ಸಿನಿಮಾ ಸ್ಟಾರ್‌ಗಳ ಸ್ಮಾರಕಕ್ಕೆ ಸಾರ್ವಜನಿಕರ ಜಾಗ, ಹಣ ಬಳಕೆ ಸರಿಯಲ್ಲ; ನಟ ಚೇತನ್

Published : Jan 30, 2023, 05:37 PM IST
ಸಿನಿಮಾ ಸ್ಟಾರ್‌ಗಳ ಸ್ಮಾರಕಕ್ಕೆ  ಸಾರ್ವಜನಿಕರ ಜಾಗ, ಹಣ ಬಳಕೆ ಸರಿಯಲ್ಲ; ನಟ ಚೇತನ್

ಸಾರಾಂಶ

'ಚಲನಚಿತ್ರ ಸ್ಟಾರ್​ಗಳ ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಬಾರದು' ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

'ಚಲನಚಿತ್ರ ಸ್ಟಾರ್​ಗಳ ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಬಾರದು' ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಇತ್ತೀಚಿಗಷ್ಟೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣ ಆಗಿದೆ. ಅನೇಕ ವರ್ಷಗಳ ಬಳಿಕ ಸ್ಮಾರಕ ನಿರ್ಮಾಣ ಆಗಿದ್ದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದರು. ಇದು ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಆದರೆ ಸ್ಮಾರಕ ಉದ್ಘಾಟನೆ ಆದ ಬೆನ್ನಲ್ಲೇ ಆ ದಿನಗಳು ಖ್ಯಾತಿಯ ನಟ ಚೇತನ್ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚೇತನ್ ಪೋಸ್ಟ್ ಮಾಡಿದ್ದಾರೆ. ‘ಹಲವಾರು ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಚಲನಚಿತ್ರ ಸ್ಟಾರ್​ಗಳು ಈಗಾಗಲೇ ನಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯವಾಗಿ ಗಮನ ಪಡೆಯುತ್ತಾರೆ. ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತು ಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಗಳು ಒಳ್ಳೆಯ ಉಪಯೋಗಕ್ಕೆ ಬರುತ್ತವೆ’ ಎಂದು ಚೇತನ್ ಹೇಳಿದ್ದಾರೆ. 

Pathaan ಕೇಸರಿ ಬಿಕಿನಿ ವಿವಾದ; ಬಸವಣ್ಣ, ಬುದ್ದ ಅನೇಕರು ಹಾಕಿದ್ದಾರೆ, ಹಿಂದುತ್ವದ ಬಣ್ಣ ಆಗಲಾರದು; ನಟ ಚೇತನ್

ಅದಾನಿ ವಿರುದ್ಧ ಆಕ್ರೋಶ 

 'ಇಡೀ ಭಾರತ ದೇಶವು ಕೋವಿಡ್‌ ಸಾಂಕ್ರಾಮಿಕ ರೋಗದಿಂದ ತತ್ತರಿಸುತ್ತಿದ್ದಾಗ ಗೌತಮ್ ಅದಾನಿಯವರು ಏಷ್ಯಾದ ಅತೀ ಶ್ರೀಮಂತ ಪಟ್ಟಿಯಲ್ಲಿರುತ್ತಾರೆ. ಈಗ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯು ಗೌತಮ್ ಅದಾನಿಯವರ ವಂಚನೆಯನ್ನು ಬಯಲಿಗೆಳೆದಿದೆ. ತನ್ನ ಮೇಲಿನ ಆರೋಪವನ್ನು ‘ಭಾರತದ ಮೇಲಿನ ದಾಳಿ’ ಎಂದು ಅವರು ದುರಹಂಕಾರದಿಂದ ಹೇಳಿಕೊಂಡು ವಂಚನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ' ಎಂದು ಹೇಳಿದ್ದಾರೆ. 

'ಅದಾನಿಯವರು ಭಾರತವನ್ನು ಕೆಟ್ಟ ರೀತಿಯಲ್ಲಿ ಪ್ರತಿನಿಧಿಸುತ್ತಿದ್ದಾರೆ, ಇವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು' ಎಂದು ಚೇತನ್ ಅಹಿಂಸ ಒತ್ತಾಯಿಸಿದ್ದಾರೆ.

ನಟ ಚೇತನ್ ಹೇಳಿಕೆ ಪರ-ವಿರೋಧ ಚರ್ಚೆಯಾಗುತ್ತಿದೆ. ಅನೇಕರು ಚೇತನ್ ಪರ ಮಾತನಾದ್ರೆ ಇನ್ನು ಕೆಲವರು ಚೇತನ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಚೇತನ್ ಅವನೇಕ ವಿಚಾರಗಳ ಬಗ್ಗೆ ಆಗಾಗ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಇದೀಗ ಸಿನಿಮಾ ಸ್ಟಾರ್ ಗಳ ಸ್ಮಾರಕ ವಿಚಾರವಾಗಿ ನೀಡಿರುವ ಹೇಳಿಕೆ ಹೊಸ ಚರ್ಚೆಗೆ ಕಾಣವಾಗಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?