ವಿಡಿಯೋ ಕಾಲ್‌ ಮೂಲಕ ಚಿರು ಪುತ್ರನಿಗೆ ಆಂಜನೇಯ ದೇಗುಲ ತೋರಿಸಿದ ಅರ್ಜುನ್ ಸರ್ಜಾ!

Suvarna News   | Asianet News
Published : Jul 08, 2021, 12:52 PM IST
ವಿಡಿಯೋ ಕಾಲ್‌ ಮೂಲಕ ಚಿರು ಪುತ್ರನಿಗೆ ಆಂಜನೇಯ ದೇಗುಲ ತೋರಿಸಿದ ಅರ್ಜುನ್ ಸರ್ಜಾ!

ಸಾರಾಂಶ

ಜೂನಿಯರ್ ಚಿರು ವಿಡಿಯೋ ಕಾಲ್ ಫೋಟೋ ವೈರಲ್ ಆಗುತ್ತಿದೆ. ಅಜ್ಜನ ಮುಖದಲ್ಲಿ ಮಂದಹಾಸ ಗಮನಿಸಿದ ನೆಟ್ಟಿಗರು.

ಸ್ಯಾಂಡಲ್‌ವುಡ್‌ ನಟ ಅರ್ಜುನ್ ಸರ್ಜಾ ಇಡೀ ಕುಟುಂಬ ಆಂಜನೇಯ ಸ್ವಾಮಿ ಭಕ್ತರು ಎಂಬುವುದು ಎಲ್ಲರಿಗೂ ತಿಳಿದಿದೆ. ಮಾತು ಆರಂಭಿಸುವ ಮುನ್ನ ಹಾಗೂ ಮುಗಿಸುವ ಮುನ್ನ 'ಜೈ ಆಂಜನೇಯ' ಎಂದು ತಪ್ಪದೇ ಹೇಳುತ್ತಾರೆ. ಆಂಜನೇಯನ ಅಪ್ಪಟ ಭಕ್ತ ಅರ್ಜುನ್ ಸರ್ಜಾ ಇದೀಗ ತಮ್ಮ ಪ್ರಿಯ ಭಕ್ತನಿಗೊಂದು ದೇಗುಲ ನಿರ್ಮಿಸಿದ್ದಾರೆ. 

ಚೆನ್ನೈನ ವಿಮಾನ ನಿಲ್ದಾಣದ ಬಳಿ ಅರ್ಜುನ್ ಸರ್ಜಾ ಫಾರ್ಮ್ಸ್‌ನಲ್ಲಿ 180 ಟನ್ ತೂಕದ ಒಂದೇ ಕಲ್ಲಿನ ಆಂಜನೇಯ ದೇಗುಲ ನಿರ್ಮಿಸಿದ್ದಾರೆ. ಜುಲೈ 2 ಹಾಗೂ  3ರಂದು ಅದ್ಧೂರಿಯಾಗಿ ಕುಂಭಾಭಿಷೇಕ ಮಾಡಿದ್ದಾರೆ. ಕೊಪ್ಪ ತಾಲೂಕಿನ ಅವಧೂತ ವಿನಯ್ ಗುರೂಜಿ ದೇವಾಲಯ ಉದ್ಘಾಟನೆ ಮಾಡಿದ್ದಾರೆ. ಸರ್ಕಾರ ನೀಡಿರುವ ಕೋವಿಡ್19 ಮಾರ್ಗ ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಆಪ್ತರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಅರ್ಜುನ್ ಯುಟ್ಯೂಲ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ಕಾರ್ಯಕ್ರಮದ ನೇರ ಪ್ರಸಾರ ನೀಡಲಾಗಿತ್ತು. ಅರ್ಜುನ್ ಕುಟುಂಬ ಮತ್ತು ಧ್ರುವ ಸರ್ಜಾ ಕುಟುಂಬ ಪೂಜೆಯಲ್ಲಿ ಭಾಗಿಯಾಗಿದ್ದರು.

ಸರ್ಜಾ ಕುಟುಂಬ ಲಕ್ಕಿ ಹಾಗೂ ಫೇವರೆಟ್ ಕಿಡ್ ಜೂನಿಯರ್ ಚಿರು ಇನ್ನೂ ಪುಟ್ಟ ಕೂಸು ಆಗಿರುವ ಕಾರಣ ಚೆನ್ನೈಗೆ ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಅರ್ಜುನ್ ಸರ್ಜಾ ವಿಡಿಯೋ ಕಾಲ್ ಮೂಲಕ ಮೇಘನಾ ಮತ್ತು ಜೂನನಿಯರ್ ಚಿರುಗೆ ದೇವಾಲಯ ತೋರಿಸಿದ್ದಾರೆ. ವಿಡಿಯೋ ಲಾಕ್ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡು, 'ಚಿರು ಬಚ್ಚಗೆ ದೇವಸ್ಥಾನ ಟೂರ್ ತೋರಿಸುತ್ತಿರುವೆ. ಕೊರೋನಾದಿಂದ ಕುಂಭಾಭಿಷೇಕಕ್ಕೆ ಬರಲು ಆಗಲಿಲ್ಲ,' ಎಂದು ಬರೆದುಕೊಂಡಿದ್ದಾರೆ. 

ಅಪ್ಪ ಡ್ಯಾನ್ಸ್ ನೋಡಿ ಥ್ರಿಲ್ ಆದ ಜೂನಿಯರ್; ಮೇಘನಾ ರಾಜ್‌ಗೆ ಸರ್ಪ್ರೈಸ್! 

ವಿಶೇಷ ದಿನಗಳಲ್ಲಿ ಜೂನಿಯರ್ ಚಿರು ಜೊತೆ ಅರ್ಜುನ್ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಸ್ಕ್ರೀನ್‌ಶಾಟ್‌ ಹಂಚಿಕೊಳ್ಳುತ್ತಾರೆ. ಪ್ರತಿ ಸಲವೂ ಸರ್ಜಾ ಮುಖದಲ್ಲಿ ಸಂತೋಷ ಗಮನಿಸುವ ಅಭಿಮಾನಿಗಳು 'ನೀವು ಜೂನಿಯರ್‌ನ ಎಷ್ಟು ಇಷ್ಟ ಪಡುತ್ತೀರಾ ಅಂತ ಈ ನಗುವಿನಿಂದಲೇ ಗೊತ್ತಾಗುತ್ತದೆ,' ಎಂದು ಕಾಮೆಂಟ್ ಮಾಡುತ್ತಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?