ನಟ ದರ್ಶನ್‌, ಸಹಚರರ ಜಾಮೀನು ಅರ್ಜಿ ಇಂದು ಸುಪ್ರೀಂ ವಿಚಾರಣೆ!

Published : Apr 22, 2025, 12:16 PM ISTUpdated : Apr 22, 2025, 12:53 PM IST
ನಟ ದರ್ಶನ್‌, ಸಹಚರರ ಜಾಮೀನು ಅರ್ಜಿ ಇಂದು ಸುಪ್ರೀಂ ವಿಚಾರಣೆ!

ಸಾರಾಂಶ

ತೀವ್ರ ಬೆನ್ನುನೋವು ಸಮಸ್ಯೆಯೊಡ್ಡಿ ಆಪರೇಷನ್ ಅಗತ್ಯ ಇದೆ. ಹಾಗಾಗಿ ನಟ ದರ್ಶನ್ ಗೆ ಜಾಮೀನು ಅಗತ್ಯ ಇದೆ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲಾಗಿತ್ತು. ಆದರೆ ಜಾಮೀನು ಸಿಕ್ಕ ಬಳಿಕ ನಟ ದರ್ಶನ್ ಆಪರೇಷನ್ ಗೆ ಒಳಗಾಗಲೇ ಇಲ್ಲ.

ನವದೆಹಲಿ (ಏ.22): ಚಂದನವನದ ನಟ ದರ್ಶನ್ ಜಾಮೀನು ರದ್ದುಕೋರಿರುವ ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಬರಲಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ನಟ ದರ್ಶನ್ ಮತ್ತು ಸಹಚರರ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಅರ್ಜಿ ನ್ಯಾ.ಜೆ.ಬಿ.ಪರ್ದೀವಾಲ, ನ್ಯಾ .ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಮತ್ತು ಇತರರಿಗೆ ಸಿಕ್ಕಿರುವ ಜಾಮೀನು ರದ್ದುಗೊಳಿಸಲು ಮತ್ತಷ್ಟು ಪೂರಕ ದಾಖಲೆಗಳನ್ನು ಬೆಂಗಳೂರು ಪೊಲೀಸರು ಕಳೆದ ಶುಕ್ರವಾರ ಸಲ್ಲಿಸಿದ್ದಾರೆ

ತೀವ್ರ ಬೆನ್ನುನೋವು ಸಮಸ್ಯೆಯೊಡ್ಡಿ ಆಪರೇಷನ್ ಅಗತ್ಯ ಇದೆ. ಹಾಗಾಗಿ ನಟ ದರ್ಶನ್ ಗೆ ಜಾಮೀನು ಅಗತ್ಯ ಇದೆ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲಾಗಿತ್ತು. ಆದರೆ ಜಾಮೀನು ಸಿಕ್ಕ ಬಳಿಕ ನಟ ದರ್ಶನ್ ಆಪರೇಷನ್ ಗೆ ಒಳಗಾಗಲೇ ಇಲ್ಲ. ಈ ವಿಚಾರವನ್ನು ಬೆಂಗಳೂರು ಪೊಲೀಸರು ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ನ್ಯಾಯಾಲಯಕ್ಕೆ ಹಾಜರಾಗದೇ ಸಾಕ್ಷ್ಯದಾರರೊಬ್ಬರ ಜೊತೆ ಕೂತು ದರ್ಶನ್ ಸಿನಿಮಾ ನೋಡಿದ್ದ ವಿಡಿಯೋ ವೈರಲ್ ಅಗಿತ್ತು. ಆರೋಪಿಯ ನಡವಳಿಕೆಯಲ್ಲಿ ವ್ಯತ್ಯಾಸಗಳು ಇವೆ. ಹಾಗಾಗಿ ಆರೋಪಿ ಜಾಮೀನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ್ದಾರೆ.

ಇದು ಕೇವಲ ದಾಖಲೆಗೆ ಸೀಮಿತವಾಗದೇ ವಿಡಿಯೋ ಸಾಕ್ಷ್ಯಗಳು ಕೂಡ ಕೋಟ್೯ನಲ್ಲಿ ಹಾಜರುಪಡಿಸಲು ಪೊಲೀಸರು ಸಿದ್ಧ ತೆ ಮಾಡಿಕೊಂಡಿದ್ದಾರೆ. ಇನ್ನು ಇಡೀ ಪ್ರಕರಣದಲ್ಲಿ ಎಲ್ಲರನ್ನೂ ಬೆಚ್ಚಿಬೀಳಿಸುವುದು ಕೊಲೆಯ ಬರ್ಬರತೆ. ನ್ಯಾಯಪೀಠದ ಮುಂದೆ ಕೊಲೆ ಮಾಡಿದ ರೀತಿ, ಮೃತನಿಗೆ ಸ್ಥಳದಲ್ಲಿ ಆರೋಪಿಗಳು ನೀಡಿರುವ ಟ್ರೀಟ್ ಮೆಂಟ್ ಎಲ್ಲವನ್ನೂ ವಿವರಿಸಲಿದ್ದಾರೆ. ಕೊಲೆ ಪ್ರಕರಣದಲ್ಲಿ 150ಕ್ಕೂ ಹೆಚ್ಚು ಸಾಕ್ಷ್ಯಗಳಿದ್ದು, ಆರೋಪಿ ಜೈಲಿಂದ ಹೊರಗಡೆ ಇದ್ದರೆ ಅಗತ್ಯ ಸಾಕ್ಷ್ಯಗಳು ನಾಶವಾಗಲಿವೆ ಎನ್ನುವುದು ಪೊಲೀಸರ ವಾದವಾಗಿದೆ. ದರ್ಶನ್ ಯಡವಟ್ಟುಗಳನ್ನು ಪಟ್ಟಿ ಮಾಡಿರುವ ಬೆಂಗಳೂರು ಪೊಲೀಸರು, ಕರ್ನಾಟಕ ಹೈಕೋರ್ಟ್‌ ಆದೇಶ ರದ್ದು ಮಾಡಿ ಆರೋಪಿಯನ್ನು ಜೈಲಿಗೆ ಕಳುಹಿಸುವಂತೆ ಹೆಚ್ಚುವರಿ ದಾಖಲೆಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ.

ಮನೆಯಿಂದ ಹೊರ ಬಂದ್ರೆ 3 ಲಕ್ಷ, ದಾಸನ ಸರ್ಪಕೋಟೆ: ದರ್ಶನ್‌ಗೆ ಎಚ್ಚರಿಕೆಯ ಹೆಜ್ಜೆ!

ಸಿನಿಮಾ ಸೆಟ್‌ ಫೋಟೋ ಲೀಕ್‌: ದರ್ಶನ್‌ ನಟನೆಯ ‘ಡೆವಿಲ್‌’ ಸಿನಿಮಾ ಸೆಟ್‌ನದು ಎನ್ನಲಾದ ಫೋಟೋ ಸೋಷಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಫೋಟೋದಲ್ಲೊಂದು ಕಟೌಟ್‌ ಇದೆ. ಅದರಲ್ಲಿ ಸಿಎಂ ಲುಕ್‌ನಲ್ಲಿ ಕೈಮುಗಿಯುತ್ತಿರುವ ದರ್ಶನ್‌ ಚಿತ್ರವಿದೆ. ‘ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್’ ಎಂದು ದರ್ಶನ್‌ ಪಾತ್ರವನ್ನು ಉಲ್ಲೇಖಿಸಲಾಗಿದೆ. ಕರುನಾಡ ಪ್ರಜಾ ಪಕ್ಷ ಎಂಬ ಪಾರ್ಟಿ ಹೆಸರೂ ಇದೆ. ಪ್ರಕಾಶ್‌ ವೀರ್‌ ನಿರ್ದೇಶನದ ‘ಡೆವಿಲ್‌’ ಚಿತ್ರದ ನಾಲ್ಕನೇ ಹಂತದ ಶೂಟಿಂಗ್‌ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅಲ್ಲಿನ ಫೋಟೋವನ್ನು ಕಿಡಿಗೇಡಿಗಳು ಸೋಷಲ್‌ ಮೀಡಿಯಾದಲ್ಲಿ ಲೀಕ್‌ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!