ಆ ಸಿನಿಮಾ ಆ ಕಾಲದಲ್ಲಿ ಅದೆಷ್ಟು ಕ್ರೇಜ್ ಸೃಷ್ಟಿಸಿತ್ತು ಹಾಗೂ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಆಗಿತ್ತು ಎಂದರೆ, ಎಲ್ಲರೂ ಆ ಚಿತ್ರದ ಬಗ್ಗೆಯೇ ಮಾತನ್ನಾಡುತ್ತಿದ್ದರು. ಅಷ್ಟರಮಟ್ಟಿಗೆ ಆ ಚಿತ್ರ ತೀರಾ ವಿಭಿನ್ನವಾಗಿತ್ತು.. ರೌಡಿ ಪಾತ್ರದಲ್ಲಿ ಶಿವರಾಜ್‌ಕುಮಾರ್ ಮಿಂಚಿದ್ದರೆ ಸೊಕ್ಕಿನ ಹುಡುಗಿಯ ಪಾತ್ರದಲ್ಲಿ ನಟಿ..
ಶಿವರಾಜ್‌ಕುಮಾರ್ (Shivarajkumar) ನಟನೆಯಲ್ಲಿ 1995ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಯೇ ಇಲ್ಲ. ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು, ಇಂದಿಗೂ ಕೂಡ ಮುರುಬಿಡುಗಡೆ ಆಗುತ್ತ ತನ್ನ ಕ್ರೇಜ್ ಉಳಿಸಿಕೊಂಡಿದೆ. ಈ ಸಿನಿಮಾವನ್ನು ನಟ-ನಿರ್ದೇಶಕ ಉಪೇಂದ್ರ ಅವರು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಹೊಸ ನಟಿಯೊಬ್ಬರು ನಟಿಸಿದ್ದಾರೆ, ಇದು ಆ ನಟಿಯ ನಟನೆಯಲ್ಲಿ ಬಿಡುಗಡೆಯಾದ ಮೊಟ್ಟಮೊದಲ ಚಿತ್ರವಾಗಿದೆ. ಅಲ್ಲಿಯವರೆಗೂ ರೊಮ್ಯಾಂಟಿಕ್ ಹೀರೋ ಆಗಿದ್ದ ನಟ ಶಿವರಾಜ್‌ಕುಮಾರ್ ಅವರು ಆ ಚಿತ್ರದ ಮೂಲಕ ಆಕ್ಷನ್ ಹೀರೋ ಆಗಿ ಬಿಟ್ಟರು.
ಆ ಸಿನಿಮಾ ಆ ಕಾಲದಲ್ಲಿ ಅದೆಷ್ಟು ಕ್ರೇಜ್ ಸೃಷ್ಟಿಸಿತ್ತು ಹಾಗೂ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಆಗಿತ್ತು ಎಂದರೆ, ಎಲ್ಲರೂ ಆ ಚಿತ್ರದ ಬಗ್ಗೆಯೇ ಮಾತನ್ನಾಡುತ್ತಿದ್ದರು. ಅಷ್ಟರಮಟ್ಟಿಗೆ ಆ ಚಿತ್ರವನ್ನು ತೀರಾ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದರು ನಿರ್ದೇಶಕರು.. ರೌಡಿ ಪಾತ್ರದಲ್ಲಿ ಶಿವರಾಜ್‌ಕುಮಾರ್ ಮಿಂಚಿದ್ದರೆ ಸೊಕ್ಕಿನ ಹುಡುಗಿಯ ಪಾತ್ರದಲ್ಲಿ ಆ ನಟಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಆದರೆ, ಇಲ್ಲಿ ಹೇಳಲೇಬೇಕಾದ ಸೀಕ್ರೆಟ್ ಒಂದಿದೆ. ಅದು.. ಈ ಚಿತ್ರದಲ್ಲಿ ಮೊದಲು ನಟಿಸಲು ಮೊದಲು ಆಯ್ಕೆಯಾಗಿದ್ದು ಆ ನಟಿ ಅಲ್ಲ, ಬದಲಿಗೆ ಬೇರೊಂದು ನಟಿ.
ಹೌದು, ಇದು ಶಿವರಾಜ್‌ಕುಮಾರ್ ನಟನೆ, ಉಪೇಂದ್ರ (Upendra) ನಿರ್ದೇಶನದ 'ಓಂ' ಚಿತ್ರದ ಸುದ್ದಿ. ಈ ಚಿತ್ರದ ನಿರ್ಮಾಪಕಿಯಾಗಿರುವ ಪಾರ್ವತಮ್ಮ ರಾಜ್‌ಕುಮಾರ್ ಅವರು ಓಂ (OM) ಚಿತ್ರದಲ್ಲಿ ನಟಸಲು ಮೊದಲು ಆಫರ್ ಕೊಟ್ಟಿದ್ದು ಪ್ರೇಮಾಗೆ ಅಲ್ಲ, ಸುಧಾರಾಣಿ ಅವರಿಗೆ. ಆದರೆ, ಅದಾಗಲೇ 'ಆನಂದ್' ಹಾಗೂ 'ಮನಮೆಚ್ಚಿದ ಹುಡುಗಿ' ಈ ಎರಡು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ನಟಿ ಸುಧಾರಾನಿ ಅವರು ತಮಿಳು ಸೇರಿದಂತೆ ಅದೆಷ್ಟು ಬ್ಯುಸಿ ಆಗಿದ್ದರು ಎಂದರೆ, ಈ ಸಿನಿಮಾಗೆ ಅದೆಷ್ಟೇ ಕಾದರೂ ಸುಧಾರಾಣಿ ಡೇಟ್ಸ್ ಸಿಗಲೇ ಇಲ್ಲ. ಆಗ ಆ ಜಾಗಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಅವರು ಆಯ್ಕೆ ಮಾಡಿದ್ದು ನಟಿ ಪ್ರೇಮಾರನ್ನು.
ಹೌದು, ಮುಂದಿನ ಕಥೆ ನಿಮಗೆಲ್ಲಾ ಗೊತ್ತು. ಆ ಪಾತ್ರದಲ್ಲಿ ಅಮೋಘ ನಟನೆಯ ಮೂಲಕ ನಟಿ ಪ್ರೇಮಾ ಮಿಂಚಿದ್ದು, ಅವರಿಗೆ ಆ ರೋಲ್‌ಗೆ ಅವಾರ್ಡ್ ಕೂಡ ಸಿಕ್ಕಿದ್ದು ಈಗ ಇತಿಹಾಸ. ಆದರೆ, ಆ ಪಾತ್ರವನ್ನು ಪ್ರೇಮಾ ಬದಲು ಮೊದಲ ಆಯ್ಕೆ ಸುಧಾರಾಣಿಯವರೇ ಮಾಡಿದ್ದರೆ ಹೇಗಿರುತ್ತಿತ್ತು? ಅದನ್ನೀಗ ಕಲ್ಪಿಸಿಕೊಳ್ಳಲೂ ಆಗದು. ಏಕೆಂದರೆ, ಪ್ರೇಮಾ ಆ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ ಬಳಿಕ ಬರೋಬ್ಬರಿ ಒಂದು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದೂ ಆಗಿಹೋಗಿದೆ. ಇವಿಷ್ಟು ಓಂ ಸಿನಿಮಾ ಹಾಗೂ ಸುಧಾರಾಣಿ-ಪ್ರೇಮಾ ಹಾಗೂ ಪಾರ್ವತಮ್ಮನವರ ಕಥೆ..!