ವಿಷ್ಣುವರ್ಧನ್‌ಗೆ ಟಾಂಗ್ ಕೊಡಲು 'ದ್ರೋಹಿ' ಮಾಡಿದ್ರು ದ್ವಾರಕೀಶ್; ಯಾಕೆ ಮೂಡಿತ್ತು ವೈಮನಸ್ಯ?

By Shriram BhatFirst Published Apr 19, 2024, 6:06 PM IST
Highlights

ಅಂದಿನ ಕಾಲದಲ್ಲಿ ನಟ ವಿಷ್ಣುವರ್ಧನ್ ಸೋಲಿಲ್ಲದ ಸರದಾರ ಎಂಬಂತೆ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದ ಸಮಯವದು. ಬೇರೆ ಬೇರೆ ದೊಡ್ಡ ದೊಡ್ಡ ನಿರ್ಮಾಪಕರು ನಟ ವಿಷ್ಣುವರ್ಧನ್ ಮನೆಮುಂದೆ ಕಾಲ್‌ಶೀಟ್‌ಗೆ ಕ್ಯೂ ನಿಲ್ಲತೊಡಗಿದಾಗ ಸಹಜವಾಗಿಯೇ ದ್ವಾರಕೀಶ್..

ಇತ್ತೀಚೆಗೆ ಇಹಲೋಕ ತ್ಯಜಿಸಿದ ನಟ, ನಿರ್ಮಾಪಕ ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ, ಆ ಬಗ್ಗೆ ಎರಡು ಮಾತಿಲ್ಲ. ಆದರೆ, ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದರು ಎಂಬುದು ಸಹ ಅಷ್ಟೇ ಸತ್ಯ, ನಟ ವಿಷ್ಣುವರ್ಧನ್-ದ್ವಾರಕೀಶ್ ಸ್ನೇಹ ಅದೆಷ್ಟು ಪ್ರಖ್ಯಾತಿ ಪಡೆದಿತ್ತೋ ಅಷ್ಟೇ ಅವರಿಬ್ಬರ ದ್ವೇಷ ಕೂಡ ಬಳಿಕ ಹೆಸರುವಾಸಿಯಾಗಿತ್ತು. ಏಳೆಂಟು ವರ್ಷಗಳಷ್ಟು ದೀರ್ಘ ಅವಧಿಯ ವೈಮನಸ್ಯದ ಬಳಿಕ ಅವರಿಬ್ಬರೂ ಮತ್ತೆ ಒಂದಾಗಿ ಮಾಡಿದ ಸಿನಿಮಾ 'ಆಪ್ತಮಿತ್ರ'. ಅದು ಸೂಪರ್ ಹಿಟ್ ದಾಖಲಿಸಿ ಅವರಿಬ್ಬರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿಸಿತ್ತು. 
 
ಹಾಗಿದ್ದರೆ ನಟ ವಿಷ್ಣುವರ್ಧನ್ ಹಾಗು ನಿರ್ಮಾಪಕ ದ್ವಾರಕೀಶ್ ನಡುವೆ ಏನಾಗಿತ್ತು? ಅದೆಲ್ಲ ತುಂಬಾ ದೊಡ್ಡ ಕಥೆ ಎನ್ನುವವರಿದ್ದಾರೆ. ನಟ-ನಿರ್ಮಾಪಕ ದ್ವಾರಕೀಶ್ ಅವರು 'ಇದು ರೀಮೇಕ್ ಅಲ್ಲ, ಕಾದಂಬರಿಯೂ ಅಲ್ಲ, ನನ್ನ ಜೀವನದಲ್ಲಿ ಕಂಡಿದ್ದು, ನಡೆದಿದ್ದು ಎಂದು ವಿಷ್ಣುವರ್ಧನ್ ಅವರ ವಿರುದ್ಧವಾಗಿ, ಅವರಿಗೆ ಟಾಂಗ್  ಕೊಡಲಿಕ್ಕಾಗಿಯೇ ದ್ವಾರಕೀಶ್ 'ದ್ರೋಹಿ' ಎನ್ನುವ ಸಿನಿಮಾ ಮಾಡಿದ್ದರು. ಅದು ಯಾರೇನೂ ಹೇಳಿದರೂ ವಿಷ್ಣುವರ್ಧನ್ ಅವರ ಬಗ್ಗೆಯೆ ಮಾಡಿದ್ದು ಎಂಬುದು ಪತ್ರಕರ್ತರು ಸೇರಿದಂತೆ, ಎಲ್ಲರಿಗು ಮೇಲ್ನೋಟಕ್ಕೆ ಕೂಡ ಗೊತ್ತಾಗುವಂತೆ ಇತ್ತು ಆ ಸಿನಿಮಾ ದ್ರೋಹಿ. 

ಎಲ್ಲಿದೆ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಬೆಟ್ಟ, ನೋಡಿದವರಿಗೆ ನೆನಪಾಗಿ ಹೇಳುವುದೇನು?

ಅಂದಿನ ಕಾಲದಲ್ಲಿ ನಟ ವಿಷ್ಣುವರ್ಧನ್ ಸೋಲಿಲ್ಲದ ಸರದಾರ ಎಂಬಂತೆ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದ ಸಮಯವದು. ಬೇರೆ ಬೇರೆ ದೊಡ್ಡ ದೊಡ್ಡ ನಿರ್ಮಾಪಕರು ನಟ ವಿಷ್ಣುವರ್ಧನ್ ಮನೆಮುಂದೆ ಕಾಲ್‌ಶೀಟ್‌ಗೆ ಕ್ಯೂ ನಿಲ್ಲತೊಡಗಿದಾಗ ಸಹಜವಾಗಿಯೇ ದ್ವಾರಕೀಶ್ ಅವರಿಗೆ ಇರಿಸುಮುರಿಸು ಉಂಟಾಗಿತ್ತು. ಬಳಿಕ, ನಟ ವಿಷ್ಣುವರ್ಧನ್ ಬೇರೆ ಬೇರೆ ನಿರ್ಮಾಪಕರಿಗೆ ಕಾಲ್‌ಶೀಟ್ ಕೊಟ್ಟಾಗ ತನ್ನ ಆಪ್ತಮಿತ್ರ ತನ್ನನ್ನು ಬಿಟ್ಟು ಬೇರೆ ಕಡೆ ಬೆಳೆಯತೊಡಗಿದ್ದಾನೆ ಎಂಬ ಆತಂಕ ಶುರುವಾಗಿತ್ತು ದ್ವಾರ್ಕಿಗೆ ಎನ್ನುವವರಿದ್ದಾರೆ. 

ನಾಲ್ಕು ಅಂಶಗಳನ್ನಿಟ್ಟು ದ್ವಾರಕೀಶ್‌ ಸಿನಿಮಾ ಮಾಡ್ತಿದ್ರು ಅಂದ್ರು ಹಂಸಲೇಖ; ಏನದು ಚೌಕಾಬಾರಾ?

ಅಷ್ಟೇ ಅಲ್ಲ, 'ನೀ ತಂದ ಕಾಣಿಕೆ' ಚಿತ್ರದ ಬಳಿಕ ಸ್ವತಃ ನಟ ವಿಷ್ಣುವರ್ಧನ್ ಅವರೇ 'ದ್ವಾರಕೀಶ್ ನಂಬಿಕೆಗೆ ಅರ್ಹ ವ್ಯಕ್ತಿಯಲ್ಲ' ಎಂದು ಹಿರಿಯ ಪತ್ರಕರ್ತರೆದುರು ಹೇಳಿದ್ದರು ಎನ್ನಲಾಗಿದೆ. ಅದೇ ವೇಳೆ 'ವಿಷ್ಣುವರ್ಧನ್ ಬಿಟ್ಟು ಸಿನಿಮಾ ಮಾಡಿ ನಾನು ಗೆಲ್ತೀನಿ, ಆದ್ರೆ ನನ್ನಂಥ ನಿರ್ಮಾಪಕರನ್ನು ಎದುರು ಹಾಕ್ಕೊಂಡು ಅದು ಹೇಗೆ ಇಂಡಸ್ಟ್ರಿಯಲ್ಲಿ ನಿಲ್ತಾನೋ ನೋಡೇ ಬಿಡೋಣ ಎಂದು ಆಗಿನ ಕಾಲದಲ್ಲಿ ಸ್ವತಃ ದ್ವಾರಕೀಶ್ ಹೇಳಿದ್ರಂತೆ. ಅದಾದ ಬಳಿಕವೇ 'ದ್ರೋಹಿ' ಅನ್ನೋ ಟೈಟಲ್‌ನಲ್ಲಿ ದ್ವಾರಕೀಶ್ ಅವರು ಒಂದು ಹೊಸ ಸಿನಿಮಾ ಘೋಷಣೆ ಮಾಡಿಬಿಟ್ಟಿದ್ದರು. 

ವೀರ ಯೋಧನಾದ ಸೂಪರ್ ಹೀರೋ, ಅಶೋಕ ಚಕ್ರವರ್ತಿಯ 9 ರಹಸ್ಯಕಥೆ ಹೇಳಲಿರುವ ತೇಜ್ ಸಜ್ಜಾ!

ಇದು ರಿಮೇಕ್ ಅಲ್ಲ, ಕಾದಂಬರಿಯಲ್ಲ, ನನ್ನ ಜೀವನದಲ್ಲಿ ನಾನು ಕಂಡಿದ್ದು, ನಡೆದಿದ್ದು ಎಂಬುದು ಆ ಚಿತ್ರದ ಪೋಸ್ಟರ್‌ನ ಮೇಲಿನ ಬರಹಗಳಾಗಿತ್ತು. ವಿಷ್ಣುವರ್ಧನ್ ವಿರುದ್ಧವಾಗಿಯೇ ಈ ಸಿನಿಮಾ ಘೋಷಣೆ ಮಾಡಿದ್ದಾರೆ ಎಂಬುದು ಪೋಸ್ಟರ್‌ನಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದರೆ, ಇಂಥ ವೈಮನಸ್ಯವನ್ನು ಯಾಕೆ ಹುಟ್ಟಿಸಿ ಬೆಳೆಸಿಕೊಂಡು ಪೋಷಿಸಿಕೊಂಡು ಬಂದಿದ್ದು ಎಂಬುದು ಮಾತ್ರ ಅಂದು ಯಾರಿಗೂ ಅರ್ಥವಾಗಿರಲೇ ಇಲ್ಲ. ಅಂದು ಅವರಿಬ್ಬರ ವೈಮನಸ್ಯ ಅದೆಷ್ಟರಮಟ್ಟಿಗೆ ಇತ್ತು ಎಂದರೆ, ಒಂದೇ ಫ್ಲೈಟಿನಲ್ಲಿ ಇಬ್ಬರೂ ಹೊರಟಾಗಲೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುತ್ತಿರಲಿಲ್ಲ, ಮಾತನಾಡಿಸುತ್ತಿರಲಿಲ್ಲ. 

ಅಂಬರೀಷ್ ಕೈ ತಪ್ಪಿ 'ಬಂಧನ' ಸಿನಿಮಾ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ, ಘಟನೆ ಹಿಂದಿನ ಅಸಲಿಯತ್ತೇನು ?

ಅದೆಷ್ಟೋ ಪತ್ರಕರ್ತರು ನಟ ವಿಷ್ಣುವರ್ಧನ್ ಬಳಿ 'ನೀವಿಬ್ರೂ ಏಳೆಂಟು ವರ್ಷಗಳ ಕಾಲ ಒಬ್ಬರನ್ನೊಬ್ಬರು ನೋಡಿ ಮಾತನಾಡಿಸುತ್ತಿರಲಿಲ್ಲ, ಒಂದೇ ಫ್ಲೈಟ್‌ನಲ್ಲಿ ಹೋದರೂ ಪರಸ್ಪರ ಮುಖ ನೋಡುತ್ತಿರಲಿಲ್ಲ ಎಂಬ ಮಾತಿದೆ, ಅದು ನಿಜವೇ' ಎಂದು ಕೇಳಿದಾಗ 'ಹೌದು, ನಮ್ಮಿಬ್ಬರ ಮಧ್ಯೆ ವೈಮನಸ್ಯ ಇತ್ತು, ಆದರೆ ಕೆಲವೊಮ್ಮೆ ಇದಕ್ಕೆಲ್ಲ ನಿಜವಾದ ಕಾರಣಗಳೇ ಇರುವುದಿಲ್ಲ, ಎಲ್ಲ ಭಗವಂತನ ಲೀಲೆ' ಎಂದಿದ್ದರಂತೆ. 

ಸ್ಕ್ರೀನ್ ಮೇಲೆ ಮೆರೆಯಲು ಸಜ್ಜಾಗಿದೆ 'ನಾಲ್ಕನೇ ಆಯಾಮ', ಯುವ ಪ್ರತಿಭೆ ಗೌತಮ್ ಜೊತೆ ರಚನಾ ಯಾನ!

ರಾಯರು ಬಂದರು ಮಾವನ ಮನೆಗೆ ಸಿನಿಮಾ ಬಳಿಕ, ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. ಆಗ ವಿಷ್ಣುವರ್ಧನ್ ಇಲ್ಲದೇ ನಾನು ಸಿನಿಮಾ ಮಾಡಿ ಗೆಲ್ತೀನಿ ಎಂದು ನಿರ್ಧರಿಸಿದ ದ್ವಾರಕೀಶ್ ಅವರು ಶಂಕರ್‌ನಾಗ್, ಶಶಿಕುಮಾರ್ ಹಾಗು ವಿನೋದ್‌ ರಾಜ್ ಅವರಿಗೆ ಸಿನಿಮಾ ಮಾಡತೊಡಗಿದರು. ಅದು ನಟ ವಿಷ್ಣುವರ್ಧನ್ ಅವರಿಗೆ ಟಕ್ಕರ್ ಕೊಡಲೋ ಅಥವಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು 'ನೀನು ವಿಷ್ಣುವರ್ಧನ್ ಅವರಿಗೇ ಅಂಟಿಕೊಂಡು ಕುಳಿತುಕೊಳ್ಳಬೇಡ. ಹೊಸಬರನ್ನು ಇಂಡಸ್ಟ್ರಿಗೆ ತರುವ ಪ್ರಯತ್ನ ಮಾಡು' ಅಂತ ಹೇಳಿದ ಮಾತಿಗೆ ಕಟ್ಟುಬಿದ್ದುಮಾಡಿದ ಪ್ರಯತ್ನ ಎಂತಲೋ ಗೊತ್ತಿಲ್ಲ. ಎರಡನ್ನೂ ಹೇಳುವವರಿದ್ದಾರೆ. ವಿಷ್ಣುವರ್ಧನ್ ಎದುರು ನಟ ಹರ್ಷವರ್ಧನ್ ಅವರನ್ನು ಬೆಳೆಸ್ತೀನಿ ಅಂತ ದ್ವಾರಕೀಶ್ ಅವರು 'ಗೌರಿ ಕಲ್ಯಾಣ' ಎಂಬ ಸಿನಿಮಾ ಮಾಡಿದ್ದರು ಎಂದೂ ಹೇಳಲಾಗಿದೆ. 

ನಟ ಕುಮಾರ್ ಗೋವಿಂದ್‌ಗೆ 'ಓಂ' ಸಿನಿಮಾ ಕೈ ತಪ್ಪಿಸಿದ್ಯಾರು, 'ಶ್' ಸಿನಿಮಾ ಮಾಡುವಂತಾಗಿದ್ದು ಯಾಕೆ?

ಅದೇ ವೇಳೆ ನಟ ವಿನೋದ್ ರಾಜ್ ಹಾಕಿಕೊಂಡು 'ಡಾನ್ಸ್ ರಾಜಾ ಡಾನ್ಸ್', ಹೊಸಬರ 'ಶೃತಿ, ಶಶಿಕುಮಾರ್ ನಟನೆಯ 'ಹೊಸ ಕಳ್ಳ ಹಳೇ ಕುಳ್ಳ' ಎಂಬ ಸಿನಿಮಾ ಮಾಡಿದ್ದರು ದ್ವಾರಕೀಶ್, ಈ 'ಹೊಸ ಕಳ್ಳ ಹಳೇ ಕುಳ್ಳ' ಸಿನಿಮಾ ಕೂಡ ವಿಷ್ಣುವರ್ಧನ್ ಅವರಿಗೆ ಟಾಂಗ್ ಕೊಡಲೆಂದೇ ಮಾಡಿದ್ದ ಸಿನಿಮಾ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿತ್ತು. ಆದರೆ, ಈ ಎಲ್ಲ ಸಿನಿಮಾಗಳು ಸೋತು ಮಕಾಡೆ ಮಲಗಿ ದ್ವಾರಕೀಶ್ ಸಾಲದ ಸುಳಿಗೆ ಸಿಲುಕಿದಾಗ ದ್ವಾರಕೀಶ್ ಅವರಿಗೆ ಜ್ಞಾನೋದಯ ಆಗಿತ್ತು ಎನ್ನವವರಿದ್ದಾರೆ. ಬಳಿಕ, ನಟ ವಿಷ್ಣುವರ್ಧನ್ ಕಾಲ್‌ಶೀಟ್ ಪಡೆದು 'ಆಪ್ತಮಿತ್ರ' ಸಿನಿಮಾ ಮಾಡಿ ಸಾಕಷ್ಟು ಸಾಲ ತೀರಿಸಿಕೊಂಡು ಹೆಚ್‌ಆರ್‌ಎಸ್‌ ಲೇಔಟ್‌ನಲ್ಲಿ ಹೊಸ ಮನೆಯೊಂದನ್ನು ಕಟ್ಟಿಕೊಂಡಿದ್ದರು ದ್ವಾರಕೀಶ್. ಒಟ್ಟಿನಲ್ಲಿ, ಏಳೆಂಟು ವರ್ಷಗಳ ಮುನಿಸಿನ ಬಳಿಕ ವಿಷ್ಣುವರ್ಧನ್ ಹಾಗು ದ್ವಾರಕೀಶ್ ಅವರು 'ಆಪ್ತಮಿತ್ರ' ಸಿನಿಮಾ ಮೂಲಕ ಒಂದಾಗಿ ಹೊಸ ಇತಿಹಾಸ ನಿರ್ಮಿಸಿದರು. 

click me!