Manasagide Movie: ಫೆ.25ಕ್ಕೆ ವಿಭಿನ್ನ ತ್ರಿಕೋನ ಪ್ರೇಮಕಥೆಯುಳ್ಳ ಸಿನಿಮಾ ರಿಲೀಸ್!

By Kannadaprabha News  |  First Published Feb 21, 2022, 12:30 PM IST

ಮಕ್ಕಳನ್ನು ಹೀರೋ ಮಾಡಲು ಅಪ್ಪನೇ ನಿರ್ಮಾಪಕನಾಗುವುದು ಸಹಜ. ಆದರೆ, ತನ್ನ ಮಗನ ಚಿತ್ರಕ್ಕೆ ತಾವೇ ನಿರ್ಮಾಪಕರಾಗುವ ಜತೆಗೆ ಕತೆ ಬರೆದಿರುವುದು ವಿಶೇಷ. ಹೀಗೆ ಮೊದಲ ಬಾರಿಗೆ ಮಗನ ಚಿತ್ರಕ್ಕೆ ಕತೆ ಬರೆದು ಇವರು ರೂಪಿಸಿರುವ ಸಿನಿಮಾ ‘ಮನಸಾಗಿದೆ’.


ಮಕ್ಕಳನ್ನು ಹೀರೋ ಮಾಡಲು ಅಪ್ಪನೇ ನಿರ್ಮಾಪಕನಾಗುವುದು ಸಹಜ. ಆದರೆ, ತನ್ನ ಮಗನ ಚಿತ್ರಕ್ಕೆ ತಾವೇ ನಿರ್ಮಾಪಕರಾಗುವ ಜತೆಗೆ ಕತೆ ಬರೆದಿರುವುದು ವಿಶೇಷ. ಹೀಗೆ ಮೊದಲ ಬಾರಿಗೆ ಮಗನ ಚಿತ್ರಕ್ಕೆ ಕತೆ ಬರೆದು ಇವರು ರೂಪಿಸಿರುವ ಸಿನಿಮಾ ‘ಮನಸಾಗಿದೆ’ (Manasagide). ಚಿತ್ರಕ್ಕೆ ಕತೆ ಬರೆದು ನಿರ್ಮಾಣ ಮಾಡಿರುವುದು ಚಂದ್ರಶೇಖರ್ (Chandrashekar) ಅವರು. ಇದೇ ಫೆಬ್ರವರಿ 25ಕ್ಕೆ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯ ಆಗುತ್ತಿರುವುದು ಅಭಯ್ (Abhay). ಮೇಘಾಶ್ರೀ (Meghasree), ಅತಿರಾ (Athira) ಚಿತ್ರದ ನಾಯಕಿಯರು. ಶ್ರೀನಿವಾಸ್ ಶಿಡ್ಲಘಟ್ಟ (Srinivas Siddlaghatta) ಅವರು ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. 

ಚಿತ್ರದ ಹಾಡು ಹಾಗೂ ಟ್ರೈಲರ್ (Trailer) ಬಿಡುಗಡೆ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇದೇ ಉತ್ಸಾಹದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಮಾನಸ ಹೊಳ್ಳ ಸಂಗೀತ, ಶಂಕರ್ ಕ್ಯಾಮೆರಾ ಹಿಡಿದ್ದಾರೆ. ‘ನಾನೇ ಕತೆ ಬರೆಯಕ್ಕೆ ಕಾರಣ ನನ್ನ ಮಗ ಈ ಚಿತ್ರದ ನಾಯಕನಾಗಿರುವುದು. ಮಕ್ಕಳಿಗೆ ಏನು ಬೇಕು ಎಂಬುದು ಹೆತ್ತವರಿಗೆ ಗೊತ್ತಿರುತ್ತದೆ. ಹೀಗಾಗಿ ಕಾಲೇಜು ಓದುತ್ತಿರುವ ನನ್ನ ಮಗ ಯಾವ ರೀತಿ ಕತೆ ಮೂಲಕ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದರೆ ಚೆನ್ನಾಗಿರುತ್ತದೆ ಎಂದು ಯೋಚನೆ ಮಾಡಿ ಈ ಚಿತ್ರಕ್ಕೆ ಕತೆ ರೂಪಿಸಿದ್ದೇನೆ. ನನ್ನದು ಇದು ಮೂರನೇ ಸಿನಿಮಾ. ಹೀಗಾಗಿ ಚಿತ್ರರಂಗದ ಅನುಭವ ಇದೆ.

Latest Videos

Prabhas-Amitabh Bachchan: 'ಪ್ರಾಜೆಕ್ಟ್​​ ಕೆ' ಶೂಟಿಂಗ್ ಬಳಿಕ ಪರಸ್ಪರ ಹೊಗಳಿಕೊಂಡ ಪ್ರಭಾಸ್-ಅಮಿತಾಭ್

ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಶ್, ಪುನೀತ್‌ರಾಜ್‌ಕುಮಾರ್, ಶಿವರಾಜ್ ಕುಮಾರ್, ಸುದೀಪ್ ಹೀಗೆ ಚಿತ್ರರಂಗದ ಬಹುತೇಕ ಹೀರೋಗಳ ಸಿನಿಮಾಗಳನ್ನು ನೋಡುತ್ತಿದ್ದವನು ನಾನು. ದೊಡ್ಡ ದೊಡ್ಡ ಕಲಾವಿದರ ಚಿತ್ರಗಳನ್ನು ನೋಡಿಕೊಂಡು ಬರುತ್ತಿದ್ದ ನನಗೆ ಈಗ ಚಿತ್ರರಂಗಕ್ಕೆ ಬರುತ್ತಿರುವ ನನ್ನ ಮಗನಿಗೆ ವಿಶೇಷವಾದ ಕತೆ ಮಾಡಬೇಕು ಎನ್ನುವ ಯೋಚನೆಯಲ್ಲಿ ‘ಮನಸಾಗಿದೆ’ ಚಿತ್ರಕ್ಕೆ ಕತೆ ಮಾಡಿದ್ದೇನೆ. ಇಲ್ಲಿ ಕತೆಯೇ ಹೀರೋ. ನಾನು ಮಾಡಿದ ಕತೆಯನ್ನು ಶ್ರೀನಿವಾಸ್ ಶಿಡ್ಲಘಟ್ಟ ಅವರು ತುಂಬಾ ಚೆನ್ನಾಗಿ ಸ್ಕ್ರೀನ್ ಮೇಲೆ ತಂದಿದ್ದಾರೆ. ಫೆ.25ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಚಿತ್ರವನ್ನು ನೋಡಿ ಎಲ್ಲರು ಬೆಂಬಲಿಸಿ’ ಎಂದು ಮನವಿ ಮಾಡಿಕೊಳ್ಳುತ್ತಾರೆ ನಿರ್ಮಾಪಕ ಚಂದ್ರಶೇಖರ್ ಅವರು. 



ಎಲ್ಲರೂ ಒಳ್ಳೇ ಮನಸಿಟ್ಟು ಈ ಸಿನಿಮಾ ಮಾಡಿದ್ದೇವೆ, ಖಂಡಿತ ಗೆದ್ದೇ ಗೆಲ್ತೀವಿ ಎನ್ನುವ ಭರವಸೆಯಿದೆ. ಹೆಸರೇ ಹೇಳುವ ಹಾಗೆ ಇದೊಂದು ಲವ್ ಸಬ್ಜೆಕ್ಟ್ ಆದರೂ ಬೇರೆ ಥರದಲ್ಲಿ ಕಥೆ ನಿರೂಪಿಸುವ ಪ್ರಯತ್ನ ಮಾಡಿದ್ದೇವೆ, ಈವರೆಗೆ ಬಂದ ಎಲ್ಲ ಲವ್ ಸ್ಟೋರಿಗಳನ್ನು ಬಿಟ್ಟು ಹೊಸದಾದ ಕಂಟೆಂಟ್ ಈ ಚಿತ್ರದಲ್ಲಿದೆ ತಣ್ಣನೆಯ ಕ್ರೌರ್ಯ, ಮಿಸ್ ಅಂಡರ್‌ಸ್ಟಾಂಡಿಂಗ್ ಕಥೆಯೂ ಇದೆ. ಇಲ್ಲಿ ಯಾವುದೇ ವಿಲನ್ ಇಲ್ಲ, ಕ್ಲೈಮ್ಯಾಕ್ಸ್ ನಲ್ಲಿ ನಾಯಕ ತೆಗೆದುಕೊಳ್ಳುವ ದೃಡ ನಿರ್ಧಾರ ಎಲ್ಲಾ ರೀತಿಯ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ, ಮೊದಲು ನಾವೇನು ಅಂದುಕೊಂಡಿದ್ದೆವೋ ಅದು ತನ್ನಷ್ಟಕ್ಕೇ ತಾನೇ ಮಾಡಿಸಿಕೊಂಡು ಹೋಯಿತು, ಅದೂ ಚಿತ್ರಕ್ಕೆ ಪ್ಲಸ್ ಆಗಿದೆ.

'ಇರುವುದೆಲ್ಲವ ಬಿಟ್ಟು' ಚಿತ್ರತಂಡದೊಂದಿಗೆ ಹೊಸ ಸಿನಿಮಾ ಒಪ್ಪಿಕೊಂಡ Meghana Raj!

ಸಿನಿಮಾ ಚೆನ್ನಾಗಿ ಬರಬೇಕೆಂದರೆ ಬಜೆಟ್ ಗಣನೆಗೆ ತೆಗೆದುಕೊಳ್ಳಬಾರದೆಂದು ನಿರ್ಮಾಪಕರೇ ಹೇಳಿದ್ದರು, ಥ್ರಿಲ್ಲರ್ ಮಂಜು ಅವರು ನೀವು ಟೈಟಲ್‌ನಲ್ಲೇ ಗೆದ್ದಿದ್ದೀರಿ ಎಂದು ಆರಂಭದಿಂದಲೂ ನಮ್ಮ ಬೆನ್ನುತಟ್ಟುತ್ತಲೇ ಬಂದರು, ನಮ್ಮ ಬಜೆಟ್‌ಗೆ ತಕ್ಕಂತೆ ವಿಶೇಷವಾದ ಆಕ್ಷನ್ ಸೀನ್‌ಗಳನ್ನು ಮಾಡಿಕೊಟ್ಟರು ಎಂದು ಚಿತ್ರದಲ್ಲಿ ಕೆಲಸಮಾಡಿದ ತಂತ್ರಜ್ಞರೆಲ್ಲರ ಬಗ್ಗೆ ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟ ಹೇಳಿದರು. ಆರಂಭದಿಂದ ನನಗ ತಂದೆಯೇ ಬ್ಯಾಕ್‌ಬೋನ್ ಆಗಿ ನಿಂತರು, ಈಗ ಜನರ ಅಭಿಪ್ರಾಯಕ್ಕಾಗಿ ಕಾದಿದ್ದೇನೆ ಎಂದು ಚಿತ್ರದ ನಾಯಕ ಅಭಯ್ ತಿಳಿಸಿದರು.
 

click me!