ಮಿಲನಾ ನಾಗರಾಜ್ ಇಡೀ ಮನೆ ನಿಭಾಯಿಸುತ್ತಾರೆ. ಮಲ್ಟಿ ಟಾಸ್ಕಿಂಗ್ ಅಮ್ಮನೇ ಕ್ಲೋಸಾ ಅಥವಾ ಅಪ್ಪನೂ ಕ್ಲೋಸಾ?
ಕನ್ನಡ ಚಿತ್ರರಂಗದ ಪವರ್ ಕಪಲ್, ಸೆಲೆಬ್ರಿಟಿ ಜೋಡಿ, ಲವ್ ಮಾಕ್ಟೇಲ್ ಕ್ರಿಯೇಟ್ ಮಾಡಿದ ಜೋಡಿ...ಹೀಗೆ ಸಾಕಷ್ಟು ಹೆಸರುಗಳನ್ನು ಪಡೆದಿರುವ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಸದ್ಯ ಪೇರೆಂಟಿಂಗ್ ಫೇಸ್ ಎಂಜಾಯ್ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಲವ್ ಮಾಕ್ಟೇಲ್ 3 ಸಿನಿಮಾ ಕೆಲಸಗಳು ಆರಂಭವಾಗಲಿದೆ. ಈ ನಡುವೆ ತಮ್ಮ ಮುದ್ದು ಮಗಳ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿ ಜನರೊಟ್ಟಿಗೆ ಮತ್ತಷ್ಟು ಕೋಸ್ ಆಗಿಬಿಟ್ಟಿದ್ದಾರೆ. ಆದರೆ ಮಗಳು ಯಾರಿಗೆ ಹೆಚ್ಚಿಗೆ ಕ್ಲೋಸ್? ಯಾರೊಟ್ಟಿಗೆ ಜಾಸ್ತಿ ಸಮಯ ಕಳೆಯುತ್ತಾಳೆ ಎಂದು ಪ್ರಶ್ನೆ ಮಾಡಿದಾಗ ಡಾರ್ಲಿಂಗ್ ಕೊಟ್ಟ ಉತ್ತರವಿದು.
'ಯುಗಾದಿ ಹಬ್ಬವನ್ನು ಆಚರಣೆ ತಯಾರಿಯನ್ನು ಮನೆಯಲ್ಲಿ ಮಾಡಿಕೊಳ್ಳುತ್ತಾರೆ. ಮಿಲನಾ ನಾಗರಾಜ್ ಸಂಪೂರ್ಣ ಮನೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಸದ್ಯ ಪರಿ ನಮ್ಮ ಮುದ್ದು ಮಗಳು ನನ್ನ ಜೀವನ. ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದೀನಿ ಆಕೆಯೊಟ್ಟಿಗೆ ಸಮಯ ಕಳೆಯಬೇಕು. ಮಗಳನ್ನು ಪ್ರೀತಿಯಿಂದ ಪರಿ ಅಂತ ಕರೆಯುತ್ತೀವಿ ಇಬ್ಬರೂ ಅದೇ ಹೆಸರು ಕರೆಯುವುದು ಏಕೆಂದರೆ ಇಟ್ಟಿರುವುದು ಪುಟ್ಟ ಹೆಸರು ಮತ್ತಷ್ಟು ಶಾರ್ಟ್ ಮಾಡಲು ಆಗುವುದಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ.
ಕೆಲವೊಂದು ಘಟನೆ ಎಷ್ಟು ಶಾಕ್ ಕೊಡ್ತು ಅಂದ್ರೆ....ಸಾವಿಗೂ ಅಷ್ಟೇ ಬೆಲೆ ಇದೆ: ಶ್ರೀಮುರಳಿ
'ಪರಿ ಈಗ ಅಮ್ಮನ ಮಗಳಾ ಅಥವಾ ಅಪ್ಪನ ಮಗಳಾ ಎಂದು ಹೇಳಲು ಆಗಲ್ಲ ಏಕೆಂದರೆ ಆಕೆ ಇನ್ನೂ ಚಿಕ್ಕ ಪಾಪು. ಸಾಮಾನ್ಯವಾಗಿ ಹೆಣ್ಣುಮಕ್ಕಳು ತಂದೆಯ ಪರ ತಂದೆಯನ್ನು ಇಷ್ಟ ಪಡುತ್ತಾರೆ ಅಂತಾರೆ ಹೀಗಾಗಿ ಮುಂದೆ ಹೇಗೆ ಎಂದು ಕಾದು ನೋಡಬೇಕಿದೆ. ಅದ್ಯಕ್ಕೆ ಮಿಲಿನಾಳನ್ನು ಹಚ್ಚಿಕೊಂಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಮಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತೀನಿ. ಕ್ರಿಕೆಟ್ ಮ್ಯಾಚ್ ಇತ್ತು ಎನ್ನುವ ಸಮಯದಲ್ಲಿ 5-6 ದಿನ ಜೊತೆಯಲ್ಲಿ ಇರುವುದಿಲ್ಲ ನೋಡಲು ಆಗಲ್ಲ ಅಂತ ಇದ್ದಾಗಾ ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೀನಿ. ಶೂಟಿಂಗ್ ಮುಗಿದ ನಂತರ ನಾನು ಹೆಚ್ಚಾಗಿ ಹೊರಗಡೆ ಹೋಗುವುದಿಲ್ಲ ನೇರವಾಗಿ ಮನೆಗೆ ಹೋಗಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತೀನಿ'ಎಂದು ಕೃಷ್ಣ ಹೇಳಿದ್ದಾರೆ.
ಮತ್ತೆ ಮದ್ವೆ ಆಗ್ತೀನಾ ಗೊತ್ತಿಲ್ಲ, ಆಗಿದ್ದು ಎರಡೂ ಉಳಿಸಿಕೊಳ್ಳಲು ಆಗಲಿಲ್ಲ: ಅಮಿರ್ ಖಾನ್ ಬೇಸರ