ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರಕ್ಕೆ ನಟ ದರ್ಶನ್ ಬರಬಹುದು, ಯಶ್ ಬರಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಹಲವರಲ್ಲಿ ಇತ್ತು. ಆದರೆ, ಬಹಳಷ್ಟು ಜನರಲ್ಲಿ ಈ ಬಗ್ಗೆ ಸಂದೇಹ ಕೂಡ ಇತ್ತು. ಏಕೆಂದರೆ, ನಟರಾದ ಯಶ್ ಹಾಗೂ ದರ್ಶನ್ ಇಬ್ಬರೂ..
ಇಂದು ಕನ್ನಡದ ರೆಬೆಲ್ ಸ್ಟಾರ್ ದಿವಂಗತ ಅಂಬರೀಷ್ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ನಡೆಯುತ್ತಿದೆ. JW ಮ್ಯಾರಿಯೆಟ್ ಹೋಟೆಲ್ ನಲ್ಲಿ ನಡೆಯುತ್ತಿರುವ ನಾಮಕರಣ ಶಾಸ್ತ್ರದಲ್ಲಿ ಸ್ಯಾಂಡಲ್‌ವುಡ್‌ನ ಅನೇಕ ತಾರೆಗಳು ಬ್ಯುಸಿಯಾಗಿದ್ದಾರೆ. ಅಂಬಿ ಕುಟುಂಬವಂತೂ ಸಹಜವಾಗಿಯೇ ಈಗಾಗಲೇ ನಾಮಕರಣ ಶಾಸ್ತ್ರದಲ್ಲಿ ಬ್ಯುಸಿಯಾಗಿದೆ. ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಆಹ್ವಾನ ನೀಡಿದ್ದಾರೆ ಅಂಬಿ ಕುಟುಂಬ ಎನ್ನಲಾಗಿದೆ.
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರಕ್ಕೆ ನಟ ದರ್ಶನ್ ಬರಬಹುದು, ಯಶ್ ಬರಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಹಲವರಲ್ಲಿ ಇತ್ತು. ಆದರೆ, ಬಹಳಷ್ಟು ಜನರಲ್ಲಿ ಈ ಬಗ್ಗೆ ಸಂದೇಹ ಕೂಡ ಇತ್ತು. ಏಕೆಂದರೆ, ನಟರಾದ ಯಶ್ ಹಾಗೂ ದರ್ಶನ್ ಇಬ್ಬರೂ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿ ಇದ್ದಾರೆ. ಯಶ್ ಟಾಕ್ಸಿಕ್ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರೆ ದರ್ಶನ್ ಅವರು ದಿ ಡೆವಿಲ್ ಶೂಟಿಂಗ್‌ನಲ್ಲಿ ಮೈಸೂರಿನಲ್ಲಿ ಬ್ಯುಸಿ ಆಗಿದ್ದಾರೆ.
ದರ್ಶನ್ 'ದಿ ಡೆವಿಲ್' ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ಮೈಸೂರಿನಲ್ಲಿ ಶೂಟಿಂಗ್.. ರೋಲ್ ಏನು...!?
ನಟ ದರ್ಶನ್ ಅವರು ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಬರೋ ಸಾಧ್ಯತೆ ಇಲ್ಲ ಎಂಬ ಮಾಹಿತಿ ಈ ಮೊದಲೇ ಹರಿದಾಡುತ್ತಿತ್ತು.
ಯಶ್ ಕೂಡ ಅಂಬಿ ಮೊಮ್ಮಗನ ನಾಮಕರಣಕ್ಕೆ ಗೈರಾಗೊ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿತ್ತು. ಇಲ್ಲಿಯವರೆಗೂ ಅವರಿಬ್ಬರೂ ಬಂದಿಲ್ಲ. ಹೀಗಾಗಿ ಓಡಾಡುತ್ತಿದ್ದ ಸುದ್ದಿ ನಿಜವಾಗಿದೆ. ಈ ಮೂಲಕ ದರ್ಶನ್ ಅವರ 'ಮದರ್ ಇಂಡಿಯಾ' ಮೊಮ್ಮಗನ ನಾಮಕರಣದಲ್ಲಿ ಜೋಡೆತ್ತು ನಾಪತ್ತೆ ಆಗಿದ್ದಾರೆ. ದರ್ಶನ್ ಹಾಗೂ ಯಶ್ ಬಂದಿಲ್ಲ.
ಮಾಜಿ ಸಂಸದೆ ಹಾಗೂ ಸ್ಯಾಂಡಲ್‌ವುಡ್‌ನ ಒಂದು ಕಾಲದ ಸ್ಟಾರ್ ನಟಿ ಸುಮಲತಾ ಮೊಮ್ಮಗನ ನಾಮಕರಣಕ್ಕೆ ದರ್ಶನ್ ಯಶ್-ದರ್ಶನ್ ಬಾರದಿರುವುದು ಹಲವರ ಗಮನ ಸೆಳೆದಿದೆ. ಯಾಕೆ ಬಂದಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಆದರೆ ಇದಕ್ಕೆ ಕೊಡಬಹುದಾದ ಉತ್ತರ ಸಿಂಪಲ್.. ಯಶ್ ಹಾಗೂ ದರ್ಶನ್ ಇಬ್ಬರೂ ಸಿನಿಮಾ ನಟರು, ಸಿನಿಮಾ ಶೂಟಿಂಗ್ ಇದೆ, ಅದಕ್ಕೇ ಬಂದಿಲ್ಲ. ಆದರೆ, ಅದಕ್ಕೂ ಬೇರೆ ಕಾರಣ ಹುಡುಕಿ, ಹಳೆಯದು-ಹೊಸದು ಎಲ್ಲ ಘಟನೆಗಳನ್ನೂ ಕೆದಕಿ ಬೇರೆಬೇರೆ ಉತ್ತರ ಕಂಡುಕೊಂಡರೆ ಅದು ಅವರವರಿಗೆ ಬಿಟ್ಟಿದ್ದು ಎನ್ನಬಹುದಷ್ಟೇ.
'ಮತ್ತೆ ನನ್ ಲೈಫಲ್ಲಿ ಬರಬೇಡ, ಗುಡ್ ಬೈ..' ಹೇಳಿ ಹೊರಟ ಚಂದನ್ ಶೆಟ್ಟಿ: ಏನಿದು BIG ಹಲ್‌ಚಲ್..?!
ಇತ್ತೀಚೆಗಷ್ಟೆ ಸೋಷಿಯಲ್ ಮೀಡಿಯಾದಲ್ಲಿ ಸುಮಲತಾ ಅಂಬರೀಷ್, ಅಭಿಷೇಕ್, ಅವಿವಾ ಎಲ್ಲರನ್ನೂ ನಟ ದರ್ಶನ್ ಅನ್‌ಪಾಲೋ ಮಾಡಿದ್ದರು. ಅದು ಭಾರೀ ಸುದ್ದಿಯಾಗಿತ್ತು. ಆದರೆ, ಅದೇ ವೇಳೆ ನಟ ದರ್ಶನ್ ಅವರು ಸ್ವಂತ ಮಗ ವಿನೀಶ್ ಅವರನ್ನೂ ಅನ್‌ಫಾಲೋ ಮಾಡಿದ್ದಾರೆ ಎಂಬುದು ಅಷ್ಟೊಂದು ಸುದ್ದಿಯೇ ಆಗಿಲ್ಲ. ತಮ್ಮ ಮಗ ವಿನೀಶ್ ಸೇರಿದಂತೆ ಸುಮಲತಾ, ಅಭಿಷೇಕ್, ಅವಿವಾ ಹಾಗೂ ಸ್ವಂತ ತಮ್ಮ ದಿನಕರ್ ಅವರನ್ನೂ ಅನ್‌ಫಾಲೋ ಮಾಡಿದ್ದಾರೆ ನಟ ದರ್ಶನ್. ಅಂದರೆ, ಅದಕ್ಕೆ ಕಾರಣ ಬೇರೇನೋ ಇದೆ. ಅದೇನು ಅಂತ ಮುಂದೆ ಸುದ್ದಿಯಾಗಬಹುದು..