
ಕೊರೋನಾ ವೈರಸ್ (Coronavirus) ಆತಂಕದ ನಡುವೆಯೂ ಬಿಡುಗಡೆಯಾಗಿದ್ದ 'ನೆನಪಿರಲಿ' ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ನಟನೆಯ 'ಪ್ರೇಮಂ ಪೂಜ್ಯಂ' (Premam Poojyam) ಸಿನಿಮಾ ಶತದಿನೋತ್ಸವ ಆಚರಿಸಿದೆ. ಹೌದು! 'ಲೈಫ್ ಜತೆ ಒಂದ್ ಸೆಲ್ಫಿ' (Life Jothe Ond Selfie) ಸಿನಿಮಾದ ನಂತರ ನೆನಪಿರಲಿ ಪ್ರೇಮ್ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಮುಖ್ಯವಾಗಿ ಪ್ರೇಮ್ ಅವರು ತಮ್ಮ 25ನೇ ಚಿತ್ರವು ವಿಶೇಷವಾಗಿರಬೇಕು ಎಂದು ಅಳೆದುತೂಗಿ 'ಪ್ರೇಮಂ ಪೂಜ್ಯಂ' ಚಿತ್ರವನ್ನು ಒಪ್ಪಿಕೊಂಡಿದ್ದರು. ಇದೀಗ ಈ ಚಿತ್ರವು 100 ದಿನಗಳನ್ನು ಪೂರೈಸಿದೆ.
ಈ ಬಗ್ಗೆ ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ '100 ದಿನಗಳ ತುಂಬು ಹೃದಯದ ಪ್ರೀತಿಯನ್ನು ಕೊಟ್ಟ ಅಭಿಮಾನಿಗಳಿಗೆ, ಚಿತ್ರ ಪ್ರೇಮಿಗಳಿಗೆ, ಮಾಧ್ಯಮಕ್ಕೆ, ಚಿತ್ರರಂಗಕ್ಕೆ ಹಾಗೂ ನನ್ನನ್ನು ನನ್ನ ಸಿನಿಮಾಗಳನ್ನು ಪ್ರೀತಿಸುವ ಮನಸುಗಳಿಗೆ ಧನ್ಯವಾದಗಳು. ಲವ್ ಯೂ, ಸದಾ ನೆನಪಿರಲಿ ಪ್ರೇಮ್... ಪ್ರೇಮಂ ಪೂಜ್ಯಂ ಎಂದು ಬರೆದುಕೊಂಡು ಚಿತ್ರದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಪ್ರೇಮ್ ಚಿತ್ರರಂಗಕ್ಕೆ ಬಂದು 20 ವರ್ಷಗಳು ಪೂರೈಸಿದ ಸಂಭ್ರಮದಲ್ಲಿರುವಾಗ 'ಪ್ರೇಮಂ ಪೂಜ್ಯಂ' ನೂರು ದಿನಗಳ ಪ್ರದರ್ಶನ ಕಂಡಿದ್ದು, ಅವರ ಸಂತಸವನ್ನು ಇಮ್ಮಡಿಗೊಳಿಸಿದೆ.
Premam Poojyam 2: ಪ್ರೇಮಿಗಳ ದಿನದಂದು ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಚಿತ್ರಕ್ಕೆ ಚಾಲನೆ
'ಜೀವನದಲ್ಲಿ ಕಲಿತಿರುವ ಮೊದಲ ದೊಡ್ಡ ಪಾಠ ತಾಳ್ಮೆ (Patience). ನಮಗೆ ಬಂದದ್ದನ್ನು ಒಪ್ಪಿಕೊಳ್ಳಬೇಕು. ರಿಯಾಲಿಟಿಯನ್ನು ಒಪ್ಪಿಕೊಳ್ಳಬೇಕು. ಯಶಸ್ಸಿನಲ್ಲಿ ಹಾರಿ ತೇಲುವುದಕ್ಕೆ ಆಗುವುದಿಲ್ಲ ಸೋಲುಗಳ ಬಗ್ಗೆ ಡಿಪ್ರೆಸ್ (Depress) ಮಾಡಿಕೊಳ್ಳುವುದಕ್ಕೆ ಆಗೋಲ್ಲ. ನಾನು ಸಮಯಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ದರೆ ಇಲ್ಲಿವರೆಗೂ ಬರುವುದಕ್ಕೆ ಆಗುತ್ತಿರಲಿಲ್ಲ. ನಾನು ಎಲ್ಲವನ್ನೂ ತುಂಬಾನೇ ಕೂಲ್ (Cool) ಆಗಿ ಒಪ್ಪಿಕೊಳ್ಳುತ್ತಿರುವೆ. ಹೀಗಾಗಿ ನಾನು ಸಂತೋಷವಾಗಿರುವೆ ಹಾಗೂ ಆರೋಗ್ಯವಾಗಿರುವೆ' ಎಂದು ಪ್ರೇಮ್ ಇತ್ತೀಚೆಗಷ್ಟೇ ತಿಳಿಸಿದ್ದರು.
'ನನಗೆ ಪ್ರತಿಯೊಂದು ಸಿನಿಮಾನೂ ತುಂಬಾನೇ ಕ್ಲೋಸ್. ನೆನಪಿರಲಿ (Nenapirali) ನನ್ನ ಎರಡನೇ ಸಿನಿಮಾ ಅದೇ ನನಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ನನ್ನ ಮೊದಲ ಯಶಸ್ಸು ನನ್ನ ಮನಸ್ಸಿನಲ್ಲಿ ಸ್ಪೆಷಲ್ ಜಾಗ ಪಡೆದುಕೊಳ್ಳುತ್ತದೆ. ಈ ಸಿನಿಮಾ ನನಗೆ ಅವಾರ್ಡ್ (Best actor Award) ತಂದುಕೊಟ್ಟಿತ್ತು. ನನ್ನ ಹೆಸರಿಗೆ ನೆನಪಿರಲಿ ಸೇರಿಕೊಂಡಿತ್ತು. ಸಿನಿ ವೀಕ್ಷಕರಲ್ಲಿ ನನ್ನ ಬಗ್ಗೆ ಒಂದು ಇಮೇಜ್ ಸೆಟ್ ಮಾಡಿತ್ತು. ರೊಮ್ಯಾನ್ಸ್ (Romance) ಹೊರತು ಪಡಿಸಿ ಬೇರೆ ಕಥೆಗಳನ್ನು ಒಪ್ಪಿಕೊಳ್ಳುವುದಕ್ಕೆ ನೋಡುತ್ತಿರುವೆ. ವಿಭಿನ್ನ ಮತ್ತು ವಿಶಿಷ್ಠ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ. ಇದು ನನ್ನ ಹೊಸ ಜರ್ನಿ ಹೊಸ ಸೀಸನ್ ಆಗುತ್ತದೆ. ನೀವು ಹೊಸ ಪ್ರೇಮ್ ನೋಡಬಹುದು' ಎಂದಿದ್ದಾರೆ ಪ್ರೇಮ್.
Puneeth Rajkumar: ಪ್ರತಿವರ್ಷ ಜೊತೆಯಾಗಿ ಶಬರಿಮಲೆಗೆ ಹೋಗ್ತಿದ್ರು ಪ್ರೇಮ್-ಅಪ್ಪು
ಇನ್ನು 'ಪ್ರೇಮಂ ಪೂಜ್ಯಂ' ಚಿತ್ರಕ್ಕೆ ವೈದ್ಯ ಮತ್ತು ಪ್ರಾಧ್ಯಾಪಕ ರಾಘವೇಂದ್ರ ಬಿ.ಎಸ್ (Dr. Raghavendra BS) ನಿರ್ದೇಶಿಸುವುದರ ಜೊತೆಗೆ, ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಸಹ ಮಾಡಿದ್ದಾರೆ. ನಾಯಕಿಯಾಗಿ ಬೃಂದಾ ಆಚಾರ್ಯ (Brunda Acharya) ನಟಿಸಿದ್ದರು. ಜೊತೆಗೆ ಮಾಸ್ಟರ್ ಆನಂದ್ (Master Anand), ಸಾಧುಕೋಕಿಲ (Sadhu Kokila), ಐಂದ್ರಿತಾ ರೇ (Aindrita Ray), ಸುಮನ್ (Suman), ಅನು ಪ್ರಭಾಕರ್ (Anu Prabhakar), ತಪಸ್ವಿನಿ (Tapaswini) ಸೇರಿದಂತೆ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ (T.S.Nagabharana) ಸಹ ತೆರೆ ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.