ನಮಗೆಲ್ಲ ಗೊತ್ತಿರುವ ಸಮಸ್ಯೆಯನ್ನೇ ಒಂದು ಗಟ್ಟಿ ಕಥೆಯನ್ನಾಗಿಸಿಕೊಂಡು ಚಿತ್ರಕಥೆ ಹೆಣೆದಿರುವ ಸಿನಿಮಾದಲ್ಲಿ ತಂದೆ ಮತ್ತು ಮಗನ ಬಾಂಧವ್ಯ ತಿಳಿಸುವ ಪ್ರಯತ್ನವೂ ಆಗಿದೆ. ಸಂಕೇಶ್ವರದ ಅಳಿಯನಾಗಿರುವ ನನಗೂ ಈ ಊರಿಗೂ ಅವಿನಾಭಾವ ಸಂಬಂಧ ಇದ್ದು, ಇಲ್ಲಿಯ ಜನರ ಎಂದಿನಂತೆ ಕೈ ಹಿಡಿಯುತ್ತಾರೆಂಬ ನಿರೀಕ್ಷೆ ಇದೆ ಎಂದ ನಿರ್ದೇಶಕ ಶ್ರೀಕಾಂತ ಕಟಗಿ
ಸಂಕೇಶ್ವರ(ಜು.20): ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಚಿತ್ರೀಕರಣಗೊಂಡಿರುವ ಕ್ಷೇತ್ರಪತಿ ಚಿತ್ರದಲ್ಲಿ ಶೇ.90ರಷ್ಟು ಕಲಾವಿದರು ಉತ್ತರ ಕರ್ನಾಟಕದವರೇ ಇದ್ದು, ಈ ಭಾಗದ ಸಂಸ್ಕೃತಿ, ಸೊಗಡು ಮತ್ತು ಭಾಷೆಯೊಂದಿಗೆ ಇಲ್ಲಿಯ ರೈತರ ಹೋರಾಟವೊಂದರ ಕಥೆಯಾಗಿ ಕ್ಷೇತ್ರಪತಿ ತೆರೆಮೇಲೆ ಬರಲಿರುವುದಾಗಿ ನಿರ್ದೇಶಕ ಶ್ರೀಕಾಂತ ಕಟಗಿ ಹೇಳಿದರು.
ಪಟ್ಟಣದಲ್ಲಿ ಕ್ಷೇತ್ರಪತಿ ಚಿತ್ರದ ಪ್ರಚಾರಾರ್ಥ ಬಂದಿದ್ದ ಚಿತ್ರತಂಡ ಪಟ್ಟಣದ ಬೀರೇಶ್ವರ ಶಿಕ್ಷಣ ಸಂಸ್ಥೆಯ ಕೃಷ್ಣಾ ಆಯುರ್ವೇದಿಕ ಮೆಡಿಕಲ್ ಕಾಲೇಜಿನಲ್ಲಿ ಪ್ರಚಾರದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆಲ್ಲ ಗೊತ್ತಿರುವ ಸಮಸ್ಯೆಯನ್ನೇ ಒಂದು ಗಟ್ಟಿ ಕಥೆಯನ್ನಾಗಿಸಿಕೊಂಡು ಚಿತ್ರಕಥೆ ಹೆಣೆದಿರುವ ಸಿನಿಮಾದಲ್ಲಿ ತಂದೆ ಮತ್ತು ಮಗನ ಬಾಂಧವ್ಯ ತಿಳಿಸುವ ಪ್ರಯತ್ನವೂ ಆಗಿದೆ. ಸಂಕೇಶ್ವರದ ಅಳಿಯನಾಗಿರುವ ನನಗೂ ಈ ಊರಿಗೂ ಅವಿನಾಭಾವ ಸಂಬಂಧ ಇದ್ದು, ಇಲ್ಲಿಯ ಜನರ ಎಂದಿನಂತೆ ಕೈ ಹಿಡಿಯುತ್ತಾರೆಂಬ ನಿರೀಕ್ಷೆ ಇದೆ ಎಂದರು.
ಹಾಲುಂಡ ತವರು ಖ್ಯಾತಿ ಸಿತಾರಾ ಎಲ್ಲಿ ಹೋದರು? ಇದೀಗ ಫೋಟೋ ವೈರಲ್!
ಚಿತ್ರದ ನಾಯಕ ನಟ ನವೀನ ಶಂಕರ ಮಾತನಾಡಿ, ಒಂದು ತಿಂಗಳುಗಳ ಕಾಲ ಸಂಕೇಶ್ವರ ಪಟ್ಟಣದಲ್ಲಿ ಜರುಗಿದ ಗುರುದೇವ ಹೋಯ್ಸಳ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇಲ್ಲಿಯ ಜನ ನೀಡಿದ ಸಹಕಾರ, ಪ್ರೀತಿ ಹಾಗೂ ಚಿತ್ರ ಬಿಡುಗಡೆ ನಂತರ ಕುಟುಂಬ ಸಮೇತರಾಗಿ ಚಿತ್ರಮಂದಿರಗಳ ಬಂದು ವೀಕ್ಷಿಸಿದ್ದಲ್ಲದೇ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ ರೀತಿ ನೆನೆದ ಅವರು ಇದೇ 2023ರ ಆಗಷ್ಟ18ಕ್ಕೆ ಕ್ಷೇತ್ರಪತಿ ಬಿಡುಗಡೆಯಾಗುತ್ತಿದ್ದು, ಕಳೆದ ಬಾರಿಯಂತೆ ಹರಸಿ ಹಾರೈಸುವಂತೆ ಕೋರಿದರು.
ಚಿತ್ರದ ನಾಯಕಿ ನಟಿ ಅರ್ಚನಾ ಜೋಯಿಸ್ ತಾವು ಚಿತ್ರದಲ್ಲಿ ಪತ್ರಕರ್ತೆಯಾಗಿ ಪಾತ್ರನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ರಮ್ಯಾಗೆ ತಪ್ಪು ದಾರಿ ತೋರಿಸಿದ್ಯಾರು? ರಾಜ್ ಬಿ ಶೆಟ್ಟಿ ಎಲ್ಲಿ ಬೆಂಕಿ ಬೀಳತ್ತೋ ನೋಡ್ಕೋಳೋಣ ಎಂದಿದ್ಯಾಕೆ?
ಕಾಲೇಜು ಅಘೋಷಿತ ರಜೆ:
ಕೃಷ್ಣಾ ಆಯುರ್ವೇದಿಕ ಮೆಡಿಕಲ್ ಕಾಜೇಜ್ ಚೇರ್ಮನ್ ಡಾ.ಜಯಪ್ರಕಾಶ ಕರಜಗಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಿಂದ ಇನ್ನಷ್ಟುನಿರ್ದೇಶಕರು, ಕಲಾವಿದರು, ನಿರ್ಮಾಪಕರು ಚಿತ್ರರಂಗಕ್ಕೆ ಹೋಗಿ ನಮ್ಮ ಭಾಗದ ಕಥೆಗಳನ್ನು ಹೇಳುವಂತಾಗಲಿ, ಇಲ್ಲಿಯ ಪ್ರತಿಭೆಗಳು ಬೆಳಕಿಗೆ ಬರುವಂತಾಗಲಿ. ಅಂಥವರಿಗೆ ಯಾವತ್ತೂ ನಮ್ಮ ಸಹಕಾರ ಪ್ರೋತ್ಸಾಹ ಇರುತ್ತದೆ ಎಂದ ಅವರು ಚಿತ್ರ ಬಿಡುಗಡೆ ದಿನ ಕಾಲೇಜಿಗೆ ಅಘೋಷಿತ ರಜೆ ಇದ್ದು ವಿದ್ಯಾರ್ಥಿಗಳ ಸಮ್ಮುಖದಲ್ಲೇ ಮಾಸ್ ಬಂಕ್‌ಗೆ ಹಸಿರು ನಿಶಾನೆ ತೋರಿಸಿದರು.
ಕ್ಷೇತ್ರಪತಿ ಚಿತ್ರ ತಂಡದಿಂದ ಪಟ್ಟಣದ ಆದ್ಯ ನಿಜಲಿಂಗೇಶ್ವರ ಶಿಕ್ಷಣ ಸಂಸ್ಥೆ, ಎಸ್‌ಡಿವಿಎಸ್ ಸಂಘದ ಎಲ್.ಕೆ.ಖೋತ್, ಎಐಎಂಆರ್ ಹಾಗೂ ಬೆಳಕು ಸ್ಟಡಿ ಸೆಂಟರ್‌ಗಳಲ್ಲಿ ಪ್ರಚಾರ ಕೈಗೊಳ್ಳಲಾಯಿತು. ಕೃಷ್ಣಾ ಅರ್ಯುವೇದಿಕ ಮೆಡಿಕಲ್ ಕಾಲೇಜ್ ಕಾರ್ಯದರ್ಶಿ ಸಂತೋಷ ಖಜ್ಜನ್ನವರ, ಪ್ರಾಚಾರ್ಯ ಡಾ.ಮಂಜುನಾಥ ಗವಿಮಠ, ಉದ್ಯಮಿ ಸಚಿನ್ ಹೆಗಡೆ, ನಾಗೇಶ ಕುಲ್ಲೋಳಿ, ಸಾಗರ ಕ್ವಳ್ಳಿ ಸೇರಿದಂತೆ ಇತರರು ಇದ್ದರು.