
ಬೆಂಗಳೂರು(ಏ. 06) ಹಾಸ್ಯ ನಟ ಬುಲೆಟ್ ಪ್ರಕಾಶ್ ಕನ್ನಡ ಸಿನಿ ರಸಿಕರನ್ನು ಅಗಲಿದ್ದಾರೆ. ಬುಲೆಟ್ ಪ್ರಕಾಶ್ ಆಸ್ಪತ್ರೆ ಬಿಲ್ ಗಳನ್ನು ಸಚಿವ ಆರ್.ಅಶೋಕ್ ಕ್ಲೀಯರ್ ಮಾಡಿದ್ದಾರೆ.
ಆರ್.ಅಶೋಕ್ ಅವರಿಗೆ ಧನ್ಯವಾದ. ಆಸ್ಪತ್ರೆಯ ಬಿಲ್ ಕ್ಲಿಯರ್ ಮಾಡಿದ್ದಾರೆ. ಇಷ್ಟೊತ್ತಲ್ಲಿ ದೇಹವನ್ನು ಮನೆಗೆ ತೆಗೆದುಕೊಂಡು ಹೋಗೋದು ಬೇಡ ಅಂತಾ ನಾನು ಮತ್ತು ಪ್ರೇಮ್ ಕುಟುಂಬದ ಮನವೊಲಿಸಿದ್ದೇವೆ. ಹೀಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡುವ ವ್ಯವಸ್ಥೆ ನಡೀತಿದೆ. ನಾಳೆ ಮನೆಯ ಹತ್ತಿರ ತೆಗೆದುಕೊಂಡು ಹೋಗಲಿದ್ದೇವೆ. ನಾಳೆ ಅಂತ್ಯ ಸಂಸ್ಕಾರ ಎಷ್ಟು ಗಂಟೆಗೆ ಅಂತಾ ತೀರ್ಮಾನ ಮಾಡಲಿದ್ದೇವೆ ಎಂದು ನಟ ದುನಿಯಾ ವಿಜಯ್ ತಿಳಿಸಿದ್ದಾರೆ.
ಜವಾಬ್ದಾರಿ ಬಿಟ್ಟುಬಿಡಿ; ಬುಲೆಟ್ ಕುಟುಂಬಕ್ಕೆ ದರ್ಶನ್ ಅಭಯ
ದಯವಿಟ್ಟು ಅಭಿಮಾನಿಗಳು ಯಾರೂ ಮನೆ ಹತ್ತಿರ, ಅಂತ್ಯ ಸಂಸ್ಕಾರದ ಹತ್ತಿರ ಸೇರಬೇಡಿ. ಯಾಕೆಂದರೆ 20 ಜನಕ್ಕಿಂತಲೂ ಹೆಚ್ಚು ಜನ ಸೇರೋದು ಕಾನೂನು ಬಾಹಿರ. ಕೇಂದ್ರ ಸರ್ಕಾರ ನೀಡಿರುವ ಲಾಕ್ ಡೌನ್ ಆದೇಶವನ್ನು ಪಾಲಿಸಿ ಎಂದು ನಟರು ಕೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.