ರಿಷಬ್ ಶೆಟ್ಟಿಗೆ ಹೊಸ ಸಂಕಷ್ಟ; 'ಕಾಂತಾರ 1' ಸಿನಿಮಾದಲ್ಲಿ ಪಂಜುರ್ಲಿ ದೈವ ಇರೋದಿಲ್ವಾ?

By Shriram Bhat  |  First Published Feb 19, 2024, 7:19 PM IST

ಸಿನಿಮಾ ನಂತರ ಕರಾವಳಿ ದೈವಾರಾದನೆ ಎಷ್ಟು ಪ್ರಸಿದ್ಧಿ ಪಡೆಯಿತ್ತೋ ಅಷ್ಟೇ ಅವಹೇಳನಕ್ಕೆ ಒಳಗಾಯಿತು ಎನ್ನುವ ವಾದವೂ ಇದೆ. ಸದ್ಯ ಸಿನಿಮಾ, ಧಾರಾವಾಹಿ ಹಾಗೂ ಸಭಾ ಕಾರ್ಯಕ್ರಮದಲ್ಲಿ ದೈವಾರಾಧನೆಗೆ ಅಪಮಾನ ಆಗುತ್ತಿದೆ ಅಂತ ದೈವಾರಾಧಕರು ಖಂಡಿಸುತ್ತಿದ್ದಾರೆ.


ರಿಷಬ್ ಶೆಟ್ಟಿ ಕಾಂತಾರಕ್ಕೆ ಇದೀಗ ಹೊಸ ಕಾಟ ಶುರುವಾಗಿದೆ. ಪಂಜುರ್ಲಿ ದೈವ ನೃತ್ಯವನ್ನು ಪ್ರದರ್ಶಿಸದಂತೆ ಭಜರಂಗದಳ ವಾರ್ನಿಂಗ್ ಕೊಟ್ಟಿದೆ. ಈ ಮೂಲಕ ಹೊಸಾ ಸಂಕಷ್ಟ ಎದುರಿಸುವಂತಾಗಿದೆ. ಹಾಗಾದ್ರೆ ಸಿನಿಮಾದಲ್ಲಿ ದೈವ ನರ್ತನ ಇರೋದಿಲ್ವಾ..? ರಿಷಬ್ (Rishab Shetty) ಕಾಂತಾರ ಕತೆಯನ್ನೆ ಬದಲಾಯಿಸುತ್ತಾರಾ.. ಇಷ್ಟಕ್ಕೂ ಏಕೆ ಚಿತ್ರತಂಡಕ್ಕೆ ಇಂಥಾ ನಿರ್ಭಂಧ ಹೇರುತ್ತಿದ್ದಾರೆ ಭಜರಂಗದಳ.. ಬನ್ನೀ ತಿಳ್ಕೊಳ್ಳೋಣ

ಸಿನಿಮಾ ನಂತರ ಕರಾವಳಿ ದೈವಾರಾದನೆ ಎಷ್ಟು ಪ್ರಸಿದ್ಧಿ ಪಡೆಯಿತ್ತೋ ಅಷ್ಟೇ ಅವಹೇಳನಕ್ಕೆ ಒಳಗಾಯಿತು ಎನ್ನುವ ವಾದವೂ ಇದೆ. ಸದ್ಯ ಸಿನಿಮಾ, ಧಾರಾವಾಹಿ ಹಾಗೂ ಸಭಾ ಕಾರ್ಯಕ್ರಮದಲ್ಲಿ ದೈವಾರಾಧನೆಗೆ ಅಪಮಾನ ಆಗುತ್ತಿದೆ ಅಂತ ದೈವಾರಾಧಕರು ಖಂಡಿಸುತ್ತಿದ್ದಾರೆ. ಈ ನಡುವೆ.. ಕಾಂತಾರ ಪ್ರೀಕ್ವೆಲ್ ಕಾಂತಾರ 1ರ (Kantara 1) ಟೀಸರ್  ದೊಡ್ಡ ಹವಾ ಸೃಷ್ಟಿಸಿದೆ. ರಿಷಬ್ ವಾರಾಹಿ ನಾರಯಣಾವತಾರ ಬಾರೀ ಸದ್ದು ಮಾಡುತ್ತಿದೆ. ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡು ಸಿನಿಮಾ ರಿಲೀಸ್ಗಾಗಿ ಜನ ಕಾದು ಕುಂತಿದ್ದಾರೆ

Tap to resize

Latest Videos

ವಾ:ರಿಷಬ್ ಶೆಟ್ಟಿ ಕಾಂತಾರ ದೈವ ಜನಪ್ರಿಯವಾಗುತ್ತಿದ್ದಂತೆ..ದೈವಾರಾಧನೆಯನ್ನು ಯಾರು ಅನುಕರಿಣೆ ಮಾಡಲು ಹೋಗಬೇಡಿ. ರೀಲ್ಸ್, ಡ್ಯಾನ್ಸ್ ಅಂತೆಲ್ಲಾ ಅದಕ್ಕೆ ಅಪಚಾರ ಮಾಡಬೇಡಿ. ನಾವು ಸಾಕಷ್ಟು ಶ್ರದ್ಧಾ ಭಕ್ತಿಯಿಂದ ಅದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ನೀವು ಅದನ್ನು ಪ್ರದರ್ಶಿಸಿ ಅಪಮಾನ ಮಾಡಬೇಡಿ ಎಂದು  ಹಲವು ಬಾರಿ ರಿಷಬ್ ಶೆಟ್ಟಿ ಕೂಡ ಮನವಿ ಮಾಡಿದ್ದರು. ಕೆಲವರು ಇದನ್ನು ಕೇಳುತ್ತಿಲ್ಲ. ಪದೇ ಪದೇ ಈ ತಪ್ಪು ಮಾಡುತ್ತಿದ್ದಾರೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ. 

ಸೌತ್ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ಭಯ; ಬಾಲಿವುಡ್​ ಇಷ್ಟೊಂದು ಹೆದರುತ್ತಿರೋದೇಕೆ?

'ಕಾಂತಾರ' ಪ್ರೀಕ್ವೆಲ್ ಬರುತ್ತಿರೊ ವೇಳೆಯಲ್ಲಿ ಆ ಚಿತ್ರದಲ್ಲಿ ಕೂಡ ದೈವಾರಾಧನೆ ವಿಚಾರಗಳು ಇರುವ ಸಾಧ್ಯತೆಯಿದೆ. ಆದರೆ ದೈವಾರಾಧನೆ ಪ್ರದರ್ಶನದ ಸರಕಲ್ಲ, ಅದನ್ನು ಪ್ರದರ್ಶನ ಮಾಡಿದರೆ ಮುತ್ತಿಗೆ ಹಾಕುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್ವೆಲ್ ಎಚ್ಚರಿಕೆ ನೀಡಿದ್ದು ಇದೀಗ ಕಾಂತಾರ ಚಿತ್ರತಂಡಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. 'ಕಾಂತಾರ' ಸಿನಿಮಾ ಬಳಿಕ ಕೆಲವರು ದೈವದ ವೇಷ ತೊಟ್ಟು ನರ್ತಿಸಲು ಆರಂಭಿಸಿದ್ದಾರೆ. 

ಸಿಹಿ ಕಹಿ ದಂಪತಿಗಳಿಗೆ 'ಆಪ್ತ ರಕ್ಷಕ'ರಾಗಿದ್ರು ಡಾ ವಿಷ್ಣುವರ್ಧನ್; ವೇದಿಕೆಯಲ್ಲಿ ನೆನೆದು ಭಾವುಕರಾದ ಚಂದ್ರು-ಗೀತಾ

ಇದು ದೈವಾರಾಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ದೈವಾರಾಕರು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಧಾರಾವಾಹಿಯಲ್ಲೂ ದೈವಾರಾಧನೆ ದೃಶ್ಯ ತೋರಿಸಿದ್ದು ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಸದ್ಯ ದೈವಾರಾಧಕರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕೂಡ ಸಾಥ್ ನೀಡಿದೆ. ಮುಂದೆ ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 'ರಿಷಬ್ ಶೆಟ್ಟಿ ಅವರಿಗೂ ಹೇಳುತ್ತಿದ್ದೇವೆ. ಮುಂದೆ ಸಿನಿಮಾದಲ್ಲಿ ದೈವರಾಧನೆಯ ಪ್ರದರ್ಶನವಾಗಬಾರದು. ಹಾಗೊಮ್ಮೆ ಆದರೆ ನಮ್ಮ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗುತ್ತದೆ ಎಂದು ಎಚ್ಚರಿಸಿದ್ದಾರೆ. 

ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!

ಇದರಿಂದ ಸಿನಿರಸಿಕರು ಹಾಗಾದರೆ ದೈವ ನರ್ತನ 'ಕಾಂತಾರ 1' ನಲ್ಲಿ ಇರೊಲ್ವೆ ಎಂದು ಕೇಳುತ್ತಿದ್ದಾರೆ. ಮುಂದಿನವರ್ಷ ತೆರೆಕಾಣುತ್ತಿರೋ ಕಾಂತಾರ 1 60 ಕೋಟಿಗೂ ಹೆಚ್ಚು ಬಂಡವಾಳ  ಹೂಡಿ  ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ರಿಷಬ್ ಶೆಟ್ಟಿ ಸ್ವತಃ ನಟಿಸಿ ನಿರ್ದೇಶನ ಮಾಡುತ್ತಿದ್ದು ಮುಂದಿನ ವರ್ಷ ತೆರೆಕಾಣಲಿದೆ. ಇದೀಗ ಈ ಹೊಸ ಸಂಕಷ್ಟವನ್ನು ರಿಷಬ್ ಶೆಟ್ಟಿ ಹೇಗೆ ಎದುರಿಸುತ್ತಾರೋ ಕಾದುನೋಡಬೇಕಿದೆ. 

ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ಲೈನ್‌ಮ್ಯಾನ್; ರಘು ಶಾಸ್ತ್ರಿ ಚಿತ್ರ ಮ್ಯಾಜಿಕ್ ಮಾಡಬಹುದೇ?

click me!