ಶ್ವಾನ ಪ್ರೀತಿಯಿಂದ ಗಳಿಸಿದ ಹಣವನ್ನು ಶ್ವಾನಕ್ಕೇ ಅರ್ಪಿಸಲು ಮುಂದಾದ ಸಿಂಪಲ್ ಸ್ಟಾರ್

By Suvarna News  |  First Published Jul 6, 2022, 9:08 AM IST
  • 777 ಚಾರ್ಲಿ ಒಟ್ಟು ಗಳಿಕೆ ರು.150 ಕೋಟಿ
  • ಸುಮಾರು ರು.5 ಕೋಟಿ ನಿರ್ಗತಿಕ ಶ್ವಾನಗಳ ಕ್ಷೇಮಕ್ಕೆ ಸಮರ್ಪಣೆ

- 777 ಚಾರ್ಲಿ ಸಿನಿಮಾ 450ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ 25 ದಿನ ಪೂರೈಸಿದೆ. ವಿಶ್ವಾದ್ಯಂತ ಥಿಯೇಟರ್‌ಗಳಿಂದ, ಸ್ಯಾಟಲೈಟ್‌-ಡಿಜಿಟಲ್‌ ಹಕ್ಕುಗಳಿಂದ ಚಿತ್ರತಂಡ ಗಳಿಸಿರುವ ಮೊತ್ತ ಆಸುಪಾಸು ರು.150 ಕೋಟಿ.

- ನಿರ್ಮಾಪಕರಿಗೆ ಬಂದ ಲಾಭ ಅಂದಾಜು ರು.90 ಕೋಟಿಯಿಂದ ರು.100 ಕೋಟಿ.

Tap to resize

Latest Videos

- ಲಾಭದಲ್ಲಿ ಶೇ.5ರಷ್ಟುಎಂದರೆ ಸರಿ ಸುಮಾರು ರು.5 ಕೋಟಿ ಹಣ ನಿರ್ಗತಿಕ ಶ್ವಾನ ಮತ್ತಿತರ ಮೂಕಪ್ರಾಣಿಗಳ ರಕ್ಷಣೆ, ಪೋಷಣೆಗೆ ಕೆಲಸ ಮಾಡುತ್ತಿರುವ ಎನ್‌ಜಿಓಗಳಿಗೆ ಸಮರ್ಪಣೆ.

ಮೊಬೈಲಲ್ಲಿ ಸಿನಿಮಾ ನೋಡ್ಬೇಡಿ,ನನಗೆ ಪೈರಸಿ ಅಂದ್ರೆನೇ ಗೊತ್ತಿಲ್ಲ: ಶಾರ್ವರಿ

- ಗಳಿಕೆಯ ಶೇ.10ರಷ್ಟುರಕ್ಷಿತ್‌ ಶೆಟ್ಟಿಯವರನ್ನು ಹೊರತು ಪಡಿಸಿ ಸಿನಿಮಾಗಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಬೋನಸ್‌ ರೂಪದಲ್ಲಿ ಸಂದಾಯ.

- 777 ಚಾರ್ಲಿ ಚಿತ್ರಕ್ಕೆ ಚೀನಾ, ರಷ್ಯಾಗಳಿಂದ ಡಬ್ಬಿಂಗ್‌ ಬೇಡಿಕೆ ಬಂದಿದೆ. ಹಿಂದಿಯಲ್ಲಿ ಸಿನಿಮಾ ಬಿಡುಗಡೆಯಾಗಿದ್ದರೂ ರಿಮೇಕ್‌ ಹಕ್ಕುಗಳಿಗೆ ಬೇಡಿಕೆ ಇದೆ.

ಇವಿಷ್ಟು‘777 ಚಾರ್ಲಿ’ ಸಿನಿಮಾದ ಗೆಲುವಿನ ಲೆಕ್ಕಾಚಾರ. ಗೆದ್ದ ಸಂತೋಷದಲ್ಲಿ ಚಿತ್ರತಂಡ ಒಟ್ಟು ಸೇರಿ ಕೇಕ್‌ ಕತ್ತರಿಸಿ ಸಂಭ್ರಮಿಸಿತು. ಈ ಸಂದರ್ಭದಲ್ಲೇ ಚಿತ್ರತಂಡ ಲೆಕ್ಕಾಚಾರಗಳನ್ನು ಪ್ರೇಕ್ಷಕರಿಗೆ ಮುಂದಿಟ್ಟಿತು. ಈ ಮೂಲಕ ನಿರ್ಮಾಪಕ ರಕ್ಷಿತ್‌ ಶೆಟ್ಟಿತಾನು ಸಿನಿಮಾ ಗೆದ್ದರೆ ಅದರ ಲಾಭದ ಪಾಲನ್ನು ನಿರ್ಗತಿಕ ಶ್ವಾನಗಳು ಉದ್ಧಾರಕ್ಕೆ ಬಳಸುತ್ತೇನೆ ಎಂಬ ಮಾತನ್ನು ಉಳಿಸಿಕೊಂಡಿದ್ದಾರೆ.

ಸಂಭ್ರಮಾಚರಣೆಯಲ್ಲಿ ಚಾರ್ಲಿ, ನಿರ್ದೇಶಕ ಕಿರಣ್‌ರಾಜ್‌, ನಾಯಕ ನಟಿ ಸಂಗೀತಾ ಶೃಂಗೇರಿ, ಬಾಲನಟಿ ಶಾರ್ವರಿ, ನಾಯಿ ತರಬೇತುದಾರ ಪ್ರಮೋದ್‌, ಸಂಗೀತ ನಿರ್ದೇಶಕ ನೊಬಿನ್‌ ಪೌಲ್‌, ವಿತರಕ ಕಾರ್ತಿಕ್‌ ಗೌಡ ಇದ್ದರು.

ನಾವು ಸಿನಿಮಾದಲ್ಲಿ ನಾಯಿಯನ್ನು ದತ್ತು ಪಡೆಯಿರು ಎಂಬ ಸಂದೇಶ ನೀಡಿದ್ದೇವೆ. ಬ್ರೀಡರ್‌ಗಳಿಂದ ಎಷ್ಟುತೊಂದರೆಯಾಗುತ್ತಿದೆ ಎಂದು ತಿಳಿಸಿದ್ದೇವೆ. ಆದರೂ ಅನೇಕ ಕಡೆಗಳಿಂದ ಲ್ಯಾಬ್ರಡಾರ್‌ ತಳಿಯನ್ನು ದುಡ್ಡು ಖರೀದಿ ಮಾಡುತ್ತಿರುವ ಸುದ್ದಿ ಬರುತ್ತಿದೆ. ಎಲ್ಲಾ ತಳಿಯ ನಾಯಿಗಳೂ ಒಂದೆ. ನೀವು ಪ್ರೀತಿ ತೋರಿಸಿದರೆ ಹತ್ತರಷ್ಟುಪ್ರೀತಿ ವಾಪಸ್‌ ಕೊಡುತ್ತವೆ. ಹಾಗಾಗಿ ಬ್ರೀಡ್‌ ನೋಡಬೇಡಿ, ಬಾಂಧವ್ಯ ನೋಡಿ. ನಾಯಿಗಳನ್ನು ಖರೀದಿಸಬೇಡಿ, ದತ್ತು ಪಡೆಯಿರಿ.

- ಕಿರಣ್‌ರಾಜ್‌

' 777 ಚಾರ್ಲಿ ನಿಮ್ಮನ್ನು ತಲುಪಿ 25 ದಿನಗಳು ಕಳೆದರೂ, ಎಂದಿನಂತೆ ನಿಮ್ಮಿಂದ ನಮಗೆ ಸಿಗುತ್ತಿರೋ ಪ್ರೀತಿ ಅನನ್ಯ. ಈ ಚಿತ್ರದಿಂದ ನಾವು ಗಳಿಸಿರುವ ಮೆಚ್ಚುಗೆ ಮತ್ತು ಮನ್ನಣೆಯಿಂದ ನಾವು ಅತ್ಯಂತ ಧನ್ಯರಾಗಿದ್ದೇವೆ. ಈ ಅಭೂತಪೂರ್ವ ಯಶಸ್ಸಿಗೆ ಬಮ್ಮ ತಂಡದ ಪರಿಶ್ರಮವಿದೆ. ಈ ಚಿತ್ರವನ್ನು ಯಶಸ್ವಿಯಾಗಿ ತೆರೆಗೆ ತರುವಲ್ಲಿ ಹಲವಾರು ರೀತಿಯಲ್ಲಿ ಶ್ರಮಿಸಿರುವ ಚಿತ್ರತಂಡದ ಜೊತೆಗೆ 777 ಚಾರ್ಲಿ ಗಳಿಸಿರುವ ಲಾಭದ ಶೇಕಡಾ 10ರಷ್ಟಯ ಹಂಚಿಕೊಳ್ಳಲು ನಾವು ನಿರ್ಧರಿಸಿದ್ದೇವೆ' ಎಂದು ಬರೆಯಲಾಗಿದೆ.

ಚಿತ್ರತಂಡದವರು ಸಮಯ ಮೀರಿ ಕೆಲಸ ಮಾಡಿದ್ದಾಗ ರಕ್ಷಿತ್ ಶೆಟ್ಟಿ ಒಂದು ಮಾತು ಕೊಟ್ಟಿದ್ದರು: ಕಿರಣ್ ರಾಜ್

'777 ಚಾರ್ಲಿ ಚಿತ್ರತಂಡಕ್ಕೆ ಸಾಕುಪ್ರಾಣಿಗಳ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಬೇಕಾದ ಪರಿಶ್ರಮ ಹಾಗೂ ಸೌಲಭ್ಯಗಳ ಬಗ್ಗೆ ಕಾಳಜಿ ಇದ್ದು ಈ ನಿಟ್ಟಿನಲ್ಲಿ ನಿರಾಶ್ರಿತ ಶ್ವಾನಗಳ ಹಾಗೂ  ಮೂಕಪ್ರಾಣಿಗಳ ರಕ್ಣೆ ಮತ್ತು ಪೋಷಣೆಗೆ ಸಮರ್ಪಿತವಾಗಿ ದೇಶಾದ್ಯಂತ ಕೆಲಸ ಮಾಡುತ್ತಿರುವ NGOಗಳಿಗೆ, 777 ಚಾರ್ಲಿ ಗಳಿಸಿರುವ ಲಾಭದ ಶೇಕಡಾ 5ರಷ್ಟು ತಲುಪಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ಈ ಅಳಿಲು ಸೇವೆ ಇನ್ನಿತ್ತರರಿಗೆ ಸ್ಫೂರ್ತಿಯಾಗಬಹುದು. ನಮ್ಮ ಜಗತ್ತನ್ನು ನಿಮ್ಮ ಪ್ರೀತಿಯಿಂದ ಬೆಳಗಿಸಿದಕ್ಕಾಗಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾಗಳು' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. 

777 ಚಾರ್ಲಿಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಣೆ: ನಟ ರಕ್ಷಿತ್‌ ಶೆಟ್ಟಿಅವರ ‘777 ಚಾರ್ಲಿ’ ಸಿನಿಮಾಗೆ ಜೂ.19ರಿಂದ ಆರು ತಿಂಗಳ ಅವಧಿಗೆ ಅನ್ವಯವಾಗುವಂತೆ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿನಿಮಾ ವೀಕ್ಷಿಸಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ಇದೀಗ ಸಿನಿಮಾ ನಿರ್ಮಾಪಕರೂ ಆದ ರಕ್ಷಿತ್‌ ಶೆಟ್ಟಿ ಅವರ ಮನವಿ ಮೇರೆಗೆ ಸಿನಿಮಾಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಮೂಲಕ ಆದೇಶ ಹೊರಡಿಸಿದ್ದಾರೆ. 

click me!