
ನಟ ದರ್ಶನ್ (Actor Darshan) ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವುದು ಗೊತ್ತೇ ಇದೆ. ಕಳೆದ ಒಂದೂವರೆ ತಿಂಗಳಿನಿಂದಲೂ ನಟ ದರ್ಶನ್ ಮೊದಲು ಪೊಲೀಸ್ ಕಸ್ಟಡಿ, ಬಳಿಕ ನ್ಯಾಯಂಗ ಬಂಧನದಲ್ಲಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ನಟ ದರ್ಶನ್ ಅವರನ್ನು ಚಿತ್ರರಂಗದ ಆಪ್ತರು ಎನಿಸಿಕೊಂಡವರಲ್ಲಿ ಯಾರೊಬ್ಬರೂ ಬಂದು ನೋಡಿರಲಿಲ್ಲ. ಆದರೆ, ಈಗ ಪ್ರತಿ ವಾರ ಮೂರು ಜನರಂತೆ ದರ್ಶನ್ ಅವರನ್ನು ಜೈಲಿಗೆ ಬಂದು ನೋಡಿಕೊಂಡು, ಮಾತನಾಡಿಕೊಂಡು ಹೋಗುತ್ತಿದ್ದಾರೆ.
ಹಾಗೇ, ನಟ ದರ್ಶನ್ ಬಂಧನದ ಬಳಿಕ, ಸುಮಾರು ಎರಡು-ಮೂರು ವಾರಗಳು ಕಳೆದ ಮೇಲಷ್ಟೇ ನಟ ದರ್ಶನ್ ಅವರ ಬಗ್ಗೆ ಚಿತ್ರರಂಗದ ಸ್ನೇಹಿತರು ಹಾಗು ಆಪ್ತಬಳಗ ಮಾತನಾಡಲು ಶುರುಮಾಡಿತ್ತು. ಇದೀಗ, ನಟ ದರ್ಶನ್ ಬಗ್ಗೆ ಹಲವು ನಟನಟಿಯರು ಸಂದರ್ಶನಗಳಲ್ಲಿ, ಮೀಡಿಯಾ ಮೈಕ್ ಮುಂದೆ ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದು ಕೊಲೆ ಆರೋಪವಾಗಿರುವುದು ಒಂದು ಸಂಗತಿಯಾಗಿದ್ದರೆ, ಕೇಸ್ ಇನ್ನೂ ತನಿಖೆ ಹಂತದಲ್ಲಿ ಇರುವುದರಿಂದ ಯಾರೇ ಆದರೂ ಸಾಕಷ್ಟು ಯೋಚಿಸಿ ಮಾತನಾಡಬೇಕಿದೆ.
ನಟ ದರ್ಶನ್ ಕೇಸ್ ಬಗ್ಗೆ ಅನಿರೀಕ್ಷಿತ ಅನಿಸಿಕೆ ಶೇರ್ ಮಾಡಿದ ಚಂದನ್ ಶೆಟ್ಟಿ ; ಒಮ್ಮೆ ನೋಡ್ಬಿಡಿ..!
ಇದೀಗ, ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪರ ಹಾಗೂ ವಿರುದ್ಧ ಚಿತ್ರರಂಗದ ಹಲವರು ಮಾತನಾಡಿರುವ ರೀಲ್ಸ್ ಹಾಗು ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳಲ್ಲಿ ಒಂದು ನಟ, ಹಾಗೂ ಹಿರಿಯ ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಮಾತನಾಡಿರುವುದು. ಅವರು ನಟ ದರ್ಶನ್ ಪರ ಮಾತನಾಡಿದ್ದಾರೆ ಎನ್ನುವುದು ಸರಿಯಲ್ಲ. ಆದರೆ, ತಮ್ಮ ತಾಯಿ ನಿಧನ ಹೊಂದುವ ಮೊದಲೊಮ್ಮೆ ಹೇಳಿದ್ದ ಮಾತನ್ನು ನೆನಪಿಸಿಕೊಂಡು ಹೇಳಿದ್ದಾರೆ.
ಹಾಗಿದ್ದರೆ, ನಟ ವಿನೋದ್ ರಾಜ್ (Vinod Raj) ಹೇಳಿದ್ದೇನು, ಇಲ್ಲಿದೆ ನೋಡಿ.. 'ನಮ್ ತಾಯಿಯವ್ರು ತೂಗುದೀಪ ಶ್ರೀನಿವಾಸ್ಅವರ ಜೊತೆನಲ್ಲಿ ಸುಮಾರು ಚಿತ್ರಗಳಲ್ಲಿ ನಟಿಸಿದ್ದರು. ಅವರಿಗ ಆರೋಗ್ಯ ಸರಿ ಇಲ್ದೇ ಇದ್ದಾಗ್ಲೂ ಕೂಡ ಅವ್ರು ಮನೆಗೆ ಬಂದು ಅಮ್ಮನ ನೋಡ್ಕೊಂಡು ಮಾತಾಡ್ಸಿಕೊಂಡು ಹೋಗಿದ್ರು. ಅಮ್ಮ ಹೇಳಿದ್ದರು, 'ಏನಪ್ಪ, ಇವ್ನು ಕಲಾವಿದರ ಮಗ, ಯಾವ್ದೇ ಕಾರಣಕ್ಕೂ ಅವ್ರನ್ನು ಬಿಟ್ಟುಕೊಡ್ಬೇಡ ಕಣೋ ಎಂದಿದ್ದಾರೆ ನಟ ವಿನೋದ್ ರಾಜ್.
ಇಲ್ಲಿ, ನಟ ವಿನೋದ್ ರಾಜ್ ಅವರು ತಮ್ಮ ತಾಯಿ ಲೀಲಾವತಿಯವರು ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ. 'ಯಾವುದೇ ಕಾರಣಕ್ಕೂ ಅವ್ರನ್ನು ಬಿಟ್ಕೊಡ್ಬೇಡ' ಎಂದಿದ್ದರು ಎಂದರೆ 'ನಟ ದರ್ಶನ್ ಅವರ ವಿರುದ್ಧವಾಗಿ ಯೋಚಿಸಿ ದೂರ ಮಾಡಬೇಡ' ಎಂದು ಹೇಳಿದ್ದರು ಎಂದು ಅರ್ಥ ಮಾಡಿಕೊಳ್ಳಬಹುದೇನೋ! ಏಕೆಂದರೆ, ನಟ ದರ್ಶನ್ ಕಲಾವಿದರಾದ ತೂಗುದೀಪ ಶ್ರೀನಿವಾಸ್ ಅವರ ಮಗ. ಲೀಲಾವತಿಯವರು ದರ್ಶನ್ ತಂದೆಯ ಜೊತೆ ನಟಿಸಿದ್ದವರು, ಸಹಜವಾಗಿ ಆಪ್ತರು.
ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!
ಹೀಗಾಗಿ, ತಾಯಿಯವರ ಮಾತಿನಂತೆ, ನಟ ದರ್ಶನ್ ಪರಿಸ್ಥಿತಿಗೆ ವಿನೋದ್ ರಾಜ್ ನಿಸ್ಸಹಾಯಕರಾಗಿ ಮರುಗುತ್ತಿದ್ದಾರೆ. ಆದರೆ, ಇದು ಕಾನೂನಿಗೆ ಸಂಬಂಧಿಸಿದ ಮ್ಯಾಟರ್ ಆಗಿರುವ ಕಾರಣಕ್ಕೆ, ಈ ಬಗ್ಗೆ ಯೋಚಿಸಬಹುದು, ಚಿಂತಿಸಬಹುದು. ಆದರೆ, ದರ್ಶನ್ ಅವರಿಗೆ ಕಾನೂನಿನ ನಿಯಮಕ್ಕೆ ವಿರುದ್ಧವಾಗಿ ಸಹಾಯ ಮಾಡಲು ಆಗುವುದಿಲ್ಲ. ಆ ಪ್ರಯತ್ನ ಕೂಡ ಸಾಧ್ಯವಿಲ್ಲ. ಅದೇ ಕಾರಣಕ್ಕೆ ಹಲವು ದರ್ಶನ್ ಆಪ್ತರು ಕೊರಗುತ್ತಿದ್ದಾರೆ, ಮರುಗುತ್ತಿದ್ದಾರೆ.
ಸೋಷಿಯಲ್ ಮೀಡಿಯಾ ಕಾಮೆಂಟ್ಸ್ ಬಗ್ಗೆ ಬಾಯ್ಬಿಟ್ಟ ಚಂದನ್ ಶೆಟ್ಟಿ ಹೇಳಿದ್ದೇನು, ಇದಾ ರಿಯಾಲಿಟಿ ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.