ವೈರಲ್ ಆಗ್ತಿದೆ ದರ್ಶನ್ ಅಪ್ಪಟ ಅಭಿಮಾನಿ ಪತ್ರ; ಆದ್ರೆ ಮಾಮೂಲಿ ಅಲ್ಲ ನೆಕ್ಸ್ಟ್‌ ಲೆವೆಲ್‌!

By Shriram Bhat  |  First Published Dec 19, 2024, 6:38 PM IST

ಇದು ನನ್ನ ಮತ್ತು ನನ್ನಂತೆ ನಿಮಗೆ ಒಳ್ಳೆಯದನ್ನು ಮಾತ್ರ ಬಯಸುವ ನಿಜವಾದ ಅಭಿಮಾನಿಗಳ ಆಶಯ.. ನೀವು ತಪ್ಪು ಮಾಡಿದ್ದೀರೋ ಇಲ್ಲವೋ ಅದು ನ್ಯಾಯಾಲಯಕ್ಕೆ ಬಿಟ್ಟಿದ್ದು. ಆದರೆ ನೀವು ಈ ಘಟನೆಗೆ ಹೊಣೆಗಾರರಂತೂ ಹೌದು. ಕೆಟ್ಟ ಘಳಿಗೆ.. ನೀವು ಇಲ್ಲಿಯವರೆಗೆ ಅನುಭವಿಸಿದ್ದು...


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ, ಆರು ತಿಂಗಳು ಬಳಿಕ ಜಾಮೀನಿನ ಮೇಲೆ ನಟ ದರ್ಶನ್ (Actor Darshan) ಬಿಡುಗಡೆ ಆಗಿದ್ದು ಗೊತ್ತೇ ಇದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಬಹುತೇಕ ಎಲ್ಲರಿಗೂ ಜಾಮೀನು ದೊರಕಿದ್ದು, 6 ತಿಂಗಳುಗಳ ಬಳಿಕ ಅವರೆಲ್ಲರೂ ತಮ್ಮತಮ್ಮ ಮನೆಗೆ ವಾಪಸ್ಸಾಗಿದ್ದಾರೆ. ಆದರೆ, ಇದು ಜಾಮೀನು ಸಹಿತ ಬಿಡುಗಡೆ ಆಗಿದ್ದು, ಕೇಸ್ ಇನ್ನೂ ತನಿಖೆ ಹಂತದಲ್ಲಿದೆ. ಹೀಗಾಗಿ ಆರೋಪಿಗಳು ಕೆಲವು ಷರತ್ತುಗಳನ್ನು ಪಾಲಿಸುವುದು ಅನಿವಾರ್ಯ ಎಂಬಂತಾಗಿದೆ. 

ಈ ಕ್ಷಣದಲ್ಲಿ ನಟ ದರ್ಶನ್ ಅವರ ಬಹುಕಾಲದ ಅಭಿಮಾನಿ ಆಗಿರುವ 'ವಿನಯ್ ಪಾಂಡವಪುರ' ಎಂಬವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಅವರು (Vinay Pandavapura) ಕೇವಲ ತಮ್ಮ ಅಭಿಮಾನವನ್ನು ಮಾತ್ರ ಪ್ರದರ್ಶಿಸದೇ ಬಹಳಷ್ಟು ಪ್ರಬುದ್ಧತೆಯನ್ನು ಕೂಡ ಮೆರೆದಿದ್ದಾರೆ. ಈ ಪತ್ರವನ್ನು ನೋಡಿರುವ ಬಹಳಷ್ಟು ಮಂದಿ, ಸ್ವತಃ ದರ್ಶನ್ ಅಭಿಮಾನಿಗಳೂ ಸೇರಿದಂತೆ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ, ವಿನಯ್ ಪಾಂಡವಪುರ ಎಂಬವರು ಅದೇನು ಬರೆದಿದ್ದಾರೆ ನೋಡಿ.. 

Tap to resize

Latest Videos

undefined

ದರ್ಶನ್‌ಗೆ ಜಾಮೀನು ಸಿಕ್ಕ ಬಗ್ಗೆ ಸುದೀಪ್ 'ಏನೂ ಹೇಳಲ್ಲ' ಎನ್ನುತ್ತಲೇ ಹೇಳಿದ್ದೇನು?

ತಮ್ಮ ಪತ್ರದಲ್ಲಿ 'ವಿನಯ್ ಪಾಂಡವಪುರ' ಅವರು 'ನನಗೆ ಈ ಕ್ಷಣಕ್ಕೆ ಇದು ತುಂಬಾನೇ ಖುಷಿಪಡುವ ಸುದ್ದಿ ಖಂಡಿತ ಹೌದು. ಆದರೆ, ಅದರ ಜೊತೆಜೊತೆಗೇ ಡಿ ಬಾಸ್ ಅವರಿಗೆ ದೊರೆತ ಪುನರ್ಜನ್ಮ ಇದು ಆಗಿರುವುದರಿಂದ ಇದನ್ನು ಪರಿಗಣಿಸಿ, ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಇಡುವಂಥ ಪ್ರತಿ ಹೆಜ್ಜೆ ಕೂಡ ಬಹಳ ಜಾಗರೂಕತೆಯಿಂದ, ಜಾಣ್ಮೆಯಿಂದ ಇಡಬೇಕು. ಮತ್ತೆ ಯಾವುದೇ ಕಾರಣಕ್ಕೂ ಈ ರೀತಿಯ ಯಾವುದೇ ಘಟನೆಗಳು ನಿಮ್ಮ ಬದುಕಿನಲ್ಲಿ ಮರುಕಳಿಸದಂತೆ ನೀವು ನೋಡಿಕೊಳ್ಳಬೇಕು. 
 
ಇದು ನನ್ನ ಮತ್ತು ನನ್ನಂತೆ ನಿಮಗೆ ಒಳ್ಳೆಯದನ್ನು ಮಾತ್ರ ಬಯಸುವ ನಿಜವಾದ ಅಭಿಮಾನಿಗಳ ಆಶಯ.. ನೀವು ತಪ್ಪು ಮಾಡಿದ್ದೀರೋ ಇಲ್ಲವೋ ಅದು ನ್ಯಾಯಾಲಯಕ್ಕೆ ಬಿಟ್ಟಿದ್ದು. ಆದರೆ ನೀವು ಈ ಘಟನೆಗೆ ಹೊಣೆಗಾರರಂತೂ ಹೌದು. ಕೆಟ್ಟ ಘಳಿಗೆ.. ನೀವು ಇಲ್ಲಿಯವರೆಗೆ ಅನುಭವಿಸಿದ್ದು ಸಾಕು... ನಾವೆಲ್ಲರೂ ನೋಡಿದ್ದೂ ಸಾಕು, ದುಃಖ ಪಟ್ಟಿದ್ದೂ ಸಾಕು.. 'ತಪ್ಪು ನಡೆಯೋದು ಸಹಜ ಕಣೋ, ತಿದ್ದಿ ನಡೆಯೋನು ಮನುಜ ಕಣೋ' ಇದೇ ನಿಮ್ಮ ಭವಿಷ್ಯದ ಮಂತ್ರವಾಗಿರಬೇಕು. 

ಸಿತಾರಾ ಗಟ್ಟಿ ನಿರ್ಧಾರದಿಂದ ಬಹಳಷ್ಟು ಪುರುಷರು ಬ್ರಹ್ಮಚಾರಿಗಳಾಗಿಯೇ ಉಳಿದ್ರಾ!

ತಾವಾಯ್ತು, ತಮ್ಮ ಪಾಡಾಯ್ತು, ಹೆಂಡತಿ, ಮಗ, ತಾಯಿ, ಮುಖ್ಯವಾಗಿ ಒಳ್ಳೆಯ ಸ್ನೇಹಿತರು.. ಒಳ್ಳೆಯ ಹವ್ಯಾಸ, ಒಳ್ಳೆಯ ಸಿನಿಮಾಗಳು ಅಂತ ಅಷ್ಟಕ್ಕೆ ಮಾತ್ರ ತಮ್ಮ ಮುಂದಿನ ದಿನಗಳನ್ನು ಮೀಸಲಿಟ್ಟುಬಿಡಿ.. ಸ್ವಾಭಿಮಾನ ಬಿಡ್ಬೇಡಿ ಮತ್ತು ನೀವು ಬೆಳೆದುಬಂದಿರುವ ದಾರಿನ ಮರಿಬೇಡಿ.. ಇದಕ್ಕಿಂತ ಹೆಚ್ಚು ಈ ಕ್ಷಣಕ್ಕೆ ನಾನೇನೂ ಹೇಳೋಕೆ ಬಯಸೋದಿಲ್ಲ.. 

ನಾನು ಮೇಲೆ ಹೇಳಿದ ಹಾಗೆ ಮುಂದಿನ ದಿನಗಳಲ್ಲಿ ನೀವಿದ್ದು ನಂಬಿಕೆ ಉಳಿಸಿಕೊಳ್ಳುತ್ತೀರಾ ಎಂಬುದನ್ನೇ ನಾನು ನಂಬಿದ್ದೇನೆ. ಇಂತಿ ನಿಮ್ಮ ಸದಾಕಾಲದ ಅಭಿಮಾನಿ #ಡಿಬಾಸ್..' ಎಂದು ಬರೆದು ತಮ್ಮ ಅಕೌಂಟ್‌ ಮೂಲಕ ಪೊಸ್ಟ್ ಮಾಡಿದ್ದಾರೆ. ಅದನ್ನೀಗ ಬಹಳಷ್ಟು ಯೂಟ್ಯೂಬ್ ಚಾನೆಲ್‌ಗಳು ಹಾಗೂ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು ಶೇರ್ ಮಾಡುತ್ತಿವೆ. ಈ ಪತ್ರಕ್ಕೆ ಬಹಳಷ್ಟು ಲೈಕ್ಸ್  ಹಾಗು ಕಾಮೆಂಟ್‌ಗಳು ಹರಿದು ಬರುತ್ತಿವೆ.

ನಟಿ ಆರತಿ ಚಿತ್ರರಂಗವನ್ನು ತೊರೆದ ನಿಜವಾದ ಕಾರಣ ಕೊನೆಗೂ ಬಹಿರಂಗವಾಯ್ತು! 

ಅದಕ್ಕೊಬ್ಬರು ಹೀಗಂತ ಕಾಮೆಂಟ್ ಮಾಡಿದ್ದಾರೆ:- 'ಆ ಪತ್ರದ ಒಟ್ಟಿನ ಸಾರಾಂಶ- ನಾಯಿ ಬಾಲ ಡೊಂಕಾಗಬಾರದು, ಮುಂದಿನ ದಿನಗಳು ಭಾರಿ ಕಷ್ಟವಾಗಿದೆ, ದಯಮಾಡಿ ಎಚ್ಚೆತ್ತುಕೊಂಡು ಮುನ್ನಡೆಯಿರಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ನಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಿಮ್ಮ ಜೊತೆಯಲ್ಲೇ ಇರುತ್ತದೆ. ಸಹವಾಸ ಸಂಘ ಹವಾಮಾನ ಭಂಗ, ಸಹವಾಸ ಕರೆಕ್ಟಾಗಿ ಇರುವಂತೆ ನೋಡಿಕೊಳ್ಳಿ. ಸಹವಾಸದಿಂದ ಸನ್ಯಾಸಿ ಕೂಡ ಹಾಳಾಗುತ್ತಾನೆ ಎಂಬ ಗಾದೆ ಮಾತಿದೆ. ಆ ರೀತಿ ಮಾಡಿಕೊಳ್ಳಬೇಡಿ. ಮುಂದಿನ ಜೀವನ ಭಾರಿ ಕಷ್ಟಕರವಾಗಿರುತ್ತದೆ' ಎಂದಿದ್ದಾರೆ. 

 

 

click me!