ಶನ್‌ಗೆ ಶಾಕ್ ಆಗ್ಬಿಟ್ಟು ಮೌನಕ್ಕೆ ಶರಣಾಗಿದ್ದರು. ಅದರಂತೆ, ಸ್ವಲ್ಪ ದಿನದಲ್ಲೇ ನಟ ದರ್ಶನ್ ಎಡಗೈಗೆ ತೀವ್ರ ಏಟ್ ಆಗಿತ್ತು. ಬಳಿಕ, ಆ ಮಹಿಳೆ ಹೇಳಿದಂತೆ ದೊಡ್ಡ ಸಮಸ್ಯೆ ಎದುರಾಗಿದೆ' ಎಂದಿದ್ದಾರೆ ಹೆಸರು ಹೇಳಲು ಇಚ್ಛಿಸದ ಸ್ವಾಮೀಜಿಗಳು.
ಮಡಿಕೇರಿಗೆ ಶಿಫ್ಟ್ ಆದ್ರಾ ವಿಜಯಲಕ್ಷ್ಮಿ, ಮಗ ವಿನೀಶ್ ಜೊತೆ ಬೆಂಗಳೂರು ತೊರೆದ್ರಾ ದರ್ಶನ್ ಪತ್ನಿ!
ಯಾಕೆ ನೀವು ಹೆಸರು ಹೇಳುವುದಿಲ್ಲ ಎಂಬ ಪ್ರಶ್ನೆಗೆ ಅವರು 'ಕೆಲವರು ಕಣ್ಣಿಗೆ ಕಂಡಿದ್ದನ್ನು ಬಿಟ್ಟು ಕಾಣದ್ದನ್ನು ನಂಬುವುದಿಲ್ಲ. ಎಲ್ಲವನ್ನೂ ತರ್ಕಕ್ಕೇ ಸಿಕ್ಕಿಹಾಕಿಸಿ ಹೇಳುವುದಕ್ಕೆ ಆಗುವುದಿಲ್ಲ. ಆ ಕಾರಣಕ್ಕೇ ನಾನು ಸ್ವತಃ ದರ್ಶನ್ ಅವರಿಗೇ ತಿಳಿಸಿದ್ದರೂ ವಾದ ಮಾಡಲು ಹೋಗಲಿಲ್ಲ. ಕಾರಣ, ವಾದ ಮಾಡಿದರೆ ಅದೊಂದು ವಿವಾದವಾಗುತ್ತದೆ. ಆದರೆ, ಯಾವತ್ತು ಭವಿಷ್ಯವು ವರ್ತಮಾನವಾಗಿ ಬದಲಾಗುತ್ತದೆಯೋ ಆಗ, ಭವಿಷ್ಯವನ್ನು ಮೊದಲೇ ಹೇಳಿದ್ದವರಿಗೂ ಕೇಳಿಸಿಕೊಂಡವರಿಗೂ ಯಾವುದೇ ತರ್ಕ ಶಾಸ್ತ್ರದ ಅಗತ್ಯ ಇರುವುದಿಲ್ಲ' ಎಂದಿದ್ದಾರೆ.
ಸಖತ್ ಕ್ಲಾಸ್ ತಗೊಂಡ್ರು ಅಗ್ನಿ ಶ್ರೀಧರ್, ಏನೋ ಇದೂ, ಬುದ್ದಿವಂತ ಆಗಿದ್ದೂ ಏನು ಮಾತಿದು ಉಪೇಂದ್ರ..?
ಅಂದಹಾಗೆ, ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿದ್ದು ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿ ಬಂಧಿಯಾಗಿರುವುದು ಗೊತ್ತೇ ಇದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಒಟ್ಟೂ ಹದಿನೇಳು ಜನರು ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚರಣಾಧೀನ ಖೈದಿಗಳಾಗಿ ಕಭಿ ಹಿಂದೆ ಸೇರಿದ್ದಾರೆ. ನಟ ದರ್ಶನ್, ಅವರಿಗೆ ಬೇಲ್ ಆಗುತ್ತಾ? ಆದರೂ ಯಾವಾಗ ಆಗುತ್ತೆ? ಈ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್ ಮೇಲಕ್ಕೆ ಹಾರೋದು; KGF ರಾಕಿಂಗ್ ಸ್ಟಾರ್ ಯಶ್ ಯಾರಿಗೆ ಹೇಳಿದ್ದು?