Bad Manners Teaser: ವ್ಯವಸ್ಥೆ ತಪ್ಪಲ್ಲ ಮನುಷ್ಯರ ಯೋಚನೆ ತಪ್ಪು..ಅಭಿಷೇಕ್ ಮಾಸ್ ಎಂಟ್ರಿಗೆ ಫ್ಯಾನ್ಸ್ ಫಿದಾ

Published : Oct 03, 2022, 02:25 PM IST
Bad Manners Teaser: ವ್ಯವಸ್ಥೆ ತಪ್ಪಲ್ಲ ಮನುಷ್ಯರ ಯೋಚನೆ ತಪ್ಪು..ಅಭಿಷೇಕ್ ಮಾಸ್ ಎಂಟ್ರಿಗೆ ಫ್ಯಾನ್ಸ್ ಫಿದಾ

ಸಾರಾಂಶ

ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ, ನಟ ಅಭಿಷೇಕ್​ ಅಂಬರೀಷ್​ ಅವರಿಗೆ ಇಂದು (ಅಕ್ಟೋಬರ್ 3) ಹುಟ್ಟುಹಬ್ಬದ ಸಂಭ್ರಮ. ಅಭಿಷೇಕ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ.

ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ, ನಟ ಅಭಿಷೇಕ್​ ಅಂಬರೀಷ್​ ಅವರಿಗೆ ಇಂದು (ಅಕ್ಟೋಬರ್ 3) ಹುಟ್ಟುಹಬ್ಬದ ಸಂಭ್ರಮ. ಅಭಿಷೇಕ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಅಭಿಷೇಕ್ ತನ್ನ ನಿವಾಸದಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ಕಳೆದ ಎರಡು ವರ್ಷಗಳಿಂದ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕೊರೊನಾ ಕಾರಣದಿಂದ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಈ ಬಾರಿ ಮತ್ತೆ ಅದ್ದೂರಿಯಾಗಿ ಜನ್ಮ ದಿನ ಸಂಭ್ರಮಿಸಿದ್ದಾರೆ.  ಅಭಿಷೇಕ್ ಹುಟ್ಟುಹಬ್ಬದ ಸಂಭ್ರಮಕ್ಕೆ ತಾಯಿ, ಸಂಸದೆ ಸುಮಲತಾ ಅಂಬರೀಶ್ ಸಾಥ್ ನೀಡಿದರು. 

ಅಭಿಷೇಕ್ ಹುಟ್ಟುಹಬ್ಬದ ಖುಷಿಯನ್ನು ಹೆಚ್ಚಿಸಲು ‘ಬ್ಯಾಡ್​ ಮ್ಯಾನರ್ಸ್​’ ಸಿನಿಮಾ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಹೌದು, ಬ್ಯಾಡ್ ಮ್ಯಾನರ್ ಸಿನಿಮಾದ   ಟೀಸರ್​ ಬಿಡುಗಡೆ ಮಾಡಲಾಗಿದೆ. ಸುಕ್ಕಾ ಸೂರಿ ಸಾರಥ್ಯದಲ್ಲಿ ಬಂದಿರುವ ಬ್ಯಾಡ್ ಮ್ಯಾನರ್ ಪಕ್ಕಾ ಸೂರಿ ಫ್ಲೇವರ್ ನಲ್ಲಿ ಮೂಡಿಬಂದಿದೆ. ಸದ್ಯ ರಿಲೀಸ್ ಆಗಿರುವ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬ್ಯಾಡ್ ಮ್ಯಾನರ್ಸ್ ಹೆಸರೇ ಹೇಳುವ ಹಾಗೆ ಇದು ಪಕ್ಕಾ ಮಾಸ್ ಶೈಲಿಯ ಸಿನಿಮಾ. ಅಭಿಷೇಕ್  ಅವರನ್ನು ರಡಗ್ ಆಗಿ ನೋಡಲು ಅಭಿಮಾನಿಗಳು ಸಹ ಕಾಯುತ್ತಿದ್ದರು. ಇದೀಗ ಅಭಿ ಮಾಸ್ ಲುಕ್ ನಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. 

ಬ್ಲಡ್ ಶೇಡ್ ನಲ್ಲಿ ಯಂಗ್ ರೆಬಲ್, ಮೇಕಪ್ ಗಾಗಿ 4 ಗಂಟೆ ಕೂತಲ್ಲೇ ಕೂತಿದ್ದ ಅಭಿಷೇಕ್..!

ನಿರ್ದೇಶಕ ಸೂರಿ ಅವರ ಸಿನಿಮಾ ಶೈಲಿನೆ ಬೇರೆ.ಮಾಸ್ ಸಿನಿಮಾ ಮಾಡುವುದರಲ್ಲಿ ಸೂರಿ ಫೇಮಸ್. ಬ್ಯಾಡ್ ಮ್ಯಾನರ್ಸ್ ಕೂಡ ಸೂರಿ ಶೈಲಿಯಲ್ಲೇ ಮೂಡಿ ಬಂದಿದೆ. ಅಭಿಷೇಕ್ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಗನ್ ಹಿಡಿದು ಅಬ್ಬರಿಸಿದ್ದಾರೆ. ವ್ಯವಸ್ಥೆ ತಪ್ಪಲ್ಲ, ಮನುಷ್ಯನ ಯೋಚನೆ.. ಯೋಚನೆ ತಪ್ಪು ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ. ಅಭಿಷೇಕ್ ಸಖತ್ ಎಂಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದಹಾಗೆ ಅಭಿಷೇಕ್‌ಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಅಮರ್ ಸಿನಿಮಾದಲ್ಲೂ ರಚಿತಾ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅಭಿಷೇಕ್ ಎರಡನೇ ಸಿನಿಮಾಗೆ ನಾಯಕಿಯಾಗುವ ಮೂಲಕ ಮತ್ತೆ ಅಭಿ ಜೊತೆ ಮಿಂಚಿದ್ದಾರೆ.

ಹಾಲಿವುಡ್ ಸ್ಟೈಲ್‌ನಲ್ಲಿ ಜ್ಯೂ. ರೆಬೆಲ್ ಸ್ಟಾರ್; ಯಾಕೆ ಈ ಲುಕ್?

ನಟ ಅಭಿಷೇಕ್ ಅಂಬರೀಷ್ ಅಮರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರಕ್ಕೆ ನಾಗಶೇಖರ್​ ನಿರ್ದೇಶನ ಮಾಡಿದ್ದರು. ಆ ಚಿತ್ರದ ಹಾಡುಗಳು ಸೂಪರ್​ ಹಿಟ್​ ಆದವು. ಈಗ ಬ್ಯಾಡ್​ ಮ್ಯಾನರ್ಸ್​ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ಜೊತೆಗೆ ಅಯೋಗ್ಯ ಖ್ಯಾತಿಯ ಮಹೇಶ್​ ಕುಮಾರ್​ ನಿರ್ದೇಶನದ ಹೊಸ ಚಿತ್ರವನ್ನು ಕೂಡ ಅಭಿಷೇಕ್​ ಒಪ್ಪಿಕೊಂಡಿದ್ದಾರೆ. ಇನ್ನು ಕೃಷ್ಣ ನಿರ್ದೇಶನದ ಕಾಳಿ ಚಿತ್ರಕ್ಕೂ
ಅಭಿಷೇಕ್​ ಹೀರೋ ಆಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!