ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ವಿಧಿವಶರಾದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಪಾರ್ಥೀವ ಶರೀರವನ್ನು ಹೆಬ್ಬಾಳದ ನಿವಾಸಕ್ಕೆ ಕರೆತರಲು ಕುಟುಂಬಸ್ಥರು ನಿರ್ಧರಿಸಿದ್ದು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಏ.6) ಕೊನೆ ಉಸಿರೆಳೆದಿದ್ದಾರೆ.
ನಿನ್ನೆ ಫೋರ್ಟಿಸ್ ಆಸ್ಪತ್ರೆಯಿಂದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಪಾರ್ಥೀವ ಶರೀರವನ್ನು ರವಾನಿಸಲಾಯಿತು. ಇಂದು ಬೆಳಗ್ಗೆ ಪುತ್ರ ರಕ್ಷಕ್ ಹಾಗೂ ದುನಿಯ್ ವಿಜಯ್ ಹೆಬ್ಬಾಳದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಭಿಮಾನಿಗಳು ಹಾಗೂ ಸಿನಿಮಾ ಗಣ್ಯರು ಹೆಬ್ಬಾಳದ ಕೆಂಪಾಪುರ ಮನೆಯಲ್ಲಿ 10.30 ರೊಳಗೆ ಅಂತಿಮ ದರ್ಶನ ಪಡೆಯಬಹುದಾಗಿದೆ. ಆನಂತರ ಹೆಬ್ಬಾಳದ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಬುಲೆಟ್ ಆಸ್ಪತ್ರೆ ಬಿಲ್ ಕ್ಲೀಯರ್ ಮಾಡಿದ ಅಶೋಕ್, ಅಂತ್ಯ ಸಂಸ್ಕಾರಕ್ಕೆ ಬರಬೇಡಿ
undefined
ಎಲ್ಲೆಡೆ ಕೊರೋನಾ ವೈರಸ್ ಭೀತಿ ಹೆಚ್ಚಾದ ಕಾರಣ ಅಭಿಮಾನಿಗಳು ಹೆಚ್ಚಿನ ಸಂಖೆಯಲ್ಲಿ ಮನೆಯ ಹತ್ತಿರ ಹಾಗೂ ಸ್ಮಶಾನದ ಹತ್ತಿರ ಸೇರಬೇಡಿ ಎಂದು ನಟರು ಹಾಗೂ ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಬುಲೆಟ್ ಅಂತಿಮ ದರ್ಶನ್ ಪಡೆಯಲು ಆಗಮಿಸುವ ಸಂಬಂಧಿಕರು ಹಾಗೂ ಅಭಿಮಾನಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಪೊಲೀಸರು ಸೂಚಿಸಿದ್ದಾರೆ.
ಹಾಸ್ಯಲೋಕ ಅಗಲಿದ ಪ್ರಕಾಶ, ಅದೊಂದು ಆಸೆ ಬುಲೆಟ್‌ಗೆ ಹಾಗೆ ಉಳಿದೋಯ್ತು!
'ಕುಟುಂಬಸ್ಥರೆಲ್ಲಾ ಕುಳಿತು ಮಾತನಾಡಿದ್ದೇವೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಂತಿಮ ದರ್ಶನ ಪಡೆಯಬಹುದು. ಬೆಳಗ್ಗೆ 8 ಗಂಟೆಯಿಂದ 12 ಗಂಟೆ ಒಳಗೆ ಅಂತಿಮ ಕಾರ್ಯ ನೇರವೇರಿಸಲು ತೀರ್ಮಾನ ಮಾಡಲಾಗಿದೆ. ಮನೆಯ ಹತ್ತಿರವೇ ಅಭಿಮಾನಿಗಳು, ಸ್ನೇಹಿತು ಹಾಗೂ ಸಂಬಂಧಿಕರು ಅಂತಿಮ ದರ್ಶನ ಪಡೆಯಬಹುದು' ಎಂದು ಪುತ್ರ ರಕ್ಷಕ್ ಹೇಳಿದ್ದಾರೆ.