
ಬೆಂಗಳೂರು (ಜು.7) ರಾಜ್ಯದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ ಚಿತ್ರಮಂದಿರಗಳು ಲಾಕ್ ಡೌನ್ ನಿಂದ ಬಾಗಿಲು ಮುಚ್ಚಿ ಸಂಕಷ್ಟಕ್ಕೆ ಸಿಲುಕಿದ್ದವು. ಸ್ಯಾಂಡಲ್ ವುಡ್ ಮತ್ತು ಚಿತ್ರಮಂದಿರಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿರುವ ಸರ್ಕಾರ ಚಿತ್ರ ಮಂದಿರಗಳ ಆಸ್ತಿ ತೆರಿಗೆ ಮನ್ನಾ ಮಾಡಿದೆ. ಕೊರೋನಾ ಕಾಳದ ಸಂಕಷ್ಟದಿಂದ ಹೊರಬರಲು ಒಂದು ಹಂತದ ನೆರವು ನೀಡಿದೆ.
2021-22 ರ ಸಾಲಿನ ಆಸ್ತಿ ತೆರಿಗೆ ಮನ್ನಾ ಮಾಡಲಾಗಿದೆ. ಏಕ ಪರದೆಯ ಚಿತ್ರಮಂದಿರಗಳ ಆಸ್ತಿ ತೆರಿಗೆಯನ್ನು ಪಾವತಿ ಮಾಡುವುದಕ್ಕೆ ಸರ್ಕಾರ ವಿನಾಯಿತಿ ನೀಡಿದೆ. ಚಿತ್ರಮಂದಿರಗಳ ಮಾಲೀಕರು,ನೌಕರರ ಹಿತ ಗಮನದಲ್ಲಿರಿಸಿಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
'ಸೃಜನ್ ಗೆ ಮೋಸ ಮಾಡಿ ಬೀದಿಗೆ ಬಂದಳು' ನೊಂದ ನಟಿಯ ನೋವಿನ ಮಾತು
ಚಿತ್ರ ಪ್ರದರ್ಶಕರ ಸಂಘ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿ, ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳ ನಡೆಸಲು ಕಷ್ಟವಾಗುತ್ತದೆ.ಶೇ. 50 ರಷ್ಟು ಅವಕಾಶ ನೀಡಿದರೂ ಚಿತ್ರಮಂದಿರ ನಡೆಸಲು ಕಷ್ಟ ವಾಗಲಿದೆ ಹೀಗಾಗಿ ಆಸ್ತಿ ತೆರಿಗೆ ಮನ್ನಾ ಮಾಡುವಂತೆ ಕೋರಿಕೆ ಸಲ್ಲಿಸಿತ್ತು. ರಾಜ್ಯದಲ್ಲಿ 630 ಏಕಪರದೆ ಚಿತ್ರಮಂದಿರಗಳಿಗೆ ಇದರಿಂದ ಲಾಭವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.