ಎಲ್ಲಿದೆ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಬೆಟ್ಟ, ನೋಡಿದವರಿಗೆ ನೆನಪಾಗಿ ಹೇಳುವುದೇನು?

By Shriram BhatFirst Published Apr 19, 2024, 3:35 PM IST
Highlights

ಪುಟ್ಟಣ್ಣ ಕಣಗಾಲ್ ಅವರು ಅಂದಿನ ಕಾಲದಲ್ಲೇ ಅಂಥ ಹಳ್ಳದಿಣ್ಣೆಯಿರುವ ಜಾಗದಲ್ಲಿ ಇಷ್ಟಪಟ್ಟು, ಕಷ್ಟಪಟ್ಟು ಯಶಸ್ವಿಯಾಗಿ ಶೂಟಿಂಗ್ ನಡೆಸಿದ್ದಾರೆ. ಇಕ್ಕಟ್ಟಾದ ರಸ್ತೆ, ಸರಿಯಾಗಿ ಬೆಳಕು ಇಲ್ಲದ ಜಾಗದಲ್ಲಿ..

ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾದಲ್ಲಿ ಒಂದು ಹಾಡು ಬರುತ್ತದೆ. 'ಸಂತೋಷ.., ರಸಮಯ ಸಂಗೀತ...' ಎಂಬ ಹಾಡು ಹಾಡುತ್ತ ನಾಯಕ ಚಂದ್ರಶೇಖರ್ ಹಾಗೂ ನಾಯಕಿ ಜಯಂತಿ ಅವರು ಒಂದು ಗುಡ್ಡದಲ್ಲಿ ಬೈಕಿನಲ್ಲಿ ಹೋಗುತ್ತಾ ಇರುತ್ತಾರೆ. ಅದನ್ನು ಸಿನಿಮಾ ನೋಡಿದವರು ಖಂಡಿತ ಗಮನಿಸಿರುತ್ತಾರೆ. ಬಹಳಷ್ಟು ಮಂದಿ ಈ ಗುಡ್ಡ ಕರ್ನಾಕದಲ್ಲಿಯೇ ಎಲ್ಲಿಯೋ ಇರಬಹುದು ಅಂದುಕೊಂಡಿದ್ದಾರೆ. ಆದರೆ ಅದು ಕರ್ನಾಟಕದಲ್ಲಿಲ್ಲ, ಬದಲಿಗೆ ಕೇರಳದಲ್ಲಿದೆ. 

ಹೌದು, ಎಡಕಲ್ಲು ಗುಡ್ಡದ ಮೇಲೆ ಸಿನಿಮಾದ ಆ ಶೂಟಿಂಗ್ ಜಾಗ ಕೇರಳದ ವಯನಾಡು ಏರಿಯಾದ ಅಂಬಲವಲಯ ಎಂಬಲ್ಲಿಂದ 6 ಕೀಮಿ ದೂರ, ಸುಲ್ತಾನ್ ಬಥೇರಿ ಎಂಬಲ್ಲಿಂದ 14 ಕೀಮಿ ದೂರದಲ್ಲಿದೆ. ತುಂಬಾ ಪ್ರೇಕ್ಷಣೀಯ, ಆಕರ್ಷಣೀಯ ಸ್ಥಳಗಳಲ್ಲಿ ಇದೂ ಒಂದು. 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾ ನೋಡಿದವರು ಕೇರಳಕ್ಕೆ ಪ್ರವಾಸ ಹೋಗಿ ಈ ಸ್ಥಳವನ್ನು ನೋಡಿದರೆ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನೆನಪಿಗೆ ಬರುವುದು ಸಹಜ.

ನಾಲ್ಕು ಅಂಶಗಳನ್ನಿಟ್ಟು ದ್ವಾರಕೀಶ್‌ ಸಿನಿಮಾ ಮಾಡ್ತಿದ್ರು ಅಂದ್ರು ಹಂಸಲೇಖ; ಏನದು ಚೌಕಾಬಾರಾ?

ವಯನಾಡುವಿನಲ್ಲಿರುವ ಈ ಜಾಗ ಸಾಕಷ್ಟು ಏರುತಗ್ಗುಗಳಿಂದ ಕೂಡಿದ್ದು ಶೂಟಿಂಗ್ ನಡೆಸಲು ತುಂಬಾ ಕಷ್ಟಕರವಾದ ಜಾಗ ಎನ್ನುತ್ತಾರೆ ಅದನ್ನು ನೋಡಿ ಬಂದವರು. ಆದರೆ, ಪುಟ್ಟಣ್ಣ ಕಣಗಾಲ್ ಅವರು ಅಂದಿನ ಕಾಲದಲ್ಲೇ ಅಂಥ ಹಳ್ಳದಿಣ್ಣೆಯಿರುವ ಜಾಗದಲ್ಲಿ ಇಷ್ಟಪಟ್ಟು, ಕಷ್ಟಪಟ್ಟು ಯಶಸ್ವಿಯಾಗಿ ಶೂಟಿಂಗ್ ನಡೆಸಿದ್ದಾರೆ. ಇಕ್ಕಟ್ಟಾದ ರಸ್ತೆ, ಸರಿಯಾಗಿ ಬೆಳಕು ಇಲ್ಲದ ಜಾಗದಲ್ಲಿ ಕೂಡ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಂದು ಲಭ್ಯವಿರುವ ಕ್ಯಾಮೆರಾ ಮೂಲಕ ಶೂಟಿಂಗ್ ಮಾಡಿದ್ದನ್ನು ನಿಜವಾಗಿಯೂ ಮೆಚ್ಚಲೇಬೇಕು.

ವೀರ ಯೋಧನಾದ ಸೂಪರ್ ಹೀರೋ, ಅಶೋಕ ಚಕ್ರವರ್ತಿಯ 9 ರಹಸ್ಯಕಥೆ ಹೇಳಲಿರುವ ತೇಜ್ ಸಜ್ಜಾ!

ಎಡಕಲ್ಲು ಗುಡ್ಡದ ಮೇಲೆ ಚಿತ್ರ ನೋಡಿದ ಹಲವರು ಈ ಸ್ಥಳವನ್ನು ಮೆಚ್ಚಿ ಭೇಟಿ ಕೊಟ್ಟು ಬಂದವರು ಇದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, 60, 70ರ ದಶಕದಲ್ಲಿ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ಕಾದಂಬರಿ ಆಧಾರಿತ ಚಿತ್ರವನ್ನು ಕೊಟ್ಟಿದ್ದಾರೆ. ಅದರಲ್ಲಿ ಈ ಎಡಕಲ್ಲು ಗುಡ್ಡದ ಮೇಲೆ ಚಿತ್ರವೂ ಒಂದು.

ನಟ ಕುಮಾರ್ ಗೋವಿಂದ್‌ಗೆ 'ಓಂ' ಸಿನಿಮಾ ಕೈ ತಪ್ಪಿಸಿದ್ಯಾರು, 'ಶ್' ಸಿನಿಮಾ ಮಾಡುವಂತಾಗಿದ್ದು ಯಾಕೆ?

ಜಯಂತಿ ಹಾಗೂ ಚಂದ್ರಶೇಖರ್ ಜೋಡಿಯ ಈ ಚಿತ್ರದಲ್ಲಿ ಸಾಕಷ್ಟು ರೊಮ್ಯಾಂಟಿಕ್ ಹಾಗು ಹಸಿಬಿಸಿ ದೃಶ್ಯಗಳೂ ಇದ್ದವು. ಅಂದು ಹಲವರು ಈ ಸಿನಿಮಾದ ಬಗ್ಗೆ ಅಪಸ್ವರ ಎತ್ತಿದ್ದರು. ಆದರೆ, ಕಾಲ ಕಳೆದಂತೆ ಸಿನಿಮಾ ಗ್ರಾಮರ್ ಬದಲಾಗಿದೆ, ಪ್ರೇಕ್ಷಕರ ಮನಸ್ಥಿತಿಯೂ ಬದಲಾಗಿದೆ. 

click me!